Site icon Vistara News

Oscars 2023: ಇತಿಹಾಸ ಸೃಷ್ಟಿಸಿದ RRR: ಸೋಷಿಯಲ್‌ ಮೀಡಿಯಾದಲ್ಲಿ ಶ್ಲಾಘನೆಗಳ ಸುರಿಮಳೆ

Oscars 2023 RRR Celebs took to social media to congratulate the entire team

ಬೆಂಗಳೂರು: ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಇದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಎಲ್ಲರೂ ಭಾವಪರವಶರಾಗಿದ್ದಾರೆ. ಈ ಶುಭ ಸುದ್ದಿಗೆ ಹಲವಾರು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ನಲ್ಲಿ

ʻʻಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ. ನಮ್ಮ ಉದ್ಯಮದ ಅಪಾರ ಪ್ರತಿಭೆ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ. ಈ ಮೇರುಕೃತಿಗೆ ಜೀವ ತುಂಬುವಲ್ಲಿ ಅವರ ಪ್ರಯತ್ನಗಳಿಗಾಗಿ ಆರ್‌ಆರ್‌ಆರ್‌ ಇಡೀ ತಂಡಕ್ಕೆ ಅಭಿನಂದನೆಗಳುʼʼ ಎಂದು ಬರೆದುಕೊಂಡಿದ್ದಾರೆ.

ನಾಟು ನಾಟು ಅತ್ಯುತ್ತಮ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತೀಯ ನಿರ್ಮಾಣದಿಂದ ಈ ಸಾಧನೆ ಮಾಡಿದ ಮೊದಲ ಹಾಡು ಇದಾಗಿದೆ.

ಇದನ್ನೂ ಓದಿ: Oscars 2023: ಆಸ್ಕರ್ ಪ್ರಶಸ್ತಿ ಸ್ವೀಕರಿಸಿ RRR ಚಿತ್ರದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಹೇಳಿದ್ದೇನು?

ಚಿತ್ರದ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್‌ನಲ್ಲಿ,

ʻʻಆರ್‌ಆರ್‌ಆರ್‌ ಭಾರತದ ಮೊದಲ ಆಸ್ಕರ್ ಪ್ರಶಸ್ತಿಯನ್ನು ಅತ್ಯುತ್ತಮ ಗೀತೆಯ ವಿಭಾಗದಲ್ಲಿ ನಾಟು ನಾಟು ಹಾಡಿನೊಂದಿಗೆ ತಂದ ಮೊದಲ ಚಲನಚಿತ್ರವಾಗಿದೆ. ಈ ಸಂತೋಷದ ಕ್ಷಣಗಳನ್ನು ಹೇಳಲು ಪದಗಳು ಸಾಲುತ್ತಿಲ್ಲ. ಪ್ರಪಂಚದಾದ್ಯಂತ ಇರುವ ನಮ್ಮ ಎಲ್ಲಾ ಅಭಿಮಾನಿಗಳಿಗೆ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ. ಧನ್ಯವಾದ!! ಜೈ ಹಿಂದ್!ʼʼಎಂದು ಬರೆದುಕೊಂಡಿದ್ದಾರೆ.

ವಿಶ್ವದ ಅಗ್ರಸ್ಥಾನದಲ್ಲಿ ನಾಟು ನಾಟು ಎಂದು ಟ್ವೀಟ್‌ ಮಾಡಿದ ನಟ ಚಿರಂಜೀವಿ

ಆಲಿಯಾ ಭಟ್‌ ಶುಭ ಹಾರೈಕೆ

ನಟ ಗೌತಮ್‌ ಕಾರ್ತಿಕ್‌ ಆರ್‌ಆರ್‌ಆರ್‌ ತಂಡಕ್ಕೆ ಶುಭ ಹಾರೈಕೆ

ಆಗಾಗ ಹೇಳುವ ಹಾಗೆ ಸಿನಿಮಾ ಸಾರ್ವತ್ರಿಕ ಭಾಷೆಯಾಗಿದೆ. ಆರ್‌ಆರ್‌ಆರ್‌ ಹಾಗೂ ಎಲಿಫಂಟ್‌ ವಿಸ್ಪರರ್ಸ್‌ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳಿಗಾಗಿ ಅಭಿನಂದನೆಗಳು. ಇದು ಹೆಮ್ಮೆಯ ಕ್ಷಣ ಎಂದು ಅಜಯ್‌ ದೇವಗನ್‌ ಟ್ವೀಟ್‌ ಮಾಡಿದ್ದಾರೆ.

ಅಜಯ್‌ ದೇವಗನ್‌ ಟ್ವೀಟ್‌

ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಮತ್ತು ಏಷ್ಯನ್ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಭಿನಂದನೆಗಳು ಕೀರಾವಾಣಿ, ಚಂದ್ರಬೋಸ್, ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಹಾಗೂ ಇಡೀ ತಂಡಕ್ಕೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Oscars 2023 ಗೆದ್ದ RRR ಸಿನಿಮಾದ ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಜಾಗ ಈಗ ಯುದ್ಧದ ಸ್ಥಳ!

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಟ್ವೀಟ್‌

ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಭಾರತೀಯರು ಕುಣಿದು ಕುಪ್ಪಳಿಸಿದ್ದಾರೆ. ಈ ಹಿಂದೆಯೂ ಭಾರತೀಯ ಕಲಾವಿದರು, ಭಾರತದ ಕಥಾ ವಸ್ತುಗಳನ್ನು ಒಳಗೊಂಡ ಸಿನಿಮಾಗಳಿಗೆ ಆಸ್ಕರ್ ಪ್ರಶಸ್ತಿ ಬಂದಿವೆ. ಆದರೆ, ಸಂಪೂರ್ಣವಾಗಿ ಭಾರತೀಯ ಸಿನಿಮಾವೊಂದು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುತ್ತಿರುವುದು ಇದೇ ಮೊದಲು. ಹಾಗಾಗಿ, ಈ ಆಸ್ಕರ್ ಪ್ರಶಸ್ತಿಗೆ ವಿಶೇಷ ಮನ್ನಣೆ ಇದೆ.

Exit mobile version