ನವದೆಹಲಿ: ಗ್ರಾಹಕರನ್ನು ಸೆಳೆಯಲು ಪಾನೀಯ ಸೇರಿ ಹಲವು ಕಂಪನಿಗಳು ನಾನಾ ಉಪಾಯ ಮಾಡುತ್ತಿವೆ. ಈ ಮಾತಿಗೆ ಉದಾಹರಣೆ ಎಂಬಂತೆ ಕೋಕಾ ಕೋಲಾ (Coca Cola) ಪಾನೀಯ ಕಂಪನಿಯು ಹೊಸ ತಂತ್ರಜ್ಞಾನದ ಮೂಲಕ ಗಮನ ಸೆಳೆದಿದೆ. ಕೋಕಾ ಕೋಲಾ ಬಾಟಲಿಗೆ ಬ್ಲ್ಯೂಟ್ಯೂತ್ ಅಳವಡಿಸಲಾಗಿದ್ದು, ಯಾರು ಕೋಕಾ ಕೋಲಾವನ್ನು ಉಡುಗೊರೆ ಕಳುಹಿಸುತ್ತಾರೋ, ಸ್ವೀಕರಿಸಿದವರು ಅವರ ಬಳಿ ಹೋದರೆ ಮಾತ್ರ ಬಾಟಲ್ ಓಪನ್ ಆಗುತ್ತದೆ. ಹಬ್ಬದ ಸಂದರ್ಭದಲ್ಲಿ ಪ್ರೀತಿ ಪಾತ್ರರನ್ನು ಒಗ್ಗೂಡಿಸುವ ದಿಸೆಯಲ್ಲಿ ಕಂಪನಿಯು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ನಗರ ಜೀವನ ಶೈಲಿ, ಒತ್ತಡದ ಕಾರ್ಯ ಸೇರಿ ಹಲವು ಕಾರಣಗಳಿಂದಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ಜನ ತಮ್ಮ ಆಪ್ತರನ್ನು ಭೇಟಿ ಮಾಡುವುದಿಲ್ಲ. ಕೆಲಸದ ಒತ್ತಡದ ಮಧ್ಯೆಯೂ ಜನ ತಮ್ಮ ಆಪ್ತರನ್ನು ಭೇಟಿಯಾಗಲಿ ಎಂಬ ಕಾರಣಕ್ಕಾಗಿ ಕೋಕಾ ಕೋಲಾ ಕಂಪನಿಯು #MilkeHiManegiDiwali ದೀಪಾವಳಿ ಎಂಬ ಅಭಿಯಾನ ಆರಂಭಿಸಿದೆ.
ಯಾವುದೇ ಒಬ್ಬ ವ್ಯಕ್ತಿಯು ತಮ್ಮ ಆಪ್ತರಿಗೆ ಆನ್‌ಲೈನ್ ಮೂಲಕ ಬ್ಲ್ಯೂಟೂತ್ ಇರುವ ಕೋಕಾ ಕೋಲಾ ಬುಕ್ ಮಾಡಿದರೆ, ಅದು ಅವರಿಗೆ ತಲುಪುತ್ತದೆ. ಆದರೆ, ಸ್ವೀಕರಿಸಿದವರು ಬುಕ್ ಮಾಡಿದವರ ಬಳಿ ಹೋಗದ ಹೊರತಾಗಿ ಬಾಟಲ್ ಓಪನ್ ಆಗುವುದಿಲ್ಲ. ಹಾಗಾಗಿ, ಬಾಟಲ್ ಸ್ವೀಕರಿಸಿದವರು ತಮ್ಮ ಆಪ್ತರ ಬಳಿ ಹೋಗಿ, ಬ್ಲ್ಯೂಟೂತ್ ಮೂಲಕವೇ ಅದನ್ನು ಓಪನ್ ಮಾಡಬೇಕು. ಇದರಿಂದ ಜನರನ್ನು ದೀಪಾವಳಿ ವೇಳೆ ಒಗ್ಗೂಡಿಸುವುದು ಕಂಪನಿಯ ಉದ್ದೇಶವಾಗಿದೆ. ಕೋಕಾ ಕೋಲಾದ ಅಭಿಯಾನಕ್ಕೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಇಂತಹ ಕೋಕಾ ಕೋಲಾ ಸೀಮಿತವಾಗಿ ಲಭ್ಯವಿದೆ ಎಂದು ತಿಳಿದುಬಂದಿದೆ. coketohome.com ಗೆ ಭೇಟಿ ನೀಡಿ ಇನ್ವಿಟೇಷನ್ ಕಳುಹಿಸಬಹುದಾಗಿದೆ.
ಇದನ್ನೂ ಓದಿ | Brand story | ಅಂದು ರಿಕ್ಷಾ ಚಾಲಕ, ಇಂದು ಬಿಸಿನೆಸ್ 500 ಕೋಟಿ ವಾರ್ಷಿಕ, ಅವರೇ ಬಿಂದು ಜೀರಾ ಮಾಲೀಕ!