ನವದೆಹಲಿ: ಪ್ರಸಕ್ತ ವರ್ಷದಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿಕೆಯಾಗುತ್ತದೆ ಎಂಬ ಲೆಕ್ಕಾಚಾರಕ್ಕೂ ಮೊದಲೇ ಜಗತ್ತಿನಾದ್ಯಂತ ನೂರಾರು ಕಂಪನಿಗಳು ʼಬೆಂಚ್ʼನಲ್ಲಿದ್ದವರು ಸೇರಿ ಹಲವು ವಿಭಾಗಗಳ ನೌಕರರನ್ನು (Layoffs In 2023) ವಜಾಗೊಳಿಸಿವೆ. ಟ್ವಿಟರ್, ಮೈಕ್ರೋಸಾಫ್ಟ್, ಫೇಸ್‌ಬುಕ್‌ನಂತ ಜಾಗತಿಕ ದೈತ್ಯ ಕಂಪನಿಗಳೇ ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಅದರಲ್ಲೂ, ಪ್ರಸಕ್ತ ವರ್ಷದ 42 ದಿನದಲ್ಲಿಯೇ (ಜನವರಿ 1ರಿಂದ ಫೆಬ್ರವರಿ 11) ಜಗತ್ತಿನಾದ್ಯಂತ 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಜಾಗತಿಕವಾಗಿ ವಜಾಗೊಂಡಿರುವ ನೌಕರರ ಕುರಿತು ಲೇಆಫ್ಸ್.ಎಫ್‌ವೈಐ (layoffs.fyi) ಎಂಬ ಸಂಸ್ಥೆಯು ವರದಿ ಪ್ರಕಟಿಸಿದ್ದು, ಜಗತ್ತಿನಾದ್ಯಂತ 332 ಟೆಕ್ ಕಂಪನಿಗಳು 2023ರಲ್ಲಿ ಇದುವರೆಗೆ 1,00,746 ನೌಕರರನ್ನು ವಜಾಗೊಳಿಸಿವೆ ಎಂದು ಮಾಹಿತಿ ನೀಡಿದೆ. ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್‌ನಂತಹ ದೈತ್ಯ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಕಾರಣ ಪಟ್ಟಿ ದೊಡ್ಡದಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: TickTok layoffs : ಬ್ಯಾನ್ ಆಗಿ 3 ವರ್ಷಗಳ ಬಳಿಕ ಭಾರತದಲ್ಲಿ ಎಲ್ಲ 40 ಸಿಬ್ಬಂದಿಯನ್ನು ವಜಾಗೊಳಿಸಿದ ಟಿಕ್‌ಟಾಕ್
ಹೀಗೆ ಸಾಲು ಸಾಲು ಕಂಪನಿಗಳು ಸಾವಿರಾರು ನೌಕರರನ್ನು ಮನೆಗೆ ಕಳುಹಿಸುತ್ತಿರುವ ಕಾರಣ ನೌಕರರಲ್ಲಿ ಮುಂದೇನು ಎಂಬ ಭಯ ಕಾಡುತ್ತಿದೆ. ಹಾಗೊಂದು ವೇಳೆ ಕೆಲವೇ ತಿಂಗಳಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿತ ಉಂಟಾದರೆ ಹೇಗೆ? ಇನ್ನೂ ಎಷ್ಟು ಜನರಿಗೆ ಗೇಟ್ ಪಾಸ್ ನೀಡಲಾಗುತ್ತದೆಯೋ ಎಂಬ ಭೀತಿ ನೌಕರರಲ್ಲಿ ಎದುರಾಗಿದೆ.
ಯಾವ ಕಂಪನಿಯಲ್ಲಿ ಎಷ್ಟು ಉದ್ಯೋಗಿಗಳಿಗೆ ಗೇಟ್‌ಪಾಸ್
- ಮೈಕ್ರೋಸಾಫ್ಟ್- 10 ಸಾವಿರ (ಒಟ್ಟು ನೌಕರರ ಶೇ.5ರಷ್ಟು ಉದ್ಯೋಗಿಗಳ ವಜಾ)
- ಅಮೆಜಾನ್ – 8 ಸಾವಿರ (3%)
- ಸೇಲ್ಸ್‌ಫೋರ್ಸ್- 8 ಸಾವಿರ (10%)
- ಡೆಲ್- 6,650 (5%)
- ಐಬಿಎಂ- 3,900 (2%)
- ಸ್ಯಾಪ್ (SAP)- 3 ಸಾವಿರ (3%)
- ಜೂಮ್- 1,300 (15%)
- ಯಾಹೂ- 1,600 (20%)