ಕೊಚ್ಚಿ: ಬೆತ್ತಲೆಯಾದ ದೇಹ ಎಲ್ಲ ಸಂದರ್ಭದಲ್ಲೂ ಅಶ್ಲೀಲತೆ ಎನಿಸಿಕೊಳ್ಳುವುದಿಲ್ಲ. ವ್ಯಕ್ತಿಯೊಬ್ಬರಿಗೆ ಅವರ ದೇಹದ ಮೇಲಿನ ಹಕ್ಕನ್ನು ಲಿಂಗದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ತಮ್ಮ ದೇಹ ಮತ್ತು ಜೀವನದ ಆಯ್ಕೆಗಳನ್ನು ಮಾಡಿದ್ದಕ್ಕಾಗಿ ಬೆದರಿಸಲಾಗುತ್ತದೆ, ತಾರತಮ್ಯ ಮಾಡಲಾಗುತ್ತದೆ, ಪ್ರತ್ಯೇಕಿಸಲಾಗುತ್ತದೆ ಮತ್ತು ಹಿಂಸಿಸಲಾಗುತ್ತದೆ ಎಂದು ಪೋಕ್ಸೊ ಪ್ರಕರಣದಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆಯರೊಬ್ಬರನ್ನು ಖುಲಾಸೆಗೊಳಿಸುವಾಗ ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ರೆಹಾನಾ ಫಾತಿಮಾ ಎಂಬ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತನ್ನ ಅಪ್ರಾಪ್ತ ಮಕ್ಕಳ ಜತೆ ಅರೆನಗ್ನರಾಗಿ ಪೋಸ್ ನೀಡುವ ವೀಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ಪೋಕ್ಸೊ, ಬಾಲಾಪರಾಧಿ ನ್ಯಾಯ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗಳ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದರು. ಈ ವಿಚಾರಣೆ ನಡೆಸಿ ರೆಹೆನಾ ಅವರನ್ನು ಆರೋಪಮುಕ್ತಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 33 ವರ್ಷದ ಸಾಮಾಜಿಕ ಕಾರ್ಯಕರ್ತೆ ತನ್ನ ಲೈಂಗಿಕ ತೃಪ್ತಿಗಾಗಿ ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಊಹಿಸಲು ಕೂಡ ಯಾರಿಗೂ ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತನ್ನ ಮಕ್ಕಳಿಗೆ ಬಣ್ಣ ಹಚ್ಚಲು ಕ್ಯಾನ್ವಾಸ್ ಆಗಿ ತನ್ನ ದೇಹವನ್ನು ಬಳಸಲು ಮಾತ್ರ ಅವರು ಅನುಮತಿ ನೀಡಿದ್ದಾರೆ. ಹೀಗಾಗಿ ಅದರು ಲೈಂಗಿಕತೆಗೆ ಸಂಬಂಧಿಸಿದ ಆರೋಪವೇ ಅಲ್ಲ ಎಂದು ಕೋರ್ಟ್ ಹೇಳಿದ ಕೋರ್ಟ್ ರೆಹೆನಾ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದೆ.
ತನ್ನ ದೇಹದ ಬಗ್ಗೆ ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯ ಹಕ್ಕು ಹಾಗೂ ಸಮಾನತೆ ಮತ್ತು ಖಾಸಗಿತನದ ಮೂಲಭೂತ ಹಕ್ಕಿನ ಭಾಗವಾಗಿದೆ. ಇದು ಸಂವಿಧಾನದ 21 ನೇ ವಿಧಿಯಿಂದ ಖಾತರಿಪಡಿಸಿದ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಕೋರ್ಟ್ ಹೇಳಿದೆ.
ಸ್ತ್ರೀಯ ದೇಹದ ಮೇಲ್ಬಾಗ ಅಶ್ಲೀಲ್ವೇ?
ಸ್ತ್ರೀಯ ದೇಹದ ಮೇಲ್ಬಾ ನಗ್ನ ಮೇಲ್ಭಾಗವನ್ನು ಎಲ್ಲಾ ಸಂದರ್ಭಗಳಲ್ಲಿ ಲೈಂಗಿಕತೆಯ ವ್ಯಾಪ್ತಿಗೆ ಸೇರಿಸುತ್ತೇವೆ. ಆದರೆ ನಗ್ನ ಪುರುಷ ಮೇಲ್ಭಾಗವನ್ನು ಆ ರೀತಿ ಭಾವಿಸುವುದಿಲ್ಲ. ಇದು ಸಮಾಜದ ಪೂರ್ವನಿಯೋಜಿತ ದೃಷ್ಟಿಕೋನ. ಹೀಗಾಗಿ ನನ್ನ ಮೇಲಿರುವ ಬಾಡಿ ಪೇಂಟಿಂಗ್ ಆರೋಪ ಒಂದು ರಾಜಕೀಯ ಹೇಳಿಕೆಯಾಗಿದೆ ಎಂದು ರೆಹೆನಾ ಫಾತಿಮಾ ಕೋರ್ಟ್ ಮುಂದೆ ವಾದಿಸಿದ್ದರು.
ಆಕೆಯ ವಾದವನ್ನು ಒಪ್ಪಿದ ನ್ಯಾಯಮೂರ್ತಿ ಎಡಪ್ಪಗತ್, ತಾಯಿಯ ದೇಹದ ಮೇಲೆ ಮಕ್ಕಳು ಚಿತ್ರ ಬಿಡಿಸಿದರೆ ಅದನ್ನು ಅನುಕರಿಸಿದ ಲೈಂಗಿಕ ಕ್ರಿಯೆ ಎಂದು ನಿರೂಪಿಸಲಾಗುವುದಿಲ್ಲ. ಲೈಂಗಿಕ ತೃಪ್ತಿಯ ಉದ್ದೇಶಕ್ಕಾಗಿ ಅಥವಾ ಲೈಂಗಿಕ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ನಿರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಲೆಯ ಅಭಿವ್ಯಕ್ತಿಯನ್ನು ಅನುಕರಿಸಿದ ಲೈಂಗಿಕ ಕ್ರಿಯೆಯಲ್ಲಿ ಮಗುವಿನ ಬಳಕೆ ಎಂದು ಕರೆಯುವುದು ಕಠಿಣ. ಇಲ್ಲಿ ಮಕ್ಕಳನ್ನು ಅಶ್ಲೀಲತೆಗೆ ಬಳಸಲಾಗಿದೆ ಎಂದು ತೋರಿಸಲು ಏನೂ ಇಲ್ಲ. ವೀಡಿಯೊದಲ್ಲಿ ಲೈಂಗಿಕತೆಯ ಯಾವುದೇ ಸುಳಿವು ಇಲ್ಲ. ಪುರುಷನಾಗಿರಲಿ ಅಥವಾ ಮಹಿಳೆಯ ನಗ್ನ ದೇಹದ ಮೇಲೆ ಚಿತ್ರ ಬಿಡಿಸುವುದು ಲೈಂಗಿಕ ಕೃತ್ಯ ಎಂದು ಹೇಳಲಾಗುವುದಿಲ್ಲ ಎಂದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಅರ್ಜಿದಾರರು ತಮ್ಮ ದೇಹ ಮತ್ತು ಜೀವನದ ಬಗ್ಗೆ ಆಯ್ಕೆಗಳನ್ನು ಮಾಡಿದ್ದಕ್ಕಾಗಿ ಅವರನ್ನು ಬೆದರಿಸಲಾಗುತ್ತದೆ, ತಾರತಮ್ಯ ಮಾಡಲಾಗುತ್ತದೆ, ಪ್ರತ್ಯೇಕಿಸಲಾಗುತ್ತದೆ ಮತ್ತು ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನ್ಯಾಯಾಲಯ ವಿಷಾಧ ವ್ಯಕ್ತಪಡಿಸಿದರು.
ಮಹಿಳಾ ನಗ್ನತೆಯನ್ನು ನಿಷೇಧವೆಂದು ಪರಿಗಣಿಸುವ ಕೆಲವರು ಇದ್ದಾರೆ. ಅವನ್ನು ಕಾಮಪ್ರಚೋದಕ ಉದ್ದೇಶಗಳಿಗಾಗಿ ಮಾತ್ರ ಎಂದು ಪರಿಗಣಿಸುತ್ತಾರೆ. ಆದರೆ, ಫಾತಿಮಾ ಪ್ರಸಾರ ಮಾಡಿದ ವೀಡಿಯೊದ ಹಿಂದಿನ ಉದ್ದೇಶವು ಸಮಾಜದಲ್ಲಿ ಚಾಲ್ತಿಯಲ್ಲಿರುವ ಈ ದ್ವಂದ್ವ ಮಾನದಂಡವನ್ನು ಬಹಿರಂಗಪಡಿಸುವುದಾಗಿತ್ತು ಎಂದು ನ್ಯಾಯಾಲಯ ಹೇಳಿದೆ.