Site icon Vistara News

NTA NCET 2023 Result: ಎನ್‌ಟಿಎ ಎನ್‌ಸಿಇಟಿ ಫಲಿತಾಂಶ ಪ್ರಕಟ, ರಿಸಲ್ಟ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿ…

NTA NCET 2023 Result Declared and Check details

ನವದೆಹಲಿ: ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (National Common Entrance Test) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency) ಪ್ರಕಟಿಸಿದೆ. ಯಾರು ಎನ್‌ಟಿಎ ಎನ್‌ಸಿಇಟಿ 2023(NTA NCET 2023) ಪರೀಕ್ಷೆಗೆ ಹಾಜರಾಗಿದ್ದಾರೋ ಅವರು ಸಂಸ್ಥೆಯ ಅಧಿಕೃ ಜಾಲತಾಣಕ್ಕೆ ಭೇಟಿ ನೀಡಿ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ. ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

2023-24ರ ಶೈಕ್ಷಣಿಕ ವರ್ಷಕ್ಕೆ ಐಐಟಿಗಳು, ಆರ್‌ಐಇಗಳು, ಎನ್‌ಐಟಿಗಳು ಮತ್ತು ಸರ್ಕಾರಿ ಕಾಲೇಜುಗಳಂತಹ ಆಯ್ದ ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳಲ್ಲಿ ನಾಲ್ಕು ವರ್ಷದ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ಎನ್‌ಸಿಇಟಿ ಆಯೋಜಿಸಲಾಗಿತ್ತು.

ಕನ್ನಡ ಸೇರಿ 13 ಭಾಷೆಯಲ್ಲಿ ಪರೀಕ್ಷೆ

ಈ ಪರೀಕ್ಷೆಯನ್ನು ಆಗಸ್ಟ್ 9ರಂದು ದೇಶದ 127 ನರಗಳಲ್ಲಿ ನಡೆಸಲಾಗಿತ್ತು ಮತ್ತು ವಿದ್ಯಾರ್ಥಿಗಳು 13 ಭಾಷಾ ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆದಿದ್ದರು. ಇದೊಂದು ಕಂಪ್ಯೂಟರ್ ಆಧರಿತ ಪರೀಕ್ಷೆಯಾಗಿತ್ತು. ಕನ್ನಡ, ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶವಿತ್ತು.

ಈ ಪರೀಕ್ಷೆಗೆ ಒಟ್ಟು 16004 ವಿದ್ಯಾರ್ಥಿಗಳು ಹಾಜರಾಗಿದ್ದರು. 42 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು. ಒಟ್ಟು 45,875 ಪ್ರಶ್ನೆಗಳೊಂದಿಗೆ 63 ಪ್ರಶ್ನೆ ಪತ್ರಿಕೆಗಳಿದ್ದವು ಎಂದು ಎನ್‌ಟಿಎ ಹೇಳಿದೆ.

ಈ ಸುದ್ದಿಯನ್ನೂ ಓದಿ: UGC NET results: ಯುಜಿಸಿ ನೆಟ್‌ ಫಲಿತಾಂಶ 2023 ಪ್ರಕಟ; ನಿಮ್ಮ ರಿಸಲ್ಟ್‌ ಹೀಗೆ ಚೆಕ್‌ ಮಾಡಿ

ಫಲಿತಾಂಶವನ್ನು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಐಐಟಿಗಳು, ಎನ್‌ಐಟಿಗಳು, ಆರ್‌ಐಇಗಳು ಮತ್ತು ಸರ್ಕಾರಿ ಕಾಲೇಜುಗಳು ಸೇರಿದಂತೆ ಕೇಂದ್ರ/ರಾಜ್ಯ ವಿಶ್ವವಿದ್ಯಾಲಯಗಳು/ಸಂಸ್ಥೆಗಳಲ್ಲೂ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಆಯಾ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಿಸಲ್ಟ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿ…

ನಿಮ್ಮ ರಿಸಲ್ಟ್ ತಿಳಿಯಲು ಮೊದಲಿಗೆ ಸಂಸ್ಥೆಯ ಜಾಲತಾಣ ncet.samarth.ac.in ತೆರೆಯಿರಿ. ಹೋಮ್‌ಪೇಜ್‌ನಲ್ಲಿರುವ ಸೈನ್ ಇನ್ ಮೇಲೆ ಕ್ಲಿಕ್ ಮಾಡಿ. ಅಗತ್ಯವಿರುವ ಎಲ್ಲ ದಾಖಲೆಗಳನ್ನು ನಮೂದಿಸಿ. ಬಳಿಕ ಸ್ಕ್ರೀನ್ ಮೇಲೆ ಎನ್‌ಟಿಎ ಎನ್‌ಸಿಇಟಿ ಫಲಿತಾಂಶವು ಗೋಚರವಾಗುತ್ತದೆ. ಬಳಿಕ ಡೌನ್‌ಲೋಡ್ ಬಟನ್ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version