ಬೆಂಗಳೂರು: ಈ ವರ್ಷದ ಆಸ್ಕರ್ ಪ್ರಶಸ್ತಿ ಸ್ಪರ್ಧೆಯ ಕಣಕ್ಕೆ ಕನ್ನಡದ ಎರಡು ಚಿತ್ರಗಳು ಧುಮುಕಿವೆ. ಕಾಂತಾರ ಹಾಗೂ ವಿಕ್ರಾಂತ್ ರೋಣ ಸಿನಿಮಾಗಳು ಆಸ್ಕರ್ ಪ್ರಶಸ್ತಿಯ ಸ್ಪರ್ಧಾರ್ಹತೆ ಗಳಿಸಿಕೊಂಡಿವೆ. ಇದಲ್ಲದೆ ಇನ್ನೂ ಹಲವು ಭಾರತೀಯ ಸಿನಿಮಾಗಳು ಆಸ್ಕರ್ ಸ್ಪರ್ಧೆಗೆ ಮುಂದಾಗಿವೆ.
ದಕ್ಷಿಣ ಭಾರತದಿಂದ ಕಾಂತಾರ, ವಿಕ್ರಾಂತ್ ರೋಣ (ಕನ್ನಡ), ಆರ್‌ಆರ್‌ಆರ್ (ತೆಲುಗು), ರಾಕೆಟ್ರಿ: ದಿ ನಂಬಿ ಎಫೆಕ್ಟ್ (ತಮಿಳು), ಇರವಿನ್ ನಿಳಲ್ (ತಮಿಳು) ತುಜ್ಯಾ ಸಾಥಿ ಕಹೀ ಹೈ, ಮಿ ವಸಂತರಾವ್ (ಮರಾಠಿ) ಹಿಂದಿಯ ಗಂಗೂಬಾಯಿ ಕಾಠಿಯಾವಾಡಿ, ದಿ ಕಾಶ್ಮೀರ್ ಫೈಲ್ಸ್ ಸ್ಪರ್ಧೆಗೆ ಅಣಿಯಾಗಿವೆ. ಇವುಗಳು ಖಾಸಗಿಯಾಗಿ ಸ್ಪರ್ಧಿಸುತ್ತಿವೆ.
ಆಸ್ಕರ್ ಪ್ರಶಸ್ತಿಯಲ್ಲಿ ಒಟ್ಟಾರೆ 10 ವಿಭಾಗಗಳಿದ್ದು, ಪ್ರತಿಯೊಂದು ವಿಭಾಗಕ್ಕೂ ಪ್ರತಿ ದೇಶದಿಂದಲೂ ಒಂದು ಸಿನಿಮಾ ಮಾತ್ರ ಆಯ್ಕೆಯಾಗುತ್ತದೆ. ಭಾರತದಿಂದ ಹೀಗೆ ʼಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರʼ ವಿಭಾಗಕ್ಕೆ ಈ ಬಾರಿ ಆಯ್ಕೆಯಾಗಿರುವ ಸಿನಿಮಾ ಗುಜರಾತಿಯ ʼದಿ ಚೆಲ್ಲೋ ಶೋʼ. ಆರ್‌ಆರ್‌ಆರ್ ಸಿನಿಮಾದ ʼನಾಟು ನಾಟುʼ ಹಾಡು ʼಬೆಸ್ಟ್ ಒರಿಜಿನಲ್ ಸಾಂಗ್ʼ ವಿಭಾಗದಲ್ಲಿ ಸ್ಪರ್ಧೆಗೆ ಕಳಿಸಲಾಗಿದೆ. ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್ ವಿಭಾಗದಲ್ಲಿ “ಆಲ್ ದೇಟ್ ಬ್ರೀದ್ಸ್ʼ ಹಾಗೂ ʼಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲಂʼ ವಿಭಾಗದಲ್ಲಿ ʼದಿ ಎಲಿಫೆಂಟ್ ವ್ಹಿಸ್ಪರರ್ʼಗಳನ್ನು ಕಳಿಸಲಾಗಿದೆ.
ಜೂನ್ 24ರಂದು ಆಸ್ಕರ್ ಪ್ರಶಸ್ತಿಗೆ ಅಂತಿಮಗೊಂಡಿರುವ 5 ಸಿನಿಮಾಗಳ ಶಾರ್ಟ್‌ಲಿಸ್ಟ್ ಘೋಷಣೆಯಾಗಲಿದೆ. ಅಲ್ಲಿಯವರೆಗೆ ಕುತೂಹಲ ಉಳಿಯಲಿದೆ.
ಇದನ್ನೂ ಓದಿ | kantara in Oscar | ಕಾಂತಾರ ಮುಕುಟಕ್ಕೆ ಮತ್ತೊಂದು ಗರಿ, ಆಸ್ಕರ್ ಪ್ರಶಸ್ತಿಯ 2 ವಿಭಾಗದಲ್ಲಿ ಸ್ಪರ್ಧಾರ್ಹತೆ