Site icon Vistara News

Oscars 2023 shortlist | ಆಸ್ಕರ್ ರೇಸಿನಲ್ಲಿ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಸಾಂಗ್, ಇನ್ನೂ 3 ಚಿತ್ರ ನಾಮನಿರ್ದೇಶನ

RRR Movie

ನವದೆಹಲಿ: 2023ರ ಸಾಲಿನ ಆಸ್ಕರ್ ಪ್ರಶಸ್ತಿಯ ಹಾಡುಗಳ ವಿಭಾಗದ ಅಂತಿಮ ಪಟ್ಟಿಗೆ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಸಾಂಗ್ ನಾಮನಿರ್ದೇಶನಗೊಂಡಿದೆ. ಈ ಮಾಹಿತಿಯನ್ನು ಆರ್‌ಆರ್‌ಆರ್ ಚಿತ್ರತಂಡವು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ(Oscars 2023 shortlist). ಹಾಗೆಯೇ, ಅಂತಾರಾಷ್ಟ್ರೀಯ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಗುಜರಾತಿ ಸಿನಿಮಾ ಛೆಲ್ಲೋ ಶೋ, ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಆಲ್‌ ದಟ್‌ ಬ್ರೀಥ್ಸ್‌ ಹಾಗೂ ಕಿರು ಸಾಕ್ಷ್ಯ ಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್‌ ವಿಸ್ಪರರ್‌ ಆಯ್ಕೆಯಾಗಿದೆ.

”ಅಕಾಡೆಮಿ ಪ್ರಶಸ್ತಿಗಳ ಅಂತಿಮಪಟ್ಟಿಗೆ ನಾಮನಿರ್ದೇಶನಗೊಂಡ ಭಾರತದ ಮೊದಲ ಹಾಡು ಇದು. ನಮ್ಮ ಈ ಪ್ರಯಾಣ ಪೂರ್ತಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ವಂದನೆಗಳು,” ಎಂದು ಆರ್‌ಆರ್‌ಆರ್ ಸಿನಿಮಾದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ. ಪ್ರಶಸ್ತಿಗಾಗಿ ನಾಟು ನಾಟು ಸೇರಿ ಒಟ್ಟು 14 ಸಾಂಗ್ಸ್ ನಾಮಿನೇಟ್ ಆಗಿವೆ.

ಎಂ ಎಂ ಕೀರವಾಣಿ ಅವರು ನಾಟು ನಾಟು ಹಾಡನ್ನು ಸಂಯೋಜಿಸಿದ್ದಾರೆ. ಕಾಲ ಭೈರವ್ ಮತ್ತು ರಾಹುಲ್ ಸಿಪ್ಲಿಗುಂಜ್ ಅವರು ಹಾಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 24ರಂದು ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಾಟು ನಾಟು ಹಾಡನ್ನು ಗೋಲ್ಡನ್ ಗ್ಲೋಬ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್‌ಗೂ ನಾಮಿನೇಟ್ ಮಾಡಲಾಗಿದೆ.

ಇದನ್ನೂ ಓದಿ | oscars 2023 Shortlist | ಆಸ್ಕರ್ ರೇಸಿನಲ್ಲಿ ಟಾಪ್‌ಗನ್-2, ಅವತಾರ್-2 ಮುನ್ನಡೆ! ಆರ್‌ಆರ್‌ಆರ್ ಕತೆ ಏನು?

Exit mobile version