Site icon Vistara News

Nuh Violence: ನುಹ್ ಕೋಮುಗಲಭೆ ಆರೋಪಿ ಬಿಟ್ಟು ಬಜರಂಗಿಯನ್ನು ಅಟ್ಟಾಡಿಸಿ ಹಿಡಿದ ಪೊಲೀಸರು!

Nuh violence accused bittu bajarangi arrested

ನವದೆಹಲಿ: ಹರ್ಯಾಣದ (Haryana State) ನುಹ್(Nuh Violence), ಗುರುಗ್ರಾಮ್ (Gurugram Violence) ಹಾಗೂ ಇತರ ಪ್ರದೇಶಗಳಲ್ಲಿ ಭಾರೀ ಕೋಮು ಗಲಭೆಗೆ ಕಾರಣನಾಗಿದ್ದ ಬಜರಂಗದಳ ಸದಸ್ಯ (Bajrang Dal Member) ಹಾಗೂ ಗೋ ರಕ್ಷಕ ಬಿಟ್ಟು ಬಜರಂಗಿ (Bittu Bajrangi) ಎಂಬಾತನನ್ನು ಪೊಲೀಸರು (Faridabad Police) ನಾಟಕೀಯ ರೀತಿಯ ಬಂಧಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಂಧಿತ ಬಿಟ್ಟು ಬಜರಂಗಿ ಹಾಗೂ ಬಜರಂಗದಳದ ಮತ್ತೊಬ್ಬ ನಟೋರಿಯಸ್ ವ್ಯಕ್ತಿ, ಕೊಲೆ ಕೇಸಿನಲ್ಲಿ ಪೊಲೀಸರಿಗೆ ಬೇಕಾಗಿರುವ ಮೋನು ಮನೇಸರ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ ಪೋಸ್ಟ್‌ ಕೋಮು ಗಲಭೆಗೆ ಕಾರಣ ಎನ್ನಲಾಗುತ್ತಿದೆ.

ಬಂಧಿತ ಆರೋಪಿ ಬಿಟ್ಟು ಬಜರಂಗಿ ಇನ್ನೂ ಬೇರೆ ಬೇರೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಫರೀದಾಬಾದ್‌ನ ಬಿಟ್ಟು ಬಜರಂಗಿ ಮನೆಯ ಹತ್ತಿರದಿಂದಲೇ ಪೊಲೀಸರು ಬಂಧಿಸಿದ್ದಾರೆ. ಕೋಮು ಗಲಭೆ ಸಂಭವಿಸಿ 20 ದಿನಗಳ ಬಳಿಕ ಪೊಲೀಸರು ಈ ಆರೋಪಿಯನ್ನು ಬಂಧಿಸಿದ್ದಾರೆ.

ಚೇಸ್ ಮಾಡಿದ ಹಿಡಿದ ಫರಿದಾಬಾದ್ ಪೊಲೀಸರು

ಸಾಮಾನ್ಯ ಉಡುಪಿನಲ್ಲಿ ದೊಣ್ಣೆಗಳು ಮತ್ತು ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತವಾದ ಪೊಲೀಸರು ಬಿಟ್ಟು ಬಜರಂಗಿಯನ್ನು ಬೆನ್ನಟ್ಟಿ ಹಿಡಿದಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಗಲಭೆ, ಹಿಂಸಾಚಾರ, ಬೆದರಿಕೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಸರ್ಕಾರಿ ಅಧಿಕಾರಿಯನ್ನು ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಮಾರಕ ಆಯುಧದಿಂದ ಹಾನಿ ಮಾಡಿದ ಆರೋಪಗಳನ್ನು ಬಿಟ್ಟು ಬಜರಂಗಿ ಎದುರಿಸುತ್ತಿದ್ದಾನೆ.

ಲಭ್ಯವಿರುವ ವಿಡಿಯೋಗಳಿಂದ ಬಿಟ್ಟು ಬಜರಂಗಿ ಸಹಚರರನ್ನು ಗುರುತಿಸಲಾಗುತ್ತಿದೆ. ಅವರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ಫರಿದಾಬಾದ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಬಿಟ್ಟು ಬಜರಂಗಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸರು

ಪೊಲೀಸರ ಕೆಲಸಕ್ಕೇ ಯಾರೇ ಅಡ್ಡಿಪಡಿಸಿದರು ಅವರನ್ನು ಸುಮ್ಮನೆ ಬಿಡುವುದಿಲ್ಲ. ಸೋಷಿಯಲ್ ಮೀಡಿಯಾದ ಮೇಲೆ ಕಣ್ಣಿಡಲಾಗಿದೆ. ನಕಲಿ ಸುದ್ದಿ ಹರಡುವ ಮತ್ತು ಜನರನ್ನು ಉದ್ರೇಕಿಸುವ ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Haryana Violence: ನುಹ್‌ ಹಿಂಸಾಚಾರದಲ್ಲಿ ಭಾಗಿಯಾದವರ ಮನೆಗಳು ನೆಲಸಮ

ಈಗ ಬಂಧಿತನಾಗಿರುವ ಬಿಟ್ಟು ಬಜರಂಗಿ ಅಲಿಯಾಸ್ ರಾಜ್ ಕುಮಾರ್ ಕಳೆದ ಮೂರು ವರ್ಷಗಳಿಂದ ಗೋ ರಕ್ಷಣೆಯ ತಂಡವೊಂದನ್ನು ಕಟ್ಟಿಕೊಂಡಿದ್ದಾನೆ. ಈತ ಫರಿದಾಬಾದ್‌ನ ಗಾಜಿಪುರ್ ಮಾರ್ಕೆಟ್ ಮತ್ತು ದುಬಾವ್ ಮಾರ್ಕೆಟ್‌ನಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರಿಯಾಗಿದ್ದ. ಕಳೆದ ತಿಂಗಳವಷ್ಟೇ ಈತನ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಧಾರ್ಮಿಕ ಭಾವನೆಗಳಿಗೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version