ನವದೆಹಲಿ: ಇಡೀ ಜಗತ್ತು ಬಿಕ್ಕಟ್ಟಿನಲ್ಲಿದೆ. ಈ ಅಸ್ಥಿರತೆಯು ಎಷ್ಟು ದಿನಗಳ ಕಾಲ ಮುಂದುರಿಯಲಿದೆ ಎಂದು ಊಹಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, 21ನೇ ಶತಮಾನದಲ್ಲಿ ಜಾಗತಿಕ ಅಭಿವೃದ್ಧಿಯು ದಕ್ಷಿಣ ರಾಷ್ಟ್ರಗಳಿಂದಲೇ ಆಗಲಿದೆ. ಈಗ ನಮ್ಮ ಸಮಯ ಶುರುವಾಗುತ್ತಿದೆ ಎಂದು ಹೇಳಿದರು.
ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮಿಟ್ 2023 (Voice of Global South Summit 2023) ಓಪನಿಂಗ್ ಸೆಷನ್‌ನಲ್ಲಿ ಮಾತನಾಡಿದ ಮೋದಿ ಅವರು, ನಾವು ಹೊಸ ವರ್ಷದಲ್ಲಿ ಭೇಟಿಯಾಗುತ್ತಿದ್ದೇವೆ ಮತ್ತು ಹೊಸ ಭರವಸೆಗಳು ಮತ್ತು ಹೊಸ ಶಕ್ತಿಯನ್ನು ತರುತ್ತೇವೆ ಎಂದು ಅವರು ವಿಶ್ವದ ವಿವಿಧ ಭಾಗಗಳಿಂದ ಸೇರಿದ್ದ ನಾಯಕರಿಗೆ ಹೇಳಿದರು.
ಜಗತ್ತಿನ ನಾಲ್ಕನೇ ಮೂರು ಭಾಗದಷ್ಟು ಜನರು ನಮ್ಮ ದೇಶಗಳಲ್ಲಿ(ದಕ್ಷಿಣ) ವಾಸಿಸುತ್ತಿದ್ದಾರೆ. ನಾವು ಕೂಡ ಸಮಾನ ಧ್ವನಿಯನ್ನು ಹೊಂದಿರಬೇಕು. ಆದ್ದರಿಂದ ಎಂಟು ದಶಕಗಳ ಹಿಂದಿನ ಜಾಗತಿಕ ಆಡಳಿತದ ಮಾದರಿಯು ನಿಧಾನವಾಗಿ ಬದಲಾಗುತ್ತಿದ್ದಂತೆ, ನಾವು ಉದಯೋನ್ಮುಖ ಕ್ರಮವನ್ನು ರೂಪಿಸಲು ಪ್ರಯತ್ನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಜಾಗತಿಕ ಬಿಕ್ಕಟ್ಟನ್ನು ಜಾಗತಿಕ ದಕ್ಷಿಣ ರಾಷ್ಟ್ರಗಳು ಸೃಷ್ಟಿಸಿಲ್ಲ. ಆದರೆ ಅವು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಕೋವಿಡ್ ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಭಯೋತ್ಪಾದನೆ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮಗಳಲ್ಲಿ ನಾವು ಇದನ್ನು ನೋಡಿದ್ದೇವೆ. ಪರಿಹಾರಗಳ ಹುಡುಕಾಟ ಇದು ನಮ್ಮ ಪಾತ್ರ ಅಥವಾ ನಮ್ಮ ಧ್ವನಿಗೆ ಕಾರಣವಾಗುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ | ಜನವರಿ 12ರಂದು ಕರ್ನಾಟಕಕ್ಕೆ ನರೇಂದ್ರ ಮೋದಿ; ಯುವಜನೋತ್ಸವಕ್ಕೆ ಭರ್ಜರಿ ತಯಾರಿ ಆರಂಭ