Site icon Vistara News

Food Security Scheme | ಇಂದಿನಿಂದ 80 ಕೋಟಿಗೂ ಅಧಿಕ ಮಂದಿಗೆ ಉಚಿತ ಆಹಾರ ಧಾನ್ಯ!

food grains

food grains

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ಸಮಗ್ರ ಆಹಾರ ಭದ್ರತಾ ಯೋಜನೆಯು 2023 ಜನವರಿ 1ರಿಂದ ಆರಂಭವಾಗಿದೆ. ಈ ಯೋಜನೆಯಡಿ ದೇಶದ 80 ಕೋಟಿಗೂ ಅಧಿಕ ಜನರು ಉಚಿತ ಆಹಾರ ಧಾನ್ಯವನ್ನು ಪಡೆಯಲಿದ್ದಾರೆ(Food Security Scheme).

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್ಎ)ಯಡಿ ಒಂದು ವರ್ಷದವರೆಗೆ ಒಟ್ಟು 81.35 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆಯನ್ನು ಕೇಂದ್ರ ಸರ್ಕಾರ ಮಾಡಲಿದೆ. ಜತೆಗೆ, ಎನ್ಎಫ್ಎಸ್ಎ ಸಮಗ್ರ ಮತ್ತು ಒಂದೇ ತೆರನಾದ ಜಾರಿಯನ್ನು ಖಾತ್ರಿಗೊಳಿಸಲಿದೆ. ಈ ಮೊದಲು ಎನ್‌ಎಫ್ಎಸ್ಎ ಅಡಿ 3 ರೂ.ಗೆ ಕೆಜಿ ಅಕ್ಕಿ, 2 ರೂ.ಗೆ ಕೆಜಿ ಗೋಧಿ ಮತ್ತು 1 ರೂ.ಗೆ ಇತರ ಧಾನ್ಯಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರವು ಮುಂದಿನ ಒಂದು ವರ್ಷದವರಿಗೆ ಉಚಿತವಾಗಿಯೇ ಫಲಾನುಭವಿಗಳಿಗೆ ಧಾನ್ಯ ವಿತರಣೆ ಮಾಡಲಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಸರ್ಕಾರವು ತನ್ನ ಬದ್ಧತೆಯನ್ನು ಪೂರೈಸಲು ಮತ್ತು ಎನ್ಎಫ್ಎಸ್ಎ ಅಡಿಯಲ್ಲಿ 81.35 ಕೋಟಿ ಜನರಿಗೆ ಉಚಿತ ಆಹಾರಧಾನ್ಯವನ್ನು ಒದಗಿಸಲು ಬದ್ಧವಾಗಿದೆ ಎಂದು ಹೇಳಿದೆ. ತನ್ನ ಬದ್ಧತೆಯನ್ನು ಪೂರೈಸುವ ಸಲುವಾಗಿ, ಕೇಂದ್ರ ಸರ್ಕಾರವು ಈ ಹೊಸ ಯೋಜನೆಯನ್ನು ಆರಂಭಿಸಿದೆ. ಒಂದು ರಾಷ್ಟ್ರ – ಒಂದು ಬೆಲೆ – ಒಂದು ಪಡಿತರ ದೃಷ್ಟಿಯನ್ನು ಈಡೇರಿಸುವ ಯೋಜನೆ ಇದಾಗಿದೆ.

ಇದನ್ನೂ ಓದಿ | ಇನ್ನೂ 3 ತಿಂಗಳು ಬಡವರಿಗೆ ಉಚಿತ ಆಹಾರ ಧಾನ್ಯ | PMGKAY ವಿಸ್ತರಿಸಿದ ಕ್ಯಾಬಿನೆಟ್‌

Exit mobile version