ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಹೆಚ್ಚಿನ ಮಹತ್ವ ಪಡೆದಿರುವ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ (Northeast Assembly Election Result 2023) ಗುರುವಾರ (ಮಾರ್ಚ್ 2) ಪ್ರಕಟವಾಗಲಿದೆ. ಇಂದು ಬೆಳಗ್ಗೆ 8ಗಂಟೆಯಿಂದ ಮೂರು ರಾಜ್ಯಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಈ ಮೂರು ರಾಜ್ಯಗಳಲ್ಲಿ ನಡೆಯುತ್ತಿರುವ ಮತ ಎಣಿಕೆಯ ಸಮಗ್ರ ವರದಿ ಇಲ್ಲಿದೆ.
ಅಪ್ಪನ ಸಮಾಧಿಗೆ ತೆರಳಿ, ನಮಿಸಿದ ಸಿಎಂ ಕಾನ್ರಾಡ್ ಸಂಗ್ಮಾ
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ತುರಾದಲ್ಲಿರುವ, ತಮ್ಮ ತಂದೆ ಪಿ.ಎ.ಸಂಗ್ಮಾ ಅವರ ಸಮಾಧಿಗೆ ಭೇಟಿ ಕೊಟ್ಟರು. ಈ ವೇಳೆ ಅವರ ತಾಯಿ ಸರೋದಿನಿ ಕೆ. ಸಂಗ್ಮಾ, ಸಹೋದರ ಜಮೇಸ್ ಸಂಗ್ಮಾ, ಸಹೋದರಿ ಅಗಾತಾ ಕೆ.ಸಂಗ್ಮಾ ಇದ್ದರು. ಪಿ.ಎ.ಸಂಗ್ಮಾ ಅವರು 1988ರಿಂದ 1990ರವರೆಗೆ ಮೇಘಾಲಯದ ಮುಖ್ಯಮಂತ್ರಿಯಾಗಿದ್ದರು.
#WATCH | Meghalaya's incumbent Chief Minister Conrad Sangma, along with his mother Soradini K Sangma, brother James Sangma and sister Agatha K Sangma, visits the grave of his father & former CM, PA Sangma in Tura on the day of counting of votes. pic.twitter.com/YroEdv8nhJ
— ANI (@ANI) March 2, 2023
ತ್ರಿಪುರದಲ್ಲಿ ಬಹುಮತದ ಗಡಿ ದಾಟಿದ ಬಿಜೆಪಿ
ತ್ರಿಪುರದಲ್ಲಿ ಬಿಜೆಪಿ ಪಕ್ಷ 32 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಒಟ್ಟು 60 ಕ್ಷೇತ್ರಗಳಿದ್ದು, ಮ್ಯಾಜಿಕ್ ನಂಬರ್ 31. ಅದನ್ನು ಬಿಜೆಪಿ ದಾಟಿದೆ. ಇನ್ನುಳಿದಂತೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿಕೂಟಗಳು 15 ಕ್ಷೇತ್ರಗಳಲ್ಲಿ ಮುಂದಿವೆ.
ಶ್ರೀಮಂತ ಅಭ್ಯರ್ಥಿಗೆ ಹಿನ್ನಡೆ
ಮೇಘಾಲಯದ ಮೈರಾಂಗ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಬಾಟ್ಸ್ಖೆಮ್ ರಿಂಟಾಥಿಯಾಂಗ್ ಅವರು ಮುನ್ನಡೆ ಸಾಧಿಸಿದ್ದಾರೆ. ಅತ್ಯಂತ ಶ್ರೀಮಂತ ಅಭ್ಯರ್ಥಿ ಆಗಿರುವ ಯುಡಿಪಿ ಪಕ್ಷದ ಮೆಟ್ಬಾ ಲಿಂಗ್ಡೋಹ್ಗೆ ಹಿನ್ನಡೆಯಾಗಿದೆ. ಇವರು ಮೇಘಾಲಯದ ವಿಧಾನಸಭಾ ಸ್ಪೀಕರ್ ಕೂಡ ಹೌದು.
ಮೇಘಾಲಯದ ಪಶ್ಚಿಮ ಶಿಲ್ಲಾಂಗ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ, ರಾಜ್ಯ ಬಿಜೆಪಿ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ಅವರು ತೀವ್ರ ಹಿನ್ನಡೆಯಲ್ಲಿದ್ದಾರೆ. ಇಲ್ಲಿ ಯುಡಿಪಿ ಅಭ್ಯರ್ಥಿ ಮುನ್ನಡೆಯಲ್ಲಿದ್ದು, ಎರಡನೇ ಸ್ಥಾನದಲ್ಲಿ ಎನ್ಪಿಪಿ ಅಭ್ಯರ್ಥಿ ಇದ್ದಾರೆ.
ಮೇಘಾಲಯದಲ್ಲಿ ಎನ್ಪಿಪಿ ಪಕ್ಷ ಮುನ್ನಡೆಯಲ್ಲಿದ್ದರೂ, 21-23 ಸೀಟ್ಗಳಲ್ಲೇ ಇದೆ. ಮ್ಯಾಜಿಕ್ 31ನ್ನು ಇನ್ನೂ ತಲುಪಿಲ್ಲ. ಇನ್ನು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ಗಳು ಸದಾ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.