Site icon Vistara News

Hindi Imposition | ಹಿಂದಿ ವಿರೋಧಿಸುವುದು ಗಿಮಿಕ್ ಅಷ್ಟೇ, ಯಾವ ಭಾಷೆಯನ್ನು ಹೇರಿಕೆ ಮಾಡುತ್ತಿಲ್ಲ: ಶಿಕ್ಷಣತಜ್ಞ ಇ ಬಾಲಗುರುಸ್ವಾಮಿ

E Balaguruswamy @ Hindi imposition

ಚೆನ್ನೈ: ಹಿಂದಿಯನ್ನು ವಿರೋಧಿಸುವುದು ಒಂದು ಗಿಮಿಕ್ ಆಗಿದೆ. ಸರ್ಕಾರದ ಯಾವುದೇ ನೀತಿ ಯಾವುದೇ ಭಾಷೆಯನ್ನು ಹೇರಿಕೆ (Hindi Imposition) ಮಾಡುವುದಿಲ್ಲ ಎಂದು ಅಣ್ಣಾಮಲೈ ವಿವಿಯ ಮಾಜಿ ಕುಲಪತಿ ಹಾಗೂ ಖ್ಯಾತ ಶಿಕ್ಷಣ ತಜ್ಞ ಇ ಬಾಲಗುರುಸ್ವಾಮಿ ಅವರು ಹೇಳಿದ್ದಾರೆ. ಮಕ್ಕಳಿಗೆ ತ್ರಿ ಭಾಷಾ ಸೂತ್ರ ಅಡಿಯಲ್ಲಿ ಶಿಕ್ಷಣ ನೀಡುವುದನ್ನು ಪ್ರೇರೇಪಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ನಾವು ತ್ರಿ ಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಬೇಕಿದೆ. ಸರ್ಕಾರಿ ಶಾಲಾ ಮಕ್ಕಳು ಇಂಗ್ಲಿಷ್ ಹಾಗೂ ಮಾತೃಭಾಷೆ ಜತೆಗೆ ಮತ್ತೊಂದು ಸ್ವದೇಶಿ ಭಾಷೆ ಕಲಿಕೆಯ ಅವಕಾಶವನ್ನು ಪಡೆಯಲಿದ್ದಾರೆ. ಇದರಿಂದಾಗಿ ಅವರು ಬೇರೆ ಬೇರೆ ರಾಜ್ಯಗಳಲ್ಲಿ ಉದ್ಯೋಗ ಮತ್ತು ವ್ಯಾಪಾರದ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದೆ ಹೇರಿಕೆಯ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಇದೊಂದು ಕೇವಲ ರಾಜಕೀಯ ಅಭಿಪ್ರಾಯವಷ್ಟೇ. ಯಾವುದೇ ರಾಜ್ಯ, ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯು ಹಿಂದಿಯನ್ನು ಹೇರಿಕ ಮಾಡುತ್ತಿಲ್ಲ. ಇದೊಂದು ತಪ್ಪು ಅಭಿಪ್ರಾಯವಾಗಿದೆ. ಎಂಟನೇ ತರಗತಿಯವರೆಗೆ ಮಾತೃಭಾಷೆಯು ಬೋಧನಾ ಮಾಧ್ಯಮವಾಗಿದೆ. ಇದು ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ. ವಿದ್ಯಾರ್ಥಿಯು ಇದೇ ಮಾಧ್ಯಮದಲ್ಲಿ ಮುಂದುವರಿಯಲು ಬಯಸಿದರೆ, ಅವನು ಅಥವಾ ಅವಳು ಅದನ್ನು ಉನ್ನತ ಮಾಧ್ಯಮಿಕ ಹಂತಗಳಿಗೆ ಕೊಂಡೊಯ್ಯಬಹುದು ಎಂದು ಮಾತ್ರ ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | ಹಿಂದಿ ಹೇರಿಕೆ ಮತ್ತು ನುಡಿ ಸಮಾನತೆ: ಒಂದು ಮಾತುಕತೆ

Exit mobile version