Site icon Vistara News

Odisha News : ಕೋಟಿ ಕೋಟಿ ರೂ. ಇದ್ದ ಪೆಟ್ಟಿಗೆಯನ್ನು ಪಕ್ಕದ ಮನೆಯ ಟೆರೇಸ್‌ ಮೇಲೆಸೆದ ಅಧಿಕಾರಿಯ ಪತ್ನಿ!

cash

#image_title

ಭುವನೇಶ್ವರ: ಒಡಿಶಾ ಪೊಲೀಸರ ವಿಜೆಲೆನ್ಸ್‌ ವಿಭಾಗವು ಸರ್ಕಾರಿ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ನಿವಾಸಗಳ ಮೇಲೆ ಶುಕ್ರವಾರ ದಾಳಿ ನಡೆಸಿದ್ದು, 3 ಕೋಟಿ ರೂ.ಗೂ ಅಧಿಕ ನಗದನ್ನು (Odisha News) ವಶಪಡಿಸಿಕೊಂಡಿದ್ದಾರೆ.

ನಬರಂಗಪುರ ಜಿಲ್ಲೆಯ ಹೆಚ್ಚುವರಿ ಸಬ್‌ ಕಲೆಕ್ಟರ್‌ ಆಗಿ ನಿಯೋಜಿಸಲಾಗಿರುವ ಒಎಎಸ್‌ ಅಧಿಕಾರಿ ಪ್ರಶಾಂತ್‌ ಕುಮಾರ್‌ ರಾವುತ್‌ ಅವರಿಗೆ ಸಂಬಂಧಿಸಿದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಭುವನೇಶ್ವರ, ನಬರಂಗ್‌ಪುರ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Video Viral: ಕಳ್ಳಿಯ ʼಶಕ್ತಿʼ ಪ್ರದರ್ಶನ; ಮಾಂಗಲ್ಯ ಕದ್ದು ನಾನವಳಲ್ಲ ಎಂದವಳ ಜುಟ್ಟು ಹಿಡಿದಳು!
ಭುವನೇಶ್ವರದ ಕಾನನ್‌ ವಿಹಾರ್‌ನಲ್ಲಿರುವ ಮನೆಯ ಮೇಲೆ ದಾಳಿ ನಡೆಸುವ ಸಮಯದಲ್ಲಿ ಪ್ರಶಾಂತ್‌ ಕುಮಾರ್‌ ಅವರ ಪತ್ನಿ ನಗದು ತುಂಬಿದ್ದ ಆರು ರಟ್ಟಿನ ಪೆಟ್ಟಿಗೆಗಳನ್ನು ಪಕ್ಕದ ಮನೆಯ ಟೆರೇಸಿಗೆ ಎಸೆದಿದ್ದಾರೆ. ಹಣವನ್ನು ಮುಚ್ಚಿಡಿ ಎಂದು ಪಕ್ಕದ ಮನೆಯವರ ಹತ್ತಿರ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಗಮನಕ್ಕೆ ತೆಗೆದುಕೊಂಡ ಸಿಬ್ಬಂದಿ ಪಕ್ಕದ ಮನೆಯಿಂದ ಹಣದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

ನಬರಂಗ್‌ಪುರದ ನಿವಾಸದಿಂದ ಒಟ್ಟು 89.5 ಲಕ್ಷ ರೂ. ನಗದು ಮತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

ಒಡಿಶಾ ರಾಜ್ಯದಲ್ಲಿ ಈ ಪ್ರಮಾಣದಲ್ಲಿ ಸರ್ಕಾರಿ ಅಧಿಕಾರಿ ಮನೆಯಲ್ಲಿ ಹಣ ಸಿಕ್ಕಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ 2022ರ ಏಪ್ರಿಲ್‌ನಲ್ಲಿ ಗಂಜಾಂನ ಸಣ್ಣ ನೀರಾವರಿ ವಿಭಾಗದ ಸಹಾಯಕ ಇಂಜಿನಿಯರ್‌ ಕಾರ್ತಿಕೇಶ್ವರ್‌ ಅವರ ಮನೆಯ ಮೇಲೆ ದಾಳಿ ನಡೆಸಿ 3.41 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು.

Exit mobile version