ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಹೆಚ್ಚಿನ ಮಹತ್ವ ಪಡೆದಿರುವ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ (Northeast Assembly Election Result 2023) ಗುರುವಾರ (ಮಾರ್ಚ್ 2) ಪ್ರಕಟವಾಗಲಿದೆ. ಇಂದು ಬೆಳಗ್ಗೆ 8ಗಂಟೆಯಿಂದ ಮೂರು ರಾಜ್ಯಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಈ ಮೂರು ರಾಜ್ಯಗಳಲ್ಲಿ ನಡೆಯುತ್ತಿರುವ ಮತ ಎಣಿಕೆಯ ಸಮಗ್ರ ವರದಿ ಇಲ್ಲಿದೆ.
ತ್ರಿಪುರ ಉಪಮುಖ್ಯಮಂತ್ರಿಗೆ ಹಿನ್ನಡೆ
ತ್ರಿಪುರ ಚರಿಲಂ ಕ್ಷೇತ್ರದಲ್ಲಿ ತಿಪ್ರಾ ಮೋಥಾ ಅಭ್ಯರ್ಥಿ ಸುಬೋಧ್ ದೇಬ್ ಬರ್ಮಾ ಮುನ್ನಡೆ ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ, ಈಗಿನ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾಗೆ ಹಿನ್ನಡೆಯಾಗಿದೆ.
ತ್ರಿಪುರದಲ್ಲಿ ಬುಡಕಟ್ಟು ಜನಾಂಗದ ಬಾಹುಳ್ಯದ ಕ್ಷೇತ್ರಗಳಲ್ಲೆಲ್ಲ ಬಿಜೆಪಿ ಮುನ್ನಡೆ
ತ್ರಿಪುರ
ಬಿಜೆಪಿ-41
LEFT- 06
ಟಿಎಂಸಿ-06
ಇತರೆ-00
ನಾಗಲ್ಯಾಂಡ್
ಎನ್ಡಿಡಿಪಿ-37
ಎನ್ಪಿಎಫ್-08
ಕಾಂಗ್ರೆಸ್-02
ಇತರೆ-13
ಮೇಘಾಲಯ
ಎನ್ಪಿಪಿ-31
ಬಿಜೆಪಿ-07
ಕಾಂಗ್ರೆಸ್-03
ಇತರೆ-18
ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುನ್ನಡೆ
ಸಿಎಂ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಸದ್ಯ 28 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನುಳಿದಂತೆ ಬಿಜೆಪಿ 12, ಕಾಂಗ್ರೆಸ್ 6 ಸೀಟ್ಗಳಲ್ಲಿ ಮುನ್ನಡೆ ಸಾಧಿಸಿವೆ. ಇಲ್ಲಿ ಎನ್ಪಿಪಿ ಮತ್ತು ಬಿಜೆಪಿ ಮೈತ್ರಿಯಿದೆ.
ತ್ರಿಪುರದಲ್ಲಿ ವಿಜಯದತ್ತ ಬಿಜೆಪಿ
ತ್ರಿಪುರದಲ್ಲಿ ಈಗಾಗಲೇ ಬಿಜೆಪಿ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 31ನ್ನು ದಾಟಿದೆ. ಮಾಣಿಕ್ ಸಾಹಾ ಅವರು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಏರುವುದು ಖಚಿತವಾದ ಸನ್ನಿವೇಶ ಇದೆ.