Site icon Vistara News

Notes Showered In Gujarat:‌ ಗುಜರಾತ್‌ನಲ್ಲಿ 500 ರೂ. ನೋಟುಗಳನ್ನು ತೂರಿದ ಮಾಜಿ ಸರ್ಪಂಚ್‌, ಇಲ್ಲಿದೆ ವಿಡಿಯೊ

Notes Showered In Gujarat

#image_title

ಗಾಂಧಿನಗರ: ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ ಫ್ಲೈಓವರ್‌ (KR Market Flyover) ಮೇಲೆ ನಿಂತು ವ್ಯಕ್ತಿಯೊಬ್ಬ ನೋಟುಗಳನ್ನು ಎಸೆದ ಪ್ರಕರಣ ಸುದ್ದಿಯಾದ ಬೆನ್ನಲ್ಲೇ ಗುಜರಾತ್‌ನಲ್ಲೂ ಮಾಜಿ ಸರ್ಪಂಚ್‌ ಒಬ್ಬರು ಸಂಬಂಧಿಕರ ಮದುವೆಯಲ್ಲಿ 500 ರೂಪಾಯಿಗಳ ಲಕ್ಷಾಂತರ ರೂ. ಮೌಲ್ಯದ ನೋಟುಗಳನ್ನು (Notes Showered In Gujarat) ಎಸೆದಿದ್ದು, ನೋಟುಗಳನ್ನು ಪಡೆಯಲು ಜನ ಮುಗಿಬಿದ್ದಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಗುಜರಾತ್‌ನ ಮೆಹ್ಸಾನ ಜಿಲ್ಲೆ ಸೆವಾದ ಅಗೋಲ್‌ ಗ್ರಾಮದಲ್ಲಿ ಮಾಜಿ ಸರ್ಪಂಚ್‌ ಆದ ಕರೀಂ ಜಾಧವ್‌ ಸೇರಿ ಹಲವು ಸಂಬಂಧಿಕರು ತಮ್ಮ ಸಂಬಂಧಿ ರಜಾಕ್‌ ಮದುವೆಯಲ್ಲಿ ಕಟ್ಟಡದ ಮೇಲೆ ನಿಂತು ಲಕ್ಷಾಂತರ ರೂ. ಮೌಲ್ಯದ ೧೦೦ ರೂ. ಹಾಗೂ ೫೦೦ ರೂ. ನೋಟುಗಳನ್ನು ಎಸೆದಿದ್ದಾರೆ. ನೂಟುಗಳನ್ನು ತೂರುತ್ತಲೇ ಅವುಗಳನ್ನು ಸಂಗ್ರಹಿಸಲು ಜನ ಮುಗಿಬಿದಿದ್ದಾರೆ.

ನೋಟು ಎಸೆದ ವಿಡಿಯೊ ವೈರಲ್

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕೆ.ಆರ್.‌ ಮಾರ್ಕೆಟ್‌ನ ಫ್ಲೈಓವರ್‌ ಮೇಲೆ ನಿಂತು ೧೦ ರೂ. ಮುಖಬೆಲೆಯ ನೋಟುಗಳನ್ನು ತೂರಿದ್ದ. ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾದ ಕಾರಣ ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದರು. ಗುಜರಾತ್‌ ಸೇರಿ ದೇಶದ ಹಲವೆಡೆ ಮದುವೆ ಸಮಾರಂಭಗಳಲ್ಲಿ ದುಡ್ಡು ಎಸೆಯುವ ರೂಢಿ ಇದೆ.

ಇದನ್ನೂ ಓದಿ: Viral Video : ಹಾಸ್ಟೆಲ್ ಊಟ ಹೀಗಿರತ್ತೆ ನೋಡಿ! ಐರನ್ ಚಪಾತಿ ವಿಡಿಯೊ ವೈರಲ್

Exit mobile version