ಭೋಪಾಲ್: ನಮ್ಮ ಮಾಜಿ ಶಾಸಕರಿಗೆ (Former MLAs) ಅವರ ಊರಿನಲ್ಲಿ 50 ಮತಗಳು ಬಿದ್ದಿಲ್ಲ (50 Votes). ನಾವು ಗೆಲ್ಲೋದು ಹೇಗೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ನಾಯಕ ಕಮಲ್ ನಾಥ್ (Madhya Pradesh Congress Leader Kamal Nath) ಅವರು ಹೇಳಿದ್ದಾರೆ. ತಮ್ಮ ಊರುಗಳಲ್ಲಿ 50 ಮತಗಳು ಕೂಡ ಬಿದ್ದಿಲ್ಲ ಎಂದು ಮಾಜಿ ಶಾಸಕರು ಕಮಲ್ ನಾಥ ಅವರಿಗೆ ತಿಳಿಸಿದ್ದಾರೆ. ಮಧ್ಯ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಕಮಲ್ ನಾಥ್ ಅವರು, ಚುನಾವಣಾ ಅಕ್ರಮ ನಡೆದಿದೆ (electoral malpractices) ಎಂದೇನೂ ಆರೋಪಿಸಲಿಲ್ಲ. ಆದರೆ, ಮತ್ತೊಂದೆಡೆ, ದಿಗ್ವಿಜಯ್ ಸಿಂಗ್ (Digvijaya Singh) ವರು ವಿದ್ಯುನ್ಮಾನ ಮತಯಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಎರಡು ದಿನಗಳ ನಂತರ ಈ ಹೇಳಿಕೆಗಳು ಬಂದಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಏಕೈಕ ಗೆಲುವಿನಲ್ಲಿ ಸಮಾಧಾನ ಕಂಡುಕೊಳ್ಳಬೇಕಾಯಿತು. ಮಧ್ಯ ಪ್ರದೇಶದಲ್ಲಿ 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 66 ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಧ್ಯಪ್ರದೇಶದಲ್ಲಿ ಸಮಬಲ ಸ್ಪರ್ಧೆ ನಡೆಯಲಿದೆ ಎಂದು ಎಕ್ಸಿಟ್ ಪೋಲ್‌ಗಳ ಊಹೆ ಕೂಡ ಸುಳ್ಳಾಯಿತು.
ಕಾಂಗ್ರೆಸ್‌ನ ಪ್ರಚಾರದ ನೇತೃತ್ವ ವಹಿಸಿರುವ ಕಮಲ್ ನಾಥ್, ಪಕ್ಷದ ಕಳಪೆ ಪ್ರದರ್ಶನದ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲು ಪಕ್ಷದ ಜತೆ ಚರ್ಚಿಸಲಾಗುವುದು. ಈ ಕುರಿತು ಗೆದ್ದ ಮತ್ತು ಸೋತ ಅಭ್ಯರ್ಥಿಗಳ ಜತೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೆಲವು ಕಾಂಗ್ರೆಸ್ ನಾಯಕು ಇವಿಎಂ ಹ್ಯಾಕ್ ಬಗ್ಗೆ ಆರೋಪಿಸುತ್ತಿದ್ದಾರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕಮಲ್ ನಾಥ್ ಅವರು, ಚರ್ಚೆ ನಡೆಸದೆ ತೀರ್ಮಾನಕ್ಕೆ ಬರುವುದು ಸರಿಯಲ್ಲ, ನಾನು ಮೊದಲು ಎಲ್ಲರೊಂದಿಗೆ ಮಾತನಾಡುತ್ತೇನೆ. ಆ ಮೇಲೆ ಈ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದರು.
ಇಷ್ಟಾಗಿಯೂ ಅವರು ಚುನಾವಣಾ ಫಲಿತಾಂಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಚಿತ್ತ ಕಾಂಗ್ರೆಸ್ ಪರವಾಗಿಯೇ ಇದೆ ಎಂದು ಒತ್ತಿ ಹೇಳಿದರು. ಮಧ್ಯ ಪ್ರದೇಶದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದು ನಿಮಗೂ(ಸುದ್ದಿಗಾರರು) ಗೊತ್ತಿತ್ತು. ಈಗ ನನ್ನೇಕೆ ಕೇಳುತ್ತಿದ್ದೀರಿ. ನಮ್ಮ ಕೆಲವು ಎಮ್ಮೆಲ್ಲೆಗಳು ತಮ್ಮ ಊರಿನಲ್ಲಿ 50 ಮತಗಳು ಬಿದ್ದಿಲ್ಲ ಎಂದು ಹೇಳಿದ್ದಾರೆ. ಹೀಗೆ ಆಗಲು ಹೇಗೆ ಸಾಧ್ಯ ಎಂದು ಕಮಲ್ ನಾಥ್ ಅವರು ಹೇಳಿದ್ದಾರೆ.
ಬಿಜೆಪಿಗೆ ರಿಸಲ್ಟ್ ಎರಡು ದಿನ ಮೊದ್ಲೇ ಗೊತ್ತಿತ್ತು! ಕಾಂಗ್ರೆಸ್ ಹೊಸ ವರಾತ್
ಬಿಜೆಪಿ (Bhartiya Janata Party) ಗೆದ್ದಾಗಲೆಲ್ಲ ಪ್ರತಿಪಕ್ಷಗಳು (Opposition Parties) ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ (EVM Hack) ಮಾಡಲಾಗಿದೆ ಎಂದು ಆರೋಪ ಮಾಡುತ್ತಿದ್ದವು. ಈಗ ಕಾಂಗ್ರೆಸ್ ಪಕ್ಷ (Congress Party) ಹೊಸ ಪ್ರಲಾಪವನ್ನು ಆರಂಭಿಸಿದೆ. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ (Congress Leader Digvijaya Singh) ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿ, ಭಾರತೀಯ ಜನತಾ ಪಾರ್ಟಿಗೆ ಚುನಾವಣಾ ಫಲಿತಾಂಶವು (Election Result 2023) ಎರಡು ದಿನಗಳ ಮುಂಚಿತವಾಗಿಯೇ ಗೊತ್ತಿತ್ತು ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿ ಚುನಾವಣಾ ಅಕ್ರಮ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಫೇಸ್‌ಬುಕ್ ಪೋಸ್ಟ್ ಮತ್ತು ಭಾರತೀಯ ಚುನಾವಣಾ ಆಯೋಗದ ಫಲಿತಾಂಶ ಪುಟದ ಎರಡು ಸ್ಕ್ರೀನ್ ಶಾಟ್ ಷೇರ್ ಮಾಡಿಕೊಂಡಿದ್ದಾರೆ. ಅಲ್ಲದೇ, ”ಈ ಎರಡು ಚಿತ್ರಗಳನ್ನು ಹತ್ತಿರದಿಂದ ನೋಡಿ. ಖಚ್ರೋಡ್ ಅಸೆಂಬ್ಲಿ ಕ್ಷೇತ್ರದಲ್ಲಿ ಪ್ರತಿ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದರು ಮತ್ತು ಮತಗಳ ಅಂತರ ಎಷ್ಟು ಎಂಬುದನ್ನು ಬಿಜೆಪಿ ಕಾರ್ಯಕರ್ತರು ಬರೆದಿದ್ದಾರೆ. ಮುಖ್ಯವಾಗಿ, ಈ ಪೋಸ್ಟ್ ಅನ್ನು ಎಣಿಕೆಗೆ ಎರಡು ದಿನಗಳ ಮೊದಲು ಅಂದರೆ ಡಿಸೆಂಬರ್ 1ರಂದು ಮಾಡಲಾಗಿದೆ. ಈಗ ಇದನ್ನು ಫಲಿತಾಂಶಗಳೊಂದಿಗೆ ತುಲನೆ ಮಾಡಿ” ಎಂದು ಬರೆದುಕೊಂಡಿದ್ದಾರೆ.
इन दो तस्वीरों पर गौर करें
— digvijaya singh (@digvijaya_28) December 5, 2023
लाल बैकग्राउंड में BJP कार्यकर्ता लिख रहे हैं खाचरौद विधानसभा चुनाव में किसे कितने वोट गिरे और कौन कितने वोट से जीत रहा है
महत्वपूर्ण यह है कि यह पोस्ट मतगणना से 2 दिन पहले यानी 1 दिसंबर को ही लिख दी गयी थी।
अब नतीजे के बाद की तस्वीर से मिलान कर लें pic.twitter.com/7PdlsFCJDM
ಮಧ್ಯಪ್ರದೇಶದ ನಾಗಡ-ಖಚ್ರೋಡ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಡಾ. ತೇಜ್‌ಬಹದ್ದೂರ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಅಭ್ಯರ್ಥಿ ದಿಲಿಪ್ ಸಿಂಗ್ ಗುರ್ಜರ್ ಅವರನ್ನು 15,927 ಮತಗಳ ಅಂತರದಿಂದ ಸೋಲಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಉಲ್ಲೇಖಿಸಿರುವ ಫೇಸ್‌ಬುಕ್ ಪೋಸ್ಟ್ ಅನಿಲ್ ಚಚ್ಚೇದ್ ಅವರ ಪ್ರೊಫೈಲ್‌ನಿಂದ ತೆಗೆದುಕೊಳ್ಳಲಾಗಿದೆ. ಈ ಪ್ರೊಫೈಲ್‌ನಲ್ಲಿ ಅವರು ಡಿಜಿಟಲ್ ಕ್ರಿಯೇಟರ್ ಎಂದು ಪರಿಚಯಿಸಿಕೊಂಡಿದ್ದಾರೆ. ಈ ಪ್ರೊಫೈಲ್‌ನಲ್ಲಿ ಚುನಾವಣಾ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಮತ್ತು ಪಕ್ಷದ ಅನೇಕ ರ್ಯಾಲಿಗಳ ಫೋಟೋಗಳನ್ನು ಕಾಣಬಹುದು. ಬಿಜೆಪಿಯನ್ನು ಬೆಂಬಲಿಸುವ ಸಾಕಷ್ಟು ಪೋಸ್ಟ್‌ಗಳಿವೆ.
ಡಿಸೆಂಬರ್ 1ರಂದು ಮಾಡಲಾಗಿರುವ ಪೋಸ್ಟ್‌ನಲ್ಲಿ ಚಚ್ಚೇದ್ ಅವರು ನಾಗಡ-ಖಚ್ರೋಡ್ ಕ್ಷೇತ್ರದಲ್ಲಿ ಒಟ್ಟು 1,78,364 ಚಲಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ 93,000 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ 77,000 ಮತಗಳನ್ನು ಪಡೆದಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಡಿಸೆಂಬರ್ 3ರಂದು ಪ್ರಕಟವಾದ ಫಲಿತಾಂಶದ ಪ್ರಕಾರ, ಬಿಜೆಪಿ ಅಭ್ಯರ್ಥಿ 93,552 ಮತ್ತು ಕಾಂಗ್ರೆಸ್ ಅಭ್ಯರ್ಥಿ 77,625 ಮತಗಳನ್ನು ಪಡೆದುಕೊಂಡಿದ್ದರು. ಡಿಸೆಂಬರ್ 1ರ ಪೋಸ್ಟ್‌ನಲ್ಲಿ ತಿಳಿಸಲಾದ ಮತಗಳು ಮತ್ತು ಫಲಿತಾಂಶದ ವೇಳೆ ಗೊತ್ತಾದ ಮತಗಳು ಆಲ್ಮೋಸ್ಟ್ ಒಂದೇ ತೆರನಾಗಿವೆ. ಈ ಪೋಸ್ಟ್ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ ನಾಯಕರಿಗೆ ಮೊದಲೇ ಫಲಿತಾಂಶ ಗೊತ್ತಿತ್ತು ಎಂದು ಆರೋಪಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಆರೋಪಿಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ, ಶಾಸಕ ರಾಮೇಶ್ವರ್ ಶರ್ಮಾ ಅವರು, ದಿಗ್ವಿಜಯ್ ಸಿಂಗ್ ಅವರು ಯಾರನ್ನೂ ನಂಬಲ್ಲ. ಇವಿಎಂ ಮೇಲೂ ನಂಬಿಕೆ ಇಲ್ಲ. ಸ್ವತಃ ಅವರಿಗೆ ಅವರ ಮೇಲೆಯೇ ನಂಬಿಕೆ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಹಾಗೆಯೇ, ಪೋಸ್ಟ್ ಮಾಡಿರುವ ಅನಿಲ್ ಚಚ್ಚೇದ್ ಅವರು ಪಕ್ಷದ ಪದಾಧಿಕಾರಿಯೇ ಅಥವಾ ಅಲ್ಲವೇ ಎಂಬುದನ್ನು ಭಾರತೀಯ ಜನತಾ ಪಾರ್ಟಿಯು ಖಚಿತಪಡಿಸಿಲ್ಲ. ಛತ್ತೀಸ್‌ಗಢ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿಯು ಗೆದ್ದ ಮಾರನೇ ದಿನವೇ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಮತ್ತೆ ವಿದ್ಯುನ್ಮಾನ ಮತ ಯಂತ್ರಗಳ ವಿಶ್ವಾಸಾರ್ಹತಯೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Election Result 2023: ಸನಾತನ ಧರ್ಮ ವಿರೋಧಿಸಿದ್ದಕ್ಕೇ ಕಾಂಗ್ರೆಸ್‌ಗೆ ಸೋಲು; ಪಕ್ಷದ ವಿರುದ್ಧವೇ ತಿರುಗಿ ಬಿದ್ದ ನಾಯಕ!