Site icon Vistara News

Maha Politics | ಉದ್ಧವ್‌ ಸಂಪುಟದಲ್ಲಿ ಉಳಿದಿರುವುದು 3 ಶಿವಸೇನಾ ಸಚಿವರು ಮಾತ್ರ!

Maha Political Crisis

ಮುಂಬಯಿ: ಮಹಾರಾಷ್ಟ್ರ ರಾಜಕಾರಣ ನಾಟಕೀಯ ತಿರುವುಗಳನ್ನು, ಜಟಿಲ ಕಾನೂನು ಸಂಘರ್ಷಗಳನ್ನು ಪಡೆಯುತ್ತಿದೆ. ಈ ನಡುವೆ ಶಿವಸೇನಾದಿಂದ ಬಂಡಾಯವೆದ್ದಿರುವ ಏಕನಾಥ್‌ ಶಿಂಧೆ ಬಣಕ್ಕೆ ಸೇರುತ್ತಿರುವವರ ಸಂಖ್ಯೆ ಎಷ್ಟು ಹೆಚ್ಚಿದೆ ಎಂದರೆ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಸಚಿವ ಸಂಪುಟದಲ್ಲಿ ಈಗ ಶಿವಸೇನಾದ ೩ ಸಚಿವರು ಮಾತ್ರ ಉಳಿದಿದ್ದಾರೆ.

ಉನ್ನತ ಶಿಕ್ಷಣ ಸಚಿವ ಉದಯ್‌ ಸಾಮಂತ್‌ ಭಾನುವಾರ ಗುವಾಹಟಿಗೆ ತೆರಳಿ ಶಿಂಧೆ ಬಣವನ್ನು ಸೇರಿಕೊಂಡಿದ್ದಾರೆ. ಈ ನಡುವೆ ಶಿಂಧೆ ಬಣ ತಮ್ಮ ಗುಂಪಿನ ೧೬ ಶಾಸಕರ ಅನರ್ಹತೆ ನೋಟಿಸ್‌ ಅನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ

ಮಹಾರಾಷ್ಟ್ರ ವಿಕಾಸ ಅಘಾಡಿ ಮೈತ್ರಿಕೂಟದ ವಿರುದ್ಧ ಟೀಕಿಸಿರುವ ಶಿಂಧೆ, ” ಮುಂಬಯಿನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದ ರೂವಾರಿ ದಾವುದ್‌ ಇಬ್ರಾಹಿಂ ಜತೆ ಒಪ್ಪಂದ ಮಾಡಿಕೊಂಡಿರುವವರ ಜತೆ ಬಾಳಾಸಾಹೇಬ್‌ ಅವರ ಶಿವಸೇನಾ ಹೇಗೆ ಕೈ ಜೋಡಿಸಲು ಸಾಧ್ಯ? ನಾನು ಇದೇ ಕಾರಣಕ್ಕಾಗಿ ಅಘಾಡಿ ಮೈತ್ರಿಯನ್ನು ವಿರೋಧಿಸುತ್ತೇನೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Maha politics: ಅನರ್ಹತೆ ನೋಟಿಸ್‌ ಪ್ರಶ್ನಿಸಿ ಸುಪ್ರೀಂ ಬಾಗಿಲು ಬಡಿದ ಶಿಂಧೆ ಟೀಮ್‌, ನಾಳೆಯೇ ವಿಚಾರಣೆಗೆ ಲಿಸ್ಟಿಂಗ್

Exit mobile version