ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಹೆಚ್ಚಿನ ಮಹತ್ವ ಪಡೆದಿರುವ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ (Northeast Assembly Election Result 2023) ಗುರುವಾರ (ಮಾರ್ಚ್ 2) ಪ್ರಕಟವಾಗಲಿದೆ. ಇಂದು ಬೆಳಗ್ಗೆ 8ಗಂಟೆಯಿಂದ ಮೂರು ರಾಜ್ಯಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಈ ಮೂರು ರಾಜ್ಯಗಳಲ್ಲಿ ನಡೆಯುತ್ತಿರುವ ಮತ ಎಣಿಕೆಯ ಸಮಗ್ರ ವರದಿ ಇಲ್ಲಿದೆ.
ನಾಗಾಲ್ಯಾಂಡ್ನಲ್ಲಿ 9 ಗಂಟೆಯವರೆಗಿನ ಮತ ಎಣಿಕೆ ಪ್ರಕಾರ ಎನ್ಡಿಪಿಪಿ-ಬಿಜೆಪಿ ಮೈತ್ರಿಕೂಟ ಒಟ್ಟು 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದರಲ್ಲಿ ಎನ್ಡಿಪಿಪಿ 30 ಕ್ಷೇತ್ರಗಳಲ್ಲಿ, ಬಿಜೆಪಿ 12 ಸೀಟ್ಗಳಲ್ಲಿ ಮುಂದಿದೆ.
ದೇವಸ್ಥಾನಕ್ಕೆ ಭೇಟಿ ನೀಡಿದ ತ್ರಿಪುರ ಸಿಎಂ
ತ್ರಿಪುರದಲ್ಲಿ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಮಾತಾ ತ್ರಿಪುರ ಸುಂದರಿ ದೇವಸ್ಥಾನಕ್ಕೆ ತೆರಳಿ ಮಾತೆಯ ಆಶೀರ್ವಾದ ಪಡೆದರು.
Took blessings of Mata Tripura Sundari before the announcement of assembly poll results. pic.twitter.com/9qKwtpn5UP
— Prof.(Dr.) Manik Saha (@DrManikSaha2) March 2, 2023
ನಾಗಾಲ್ಯಾಂಡ್ನಲ್ಲಿ ಎನ್ಡಿಪಿಪಿ ಮುನ್ನಡೆ
ನಾಗಾಲ್ಯಾಂಡ್ನಲ್ಲಿ ಸಿಎಂ ನೆಫಿಯ ರಿಯೊ ನೇತೃತ್ವದ ಎನ್ಡಿಪಿಪಿ (ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ) 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿ 12 ಸ್ಥಾನಗಳಲ್ಲಿ ಮುಂದಿದೆ. ಎನ್ಪಿಎಫ್ 2ರಲ್ಲಿ ಮುನ್ನಡೆ ಸಾಧಿಸಿದ್ದರೆ ಮತ್ತು ಕಾಂಗ್ರೆಸ್ ಖಾತೆ ತೆರೆದಿಲ್ಲ.
ಬಿಜೆಪಿ ಪಕ್ಷ ತ್ರಿಪುರದಲ್ಲಿ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಡಪಕ್ಷಗಳು-ಕಾಂಗ್ರೆಸ್ ಒಕ್ಕೂಟ 4 ಕ್ಷೇತ್ರಗಳಲ್ಲಿ ಮುಂದಿದೆ.
ಮೇಘಾಲಯದಲ್ಲಿ ಎನ್ಪಿಪಿ ಮುನ್ನಡೆ
60 ವಿಧಾನಸಭಾ ಕ್ಷೇತ್ರಗಳಿರುವ ಮೇಘಾಲಯದಲ್ಲಿ ಸಿಎಂ ಕಾನ್ರಾಡ್ ಸಂಗ್ಮಾ ಅವರ ಎನ್ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿವೆ.