ನವದೆಹಲಿ: ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಗಿರುವ ಮೂರು ವಿಧೇಯಕಗಳು ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಗೆ (Indian criminal justice system) ಹೊಸ ರೂಪ ನೀಡುವ ಉದ್ದೇಶವನ್ನು ಹೊಂದಿವೆ. ಈಗ ಮಂಡಿಸಲಾಗಿರುವ ವಿಧೇಯಕಗಳು ಕಾನೂನು ಆಗಿ ಜಾರಿಯಾದರೆ, ಈಗಿರುವ ಐಪಿಸಿಯ (Indian Penal Code) ಸಾಕಷ್ಟು ಸೆಕ್ಷನ್‌ಗಳು (IPC Section) ಅದಲು ಬದಲಾಗಲಿವೆ. ಕೆಲವು ಅಪರಾಧಗಳ ವ್ಯಾಖ್ಯಾನ ಕೂಡ ಬದಲಾಗುವ ಸಾಧ್ಯತೆ ಇದೆ. ಜತೆಗೆ ಶಿಕ್ಷೆಯಲ್ಲಿ ಪರಿಷ್ಕರಣೆ ಕಾಣಬಹುದಾಗಿದೆ. ಭಾರತೀಯ ನ್ಯಾಯ ಸಂಹಿತೆ 2023 (bhartiya nyay sanhita 2023) ವಿಧೇಯಕ ಸಾಕಷ್ಟು ಹೊಸ ವಿಚಾರಗಳನ್ನು ಹೊಂದಿವೆ.
ಈಗಿರುವ ಕಾನೂನಿನ ಪ್ರಕಾರ, 302 ಸೆಕ್ಷನ್ ಎಂದರೆ ಕೊಲೆ, 420 ಸೆಕ್ಷನ್ ಎಂದರೆ ವಂಚನೆ, 376 ಸೆಕ್ಷನ್ ಎಂದರೆ ರೇಪ್ ಎಂದು ತಿಳಿಸುತ್ತವೆ. ಆದರೆ, ಉದ್ದೇಶಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಅಪರಾಧಗಳ ಸೆಕ್ಷನ್‌ಗಳು ಬದಲಾಗಲಿವೆ.
ಈಗಿರುವ ಭಾರತೀಯ ದಂಡ ಸಂಹಿತೆಯಲ್ಲಿ 420 ಸೆಕ್ಷನ್ ಅನ್ನು ವಂಚನೆ ಅಪರಾಧಕ್ಕೆ ಅನ್ವಯಿಸಲಾಗುತ್ತದೆ. ಆದರೆ, ಭಾರತೀಯ ನ್ಯಾಯ ಸಂಹಿತೆಯ ಈ ಅಪರಾಧಕ್ಕೆ 316(2), (3) ಮತ್ತು (4) ಸೆಕ್ಷನ್‌ಗಳು ಇರಲಿವೆ. ವಂಚನೆ ಅಪರಾಧಕ್ಕಾಗಿ ಈ ಸೆಕ್ಷನ್‌ಗಳಡಿ ಅಪರಾಧಿಗೆ ಮೂರು ವರ್ಷ, ಐದು ವರ್ಷ ಅಥವಾ ಏಳು ವರ್ಷಗಳವರೆಗೆ ದಂಡ ಸಹಿತ ಜೈಲು ಶಿಕ್ಷೆಯನ್ನು ವಿಸ್ತರಿಸಬಹುದಾಗಿದೆ.
ಸೆಕ್ಷನ್ 302 ಕೊಲೆಗಲ್ಲ, ಸ್ನ್ಯಾಚಿಂಗ್‌ಗೆ ಅಪ್ಲೈ
ಈಗ ಚಾಲ್ತಿಯಲ್ಲಿರುವ ಐಪಿಸಿ ಸೆಕ್ಷನ್ 302 ಕೊಲೆ ಅಪರಾಧವನ್ನು ಸೂಚಿಸುತ್ತದೆ. ಯಾರು ಕೊಲೆ ಅಪರಾಧವನ್ನು ಮಾಡುತ್ತಾರೋ ಅವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಅಥವಾ ದಂಡ ಸಹಿತ ಶಿಕ್ಷೆಯನ್ನು ವಿಧಿಸಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Criminal Laws: ಬ್ರಿಟಿಷ್ ಕಾಲದ ಕಾನೂನು ಬದಲು; ರೇಪಿಸ್ಟ್‌ಗಳಿಗೆ 20 ವರ್ಷ ಜೈಲು, ‘ದೇಶದ್ರೋಹ’ ಮಾರ್ಪಾಡು, ಬಿಲ್‌ಗಳಲ್ಲಿ ಇನ್ನೇನಿದೆ?
ಉದ್ದೇಶಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೊಲೆ ಅಪರಾಧದ ಶಿಕ್ಷೆಯನ್ನು ವಿವರಿಸಲು ಸೆಕ್ಷನ್ 101 ಬಳಸಲಾಗಿದೆ. ಇದಕ್ಕೆ ಎರಡು ಉಪ ಸೆಕ್ಷನ್‌ಗಳು ಕೂಡ ಇವೆ. ಐಪಿಸಿಯಲ್ಲಿದ್ದ ಸೆಕ್ಷನ್ 302 ಈಗ ಉದ್ದೇಶಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕಸಿದುಕೊಳ್ಳುವ(ಸ್ನ್ಯಾಚಿಂಗ್) ಅಪರಾಧವನ್ನು ಸೂಚಿಸುತ್ತದೆ. ಸೆಕ್ಷನ್ 302(1) ಪ್ರಕಾರ, ಕಳ್ಳತನ ಮಾಡುವ ಸಲುವಾಗಿ, ಅಪರಾಧಿಯು ಹಠಾತ್ತನೆ ಅಥವಾ ತ್ವರಿತವಾಗಿ ಅಥವಾ ಬಲವಂತವಾಗಿ ವಶಪಡಿಸಿಕೊಂಡರೆ ಅಥವಾ ಯಾವುದೇ ವ್ಯಕ್ತಿಯಿಂದ ಅಥವಾ ಅವನ ಸ್ವಾಧೀನದಿಂದ ಯಾವುದೇ ಚಲಿಸಬಹುದಾದ ಆಸ್ತಿಯನ್ನು ಕಸಿದುಕೊಂಡರೆ ಅಥವಾ ಕಸಿದುಕೊಂಡರೆ ಎಂದು ವ್ಯಾಖ್ಯಾನಿಸುತ್ತದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.