ನವದೆಹಲಿ: ದೇಶದ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳಿಗೆ (Padma Awards) ನಾಮಿನೇಷನ್ (Nominations) ಮತ್ತು ಶಿಫಾರಸುಗಳ (Recommendations) ಆನ್‌ಲೈನ್ ಪ್ರಕ್ರಿಯೆ ಶುರುವಾಗಿದೆ. 2024ರ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಅರ್ಹರನ್ನು ಪ್ರಶಸ್ತಿಗಳಿಗೆ ಶಿಫಾರಸು ಮಾಡಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಪ್ರಶಸ್ತಿಗಳಿಗೆ ತಮ್ಮ ನಾಮನಿರ್ದೇಶನಗಳು ಮತ್ತು ಶಿಫಾರಸುಗಳನ್ನು ಕಳುಹಿಸಲು ಸಾರ್ವಜನಿಕರಿಗೆ ಕೋರಿದೆ. ಕೇಂದ್ರ ಗೃಹ ಸಚಿವಾಲಯವು (Ministry Home Affairs) ಅಧಿಕೃತ ಪ್ರಕಟಣೆಯ ಪ್ರಕಾರ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (https://awards.gov.in) ಮೂಲಕ ಮಾತ್ರವೇ ಶಿಫಾರಸುಗಳನ್ನು ಸ್ವೀಕರಿಸಲಿದೆ. ಅರ್ಹರರನ್ನು ಶಿಫಾರಸು ಅಥವಾ ನಾಮನಿರ್ದೇಶನ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪದ್ಮ ಪ್ರಶಸ್ತಿಗಳೆಂದು ಕರೆಯಲಾಗುತ್ತದೆ ಮತ್ತು ಇವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ. 1954ರಲ್ಲಿ ಈ ಪ್ರಶಸ್ತಿಗಳನ್ನು ಆರಂಭಿಸಲಾಯಿತು. ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗುತ್ತದೆ.
ಸಾಧಕರ ‘ವಿಶಿಷ್ಟತೆಯ ಕೆಲಸವನ್ನು’ ಗುರುತಿಸುವುದಕ್ಕಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ, ಸೇವೆ, ವ್ಯಾಪಾರ, ಕೈಗಾರಿಕೆ ಮುಂತಾದ ಎಲ್ಲಾ ಕ್ಷೇತ್ರಗಳು ಮತ್ತು ವಿಭಾಗಗಳಲ್ಲಿನ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳಿಗಾಗಿ ಮತ್ತು ಸೇವೆಗಾಗಿ ನೀಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Padma Awards 2023: ಎಸ್.ಎಂ.ಕೃಷ್ಣ, ಸುಧಾಮೂರ್ತಿ ಸೇರಿ ಕರ್ನಾಟಕದ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
ಪದ್ಮ ಪ್ರಶಸ್ತಿಗಳನ್ನು ಜನರ ಪ್ರಶಸ್ತಿಗಳನ್ನಾಗಿ ಮಾರ್ಪಡಿಸಲು ಮೋದಿ ನೇತೃತ್ವದ ಸರ್ಕಾರವು ಬದ್ಧವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಾಗಾಗಿ, ಸ್ವಂತ ನಾಮನಿರ್ದೇಶನ ಸಹಿತ ಸಾರ್ವಜನಿಕರು ಅರ್ಹರರನ್ನು ನಾಮನಿರ್ದೇಶನ ಮತ್ತು ಶಿಫಾರಸು ಮಾಡಬಹುದಾಗಿದೆ.
ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕರು ಕೇಂದ್ರ ಗೃಹ ಸಚಿವಾಲಯದ https://mha.gov.in ಹಾಗೂ ಪದ್ಮ ಅವಾರ್ಡ್ಸ್ ಪೋರ್ಟಲ್ (https://padmaawards.gov.in)ನಲ್ಲಿ ಕಾಣಬಹುದಾಗಿದೆ. ಅವಾರ್ಡ್ಸ್ ಆ್ಯಂಡ್ ಮೆಡಲ್ಸ್ ಶೀರ್ಷಿಕೆಯಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.