ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ (RRR Movie) ಚಿತ್ರ ನಾಟು ನಾಟು …. ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಮತ್ತು ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ಕೆಟಗರಿಯ ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ದೊರೆತಿವೆ. ಈ ಆಸ್ಕರ್ ಸಂಭ್ರವನ್ನು ಇಡೀ ದೇಶವೇ ಆಚರಿಸುತ್ತಿದೆ. ಎಲ್ಲರೂ ಚಿತ್ರತಂಡಗಳನ್ನು ಹಾರೈಸುತ್ತಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra Modi), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರೂ ಹಿಂದೆ ಬಿದ್ದಿಲ್ಲ. ರಾಜಕೀಯ ನಾಯಕರು ಶುಭಾಶಗಳನ್ನು ಟ್ವಟರ್ ಮೂಲ ಕೋರಿದ್ದಾರೆ(Oscars 2023).
ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ಇದೊಂದು ಅಸಾಧಾರಣವಾದ ಸಾಧನೆ. ನಾಟು ನಾಟು ಜನಪ್ರಿಯತೆಯು ಈಗ ಜಾಗತಿಕವಾಗಿದೆ. ಮುಂಬರುವ ಅನೇಕ ವರ್ಷಗಳವರೆಗೂ ಈ ಹಾಡು ನೆನಪಿನಲ್ಲಿ ಉಳಿಯಲಿದೆ. ಈ ಪ್ರತಿಷ್ಠಿತ ಗೌರವ ಪಡೆದ ಎಂ ಎಂ ಕೀರವಾಣಿ ಮತ್ತು ಚಂದ್ರಬೋಸ್ ಹಾಗೂ ಇಡೀ ತಂಡಕ್ಕೆ ಶುಭಾಶಯಗಳು. ಭಾರತವು ಹೆಮ್ಮೆ ಪಡುತ್ತದೆ ಎಂದು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಅದೇ ರೀತಿ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ಕೆಟಗರಿಯಲ್ಲಿ ಪ್ರಶಸ್ತಿ ಗೆದ್ದ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡಕ್ಕೂ ಅವರು ಶುಭಾಶಯ ಕೋರಿದ್ದಾರೆ.
Oscars 2023: ಪ್ರಧಾನಿ ಮೋದಿ ಟ್ವೀಟ್…
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದೇನು?
ಭಾರತದ ಜನಪ್ರಿಯ ನಾಟು ನಾಟು ನಿಜವಾಗಿಯೂ ಈಗ ಜಾಗತಿಕವಾಗಿದೆ. ಬೆಸ್ಟ್ ಒರಿಜಿಯನ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ ಗೆದ್ದ ಎಂ ಎಂ ಕೀರವಾಣಿ, ಚಂದ್ರಬೋಸ್ ಹಾಗೂ ಇಡೀ ಆರ್ ಆರ್ ಆರ್ ತಂಡಕ್ಕೆ ಶುಭಾಶಯಗಳು ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ಅದೇ ರೀತಿ ಅವರು, ದಿ ಎಲಿಫೆಂಟ್ ವಿಸ್ಪರರ್ಸ್ ತಂಡಕ್ಕೂ ಶುಭಕೋರಿದ್ದಾರೆ. ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಗುನೀತ್ ಮೊಂಗಾ ಅವರು ಭಾರತವು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್…
ಇದನ್ನೂ ಓದಿ: Oscars 2023: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ RRR ಚಿತ್ರತಂಡದ ಸಂಭ್ರಮದ ಕ್ಷಣಗಳು ಹೇಗಿತ್ತು?
ಮತ್ಯಾವ ನಾಯಕರು ಶುಭಾಶಯ ಹೇಳಿದ್ದಾರೆ?
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಅನುರಾಗ ಠಾಕೂರ್ ಸೇರಿ ಹಲವು ರಾಜಕೀಯ ನಾಯಕರು, ಆಸ್ಕರ್ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡ ಆರ್‌ಆರ್‌ಆರ್ ಹಾಗೂ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರ ತಂಡಗಳಿಗೆ ಶುಭಾಶಯ ಕೋರಿದ್ದಾರೆ.