Site icon Vistara News

Northeast Assembly Election Result: ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾಗೆ ಗೆಲುವು; ಸಂಭ್ರಮಾಚರಣೆ ಶುರು

Northeast Assembly Election Result

#image_title

ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಹೆಚ್ಚಿನ ಮಹತ್ವ ಪಡೆದಿರುವ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ ಫಲಿತಾಂಶ (Northeast Assembly Election Result 2023) ಗುರುವಾರ (ಮಾರ್ಚ್‌ 2) ಪ್ರಕಟವಾಗಲಿದೆ. ಇಂದು ಬೆಳಗ್ಗೆ 8ಗಂಟೆಯಿಂದ ಮೂರು ರಾಜ್ಯಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಈ ಮೂರು ರಾಜ್ಯಗಳಲ್ಲಿ ನಡೆಯುತ್ತಿರುವ ಮತ ಎಣಿಕೆಯ ಸಮಗ್ರ ವರದಿ ಇಲ್ಲಿದೆ.

Lakshmi Hegde

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯೆ

ಮೇಘಾಲಯ, ನಾಗಾಲ್ಯಾಂಡ್​ ಮತ್ತು ತ್ರಿಪುರ ಚುನಾವಣೆಗಳ ಫಲಿತಾಂಶ 2024ರ ಲೋಕಸಭೆ ಚುನಾವಣೆ ಪ್ರತಿಬಿಂಬವೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ‘ಹಾಗೇನೂ ಇಲ್ಲ. ಇಲ್ಲಿನ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್​​ ಮತ್ತು ಇತರ ಜಾತ್ಯತೀತ ಪಕ್ಷಗಳನ್ನೇ ಬೆಂಬಲಿಸುತ್ತವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಆದ್ಯತೆ ನೀಡುತ್ತವೆ’ ಎಂದು ಹೇಳಿದರು.

Lakshmi Hegde

ನಾಗಾಲ್ಯಾಂಡ್​ನಲ್ಲಿ ಎನ್​​ಡಿಪಿಪಿ-ಬಿಜೆಪಿ ಮೈತ್ರಿಗೆ ಗೆಲುವು ಎಂದ ಡಿಸಿಎಂ

ನಾಗಾಲ್ಯಾಂಡ್​ನ ಕಳೆದ ವಿಧಾನಸಭಾ ಚುನಾವಣೆಗಿಂತಲೂ ಈ ಸಲದ ಚುನಾವಣೆಯಲ್ಲಿ ಎನ್​ಡಿಪಿಪಿ ಮತ್ತು ಬಿಜೆಪಿ ಮೈತ್ರಿಗೆ ಹೆಚ್ಚಿನ ಸೀಟ್​ಗಳು ಒಲಿಯಲಿವೆ ಎಂಬ ಭರವಸೆಯನ್ನು ನಾಗಾಲ್ಯಾಂಡ್​ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಯಾಂತುಂಗೊ ಪಟ್ಟೊನ್ ವ್ಯಕ್ತಪಡಿಸಿದ್ದಾರೆ. ಸಿಎಂ ನೈಫಿಯು ರಿಯೊ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದಾರೆ.

Lakshmi Hegde

ಸಬ್ರೂಮ್​​ನಲ್ಲಿ ಸಿಪಿಐ (ಎಂ) ಅಭ್ಯರ್ಥಿಗೆ ಮುನ್ನಡೆ

ತ್ರಿಪುರದ ಸಬ್ರೂಮ್​ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗಿಂತಲೂ ಸಿಪಿಐ (ಎಂ)ನ ಜಿತೇಂದ್ರ ಚೌಧರಿ ಮುಂದಿದ್ದಾರೆ. ತಮ್ಮ ಹತ್ತಿರದ ಪ್ರತಿಸ್ಪರ್ಧಿಯಿಂದ ಅವರು 16,176 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಮತ ಎಣಿಕೆ ಮುಂದುವರಿದಿದೆ.

Lakshmi Hegde

ಭದ್ರಕೋಟೆಯಲ್ಲೇ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ

ಮೇಘಾಲಯದ ದಕ್ಷಿಣ ತುರಾದಲ್ಲಿ ಎನ್​​ಪಿಪಿ ಮುಖ್ಯಸ್ಥ ಕಾನ್ರಾಡ್​ ಸಂಗ್ಮಾ ಮತ್ತು ಬಿಜೆಪಿ ಅಭ್ಯರ್ಥಿ ಬರ್ನಾರ್ಡ್ ಮಾರಾಕ್ ಅವರ ನಡುವೆ ನೆಕ್​ ಟು ನೆಕ್​ ಫೈಟ್​ ಇದೆ. ಇಲ್ಲಿ ಎನ್​​ಪಿಪಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು 44 ಮತಗಳಿಂದ ಮುನ್ನಡೆಯಲಿದ್ದಾರೆ. ಬರ್ನಾರ್ಡ್​ ಅವರು ತಮ್ಮದೇ ಭದ್ರಕೋಟೆಯಾದ ದಕ್ಷಿಣ ತುರಾ ಕ್ಷೇತ್ರದಲ್ಲಿ ಸದ್ಯ ಹಿನ್ನಡೆಯಲ್ಲಿದ್ದಾರೆ.

Lakshmi Hegde

11 ಗಂಟೆವರೆಗಿನ ಟ್ರೆಂಡ್​ ಹೀಗಿದೆ

ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯಗಳ ಮತ ಎಣಿಕೆಯಲ್ಲಿ ಇಂದು ಬೆಳಗ್ಗೆ 11 ಗಂಟೆವರೆಗೆ ತ್ರಿಪುರದಲ್ಲಿ ಬಿಜೆಪಿ 31, ನಾಗಾಲ್ಯಾಂಡ್​​ನಲ್ಲಿ ಎನ್​ಡಿಪಿಇಪಿ ಮತ್ತು ಮೈತ್ರಿ ಪಕ್ಷಗಳು 39 ಮತ್ತು ಮೇಘಾಲಯದಲ್ಲಿ ಎನ್​ಪಿಪಿ ಪಕ್ಷ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Exit mobile version