Site icon Vistara News

ಹಿಮಾಚಲ ಪ್ರವಾಹದ ಮಧ್ಯೆಯೇ ಆನ್​​ಲೈನ್​ ಮದುವೆ; ವಿಡಿಯೊ ಕಾನ್ಫರೆನ್ಸ್​​ನಲ್ಲೇ ಮುಗಿದ ಶಾಸ್ತ್ರಗಳು

Online Marriage

ಹಿಮಾಚಲ ಪ್ರದೇಶದಾದ್ಯಂತ ಭೀಕರ ಮಳೆ ಸುರಿಯುತ್ತಿದೆ (Himachal Rain). ರಸ್ತೆಗಳೆಲ್ಲ ಬ್ಲಾಕ್ ಆಗಿವೆ. ಜನರ ಪ್ರಯಾಣಕ್ಕೆ ಅಡಚಣೆಯಾಗಿದೆ. ಹಲವರ ಪ್ರಾಣವೂ ಹೋಗಿದೆ. ಇದೆಲ್ಲದರ ಮಧ್ಯೆ ಹಿಮಾಚಲ ಪ್ರದೇಶದಲ್ಲಿ ನಡೆದ ಮದುವೆಯೊಂದು ಭರ್ಜರಿ ಸುದ್ದಿ ಮಾಡಿದೆ. ಶಿಮ್ಲಾದ ಆಶಿಶ್​ ಸಿಂಘಾ ಎಂಬ ವರನಿಗೂ, ಕಲ್ಲುವಿನ ಭಂಟರ್​ ನಿವಾಸಿ ಶಿವಾನಿ ಠಾಕೂರ್​ ಎಂಬ ವಧುವಿಗೂ ವಿಡಿಯೊ ಕಾನ್ಫರೆನ್ಸ್​ನಲ್ಲಿ, ಆನ್​ಲೈನ್​​ನಲ್ಲಿ ಮದುವೆ (Online Marriage) ಮಾಡಲಾಗಿದೆ.

ಇಂದು ಮದುವೆ ನಿಗದಿಯಾಗಿತ್ತು. ವರ ಆಶಿಶ್ ಸಿಂಘಾ ಅವರು ಸೋಮವಾರ ಮೆರವಣಿಗೆ ಮೂಲಕ ವಧುವಿನ ಮನೆ ಇರುವ ಭಂಟರ್​ಗೆ ತೆರಳಬೇಕಿತ್ತು. ಆದರೆ ಕುಲ್ಲು ಜಿಲ್ಲೆ ಸಂಪೂರ್ಣ ವಿನಾಶಕ್ಕೀಡಾಗುತ್ತಿದೆ. ಅಲ್ಲಿ ಪ್ರಾಕೃತಿಕ ವಿಕೋಪ ಮಿತಿಮೀರಿದೆ. ಜನರು ಮನೆ ಬಿಟ್ಟು ರಸ್ತೆಗೆ ಇಳಿಯ ಸ್ಥಿತಿ ಇದೆ. ಅಷ್ಟರ ಮಟ್ಟಿಗೆ ಮಳೆ-ಪ್ರವಾಹ. ಹೀಗಾಗಿ ವರನಿಗೆ ವಧುವಿನ ಮನೆಗೆ ಬರಲು ಸಾಧ್ಯವಾಗಲಿಲ್ಲ. ಇಟ್ಟ ಮುಹೂರ್ತ ತಪ್ಪಿಸಬಾರದು ಎಂಬ ಕಾರಣಕ್ಕೆ ಎರಡೂ ಕುಟುಂಬದವರು ಸೇರಿ ಆನ್​ಲೈನ್​​ನಲ್ಲಿಯೇ ಮದುವೆ ಮಾಡಿಸಿದ್ದಾರೆ. ವರ ತಮ್ಮ ಮನೆಯಲ್ಲೇ ಕುಳಿತಿದ್ದ, ವಧು ಆಕೆಯ ಮನೆಯಲ್ಲೇ ಇದ್ದಳು. ಇವರಿಬ್ಬರೂ ವಿಡಿಯೊ ಕಾನ್ಫರೆನ್ಸ್ ಮೂಲಕ ಪರಸ್ಪರ ಮುಖ ನೋಡಿಕೊಂಡು-ಮದುವೆಯಾಗಿದ್ದಾರೆ.

ಇದನ್ನೂ ಓದಿ: Online Fraud: ಆನ್‌ಲೈನ್‌ನಲ್ಲಿ ಸ’ಮೋಸ’ ಆರ್ಡರ್‌ ಮಾಡಿ 1.4 ಲಕ್ಷ ರೂ. ಕಳೆದುಕೊಂಡ ಡಾಕ್ಟರ್

ಈ ಮದುವೆಯಲ್ಲಿ ಮಾಜಿ ಶಾಸಕ ರಾಕೇಶ್ ಸಿಂಗ್​ ಅವರೂ ವರನ ಕಡೆಯಿಂದ ಪಾಲ್ಗೊಂಡಿದ್ದರು. ವರ್ಚ್ಯುವಲ್ ಮದುವೆ ಬಗ್ಗೆ ಅವರೂ ತಿಳಿಸಿದ್ದಾರೆ. 2020-2021ರಲ್ಲಿ ಕೊವಿಡ್​ 19 ಸಾಂಕ್ರಾಮಿಕ ಇದ್ದ ಕಾಲದಲ್ಲಿ ಐದಾರು ಕಡೆ ಹೀಗೆ ಆನ್​ಲೈನ್ ಮದುವೆ ನಡೆದಿತ್ತು. ಹೈದರಾಬಾದ್​ನ ಕೊಟ್ಟಂಗುಂಡನಲ್ಲಿರುವ ವಧುವಿಗೂ, ಸೌದಿ ಅರೇಬಿಯಾದಲ್ಲಿರುವ ಯುವಕನಿಗೂ ಆನ್​ಲೈನ್​​ನಲ್ಲೇ ಮದುವೆ ಶಾಸ್ತ್ರ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

Exit mobile version