Site icon Vistara News

Government Job | ಅನುಭವಿಗಳನ್ನು ಸರ್ಕಾರಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು: ಗೋವಾ ಸಿಎಂ ಸಾವಂತ್

Pramod Savant

ಪಣಜಿ: ಸರ್ಕಾರಿ ಉದ್ಯೋಗ (Government Job) ಆಕಾಂಕ್ಷಿಗಳಿಗೆ ಒಂದು ವರ್ಷ ಕೆಲಸದ ಅನುಭವವನ್ನು ಕಡ್ಡಾಯಗೊಳಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Goa CM Pramod Savant) ಅವರು ಹೇಳಿದ್ದಾರೆ. ಒಂದು ವರ್ಷದವರೆಗೆ ಕೆಲಸದ ಅನುಭವವಿದ್ದರೆ, ಸರ್ಕಾರದ ಕೆಲಸಗಳಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಕೌಶಲಯುಕ್ತ ಸಂಪನ್ಮೂಲದಿಂದ ಹೆಚ್ಚು ದಕ್ಷತೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಗೋವಾದ ತೆಲೀಗೋವಾ ಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.

ಸಿಬ್ಬಂದಿ ಆಯ್ಕೆ ಆಯೋಗದ ಮೂಲಕವೇ ಸರ್ಕಾರಿ ನೇಮಕಾತಿಗಳನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೂಡ ಕೈಗೊಳ್ಳಬೇಕಾದ ಅಗತ್ಯವಿದೆ. ಜತೆಗೇ, ಯಾರಿಗೆ ಸರ್ಕಾರಿ ಉದ್ಯೋಗ ಬೇಕೋ ಅವರು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು ಎಂದು ಸಿಎಂ ಹೇಳಿದ್ದಾರೆ.

ಫ್ರೆಶ್ ಕ್ಯಾಂಡಿಡೇಟ್‌ಗಳನ್ನು ನೇರವಾಗಿ ಸರ್ಕಾರಿ ಉದ್ಯೋಗಕ್ಕೆ ಸೇರಿಸಿಕೊಳ್ಳಬಾರದು. ಉದ್ಯೋಗಾಕಾಂಕ್ಷಿಗಳು ಖಾಸಗಿ ವಲಯದಲ್ಲಿ ಒಂದು ವರ್ಷ ಕೆಲಸ ಮಾಡಿ, ಬಳಿಕ ಸರ್ಕಾರಿ ಉದ್ಯೋಗಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು. ಈ ನೀತಿಯನ್ನು ಕಡ್ಡಾಯಗೊಳಿಸುವ ಅಗತ್ಯವಿದೆ ಎಂದು ಪ್ರಮೋದ್ ಸಾವಂತ್ ಅವರು ತಿಳಿಸಿದ್ದಾರೆ.

ಈ ರೀತಿಯ ನೇಮಕಾತಿಗೆ ಅಗತ್ಯವಿರುವ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕು. ಇದರಿಂದ ಅರ್ಹ ಹಾಗೂ ಕೌಶಲ ಅಭ್ಯರ್ಥಿಗಳೇ ಮಾತ್ರವೇ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಗೋವಾ ಸಿಎ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ.

ಇದನ್ನು ಓದಿ | Rojgar mela | ಒಂದೇ ಒಂದು ರೂಪಾಯಿ ಕೊಡದೆ ಸರ್ಕಾರಿ ಉದ್ಯೋಗ ಸಿಗುವ ಸ್ಥಿತಿ ಸೃಷ್ಟಿಯಾಗಿದೆ ಎಂದ ಪ್ರಲ್ಹಾದ್‌ ಜೋಶಿ

Exit mobile version