Site icon Vistara News

ಪಾಕ್ ಪ್ರಜೆ ಸೀಮಾ ಹೈದರ್, ಆಕೆಯ ಪ್ರಿಯಕರ ಸಚಿನ್ ಯುಪಿ ಎಟಿಎಸ್ ವಶ, ತೀವ್ರ ವಿಚಾರಣೆ

Seema Haider And Sachin Meena Love Story

4 mobile phones, 5 Pak-authorised passports found with Seema Haider: Uttar Pradesh Police

ನವದೆಹಲಿ: ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ (Pak national Seema Haider) ಹಾಗೂ ಪ್ರಿಯಕರ ಸಚಿನ್ ಮೀನಾ (Sachin Meena) ಹಾಗೂ ಅವರ ತಂದೆ ನೇತ್ರಪಾಲ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ (UP ATS) ತನ್ನ ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದೆ. ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್, ಪಬ್‌ಜಿ ಆನ್ಲೈನ್ ಗೇಮ್ ಆಡುವ ಮೂಲಕ ಭಾರತದ ಸಚಿನ್ ಮೀನಾ ಜತೆ ಪ್ರೇಮಾಂಕುರವಾಗಿತ್ತು. ಅದೇ ಕಾರಣಕ್ಕಾಗಿ ಆಕೆ, ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದಳು. ಇದು ಭಾರೀ ಸುದ್ದಿಯಾಗಿತ್ತು.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಹೈದರ್, ಮೀನಾ ಮತ್ತು ಸಿಂಗ್ ಅವರನ್ನು ವಿಚಾರಣೆ ನಡೆಸುವುದಾಗಿ ಯುಪಿ ಎಟಿಎಸ್ ಸ್ಥಳೀಯ ಗ್ರೇಟರ್ ನೋಯ್ಡಾ ಪೊಲೀಸರಿಗೆ ತಿಳಿಸಿದೆ. ಕಳೆದ ತಿಂಗಳು ಮೂವರನ್ನು ಗೌತಮ್ ಬುದ್ಧ ನಗರ ಪೊಲೀಸರು ಬಂಧಿಸಿದಾಗ, ಕೇಂದ್ರೀಯ ಸಂಸ್ಥೆಗಳು ಮತ್ತು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳಕ್ಕೆ ಈ ಬಗ್ಗೆ ತಿಳಿಸಲಾಗಿತ್ತು. ಆದ್ದರಿಂದ ಅವರು ತಮ್ಮ ನಿಯಮಗಳ ಪ್ರಕಾರ ತನಿಖೆ ನಡೆಸುತ್ತಿದ್ದಾರೆ ಎಂದು ಗೌತಮ್ ಬುದ್ಧ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಆನಂದ್ ಕುಲಕರ್ಣಿ ಹೇಳಿದ್ದಾರೆ.

ಎಟಿಎಸ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆಯಷ್ಟೇ. ಆದರೆ, ಅವರನ್ನು ಬಂಧಿಸಿಲ್ಲ ಎಂದು ಗೌತಮ್ ಬುದ್ಧ ನಗರದರ ಹೆಚ್ಚುವರಿ ಪೊಲೀಸ್ ಆಯುಕ್ತ ಆನಂದ್ ಕುಲಕರ್ಣಿ ಅವರು ತಿಳಿಸಿದ್ದಾರೆ. ಪಾಕಿಸ್ತಾನದಿಂದ ಭಾರತಕ್ಕೆ ಗಡಿ ದಾಟಿ ಬಂದಿರುವ ಸೀಮಾ ಹೈದರ್ ಬಗ್ಗೆ ಸಾಕಷ್ಟು ಉಹಾಪೋಹಗಳಿವೆ. ಆಕೆ ಪಾಕಿಸ್ತಾನದ ಗೂಢಚಾರಿ ಎಂದು ಹೇಳಲಾಗುತ್ತಿದೆ. ಆಕೆ ಭಾರತಕ್ಕೆ ಅಕ್ರಮವಾಗಿ ನಸುಳಿದ್ದರ ಹಿನ್ನೆಲೆಯಲ್ಲಿ ಸಾಕಷ್ಟು ಸಂಗತಿಗಳಿವೆ. ಹಾಗಾಗಿ, ಭದ್ರತೆಯ ಹಿನ್ನೆಲೆಯಲ್ಲಿ ಸೀಮಾ ಹೈದರ್ ಅವರನ್ನು ವಿಚಾರಣೆಗೊಳಪಡಿಸುವುದು ಅತ್ಯಗತ್ಯ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ತಿಂಗಳು, ತನ್ನ ನಾಲ್ಕು ಮಕ್ಕಳೊಂದಿಗೆ ಸೀಮಾ ಹೈದರ್ ಅವರು ಭಾರತಕ್ಕೆ ಅಕ್ರಮವಾಗಿ ಆಗಮಿಸಿದ್ದರು. ಉತ್ತರ ಪ್ರದೇಶದ ಸಚಿನ್ ಮೀನಾ ಹಾಗೂ ಸೀಮಾ ಹೈದರ್ ಅವರು ಲಾಕ್ ಡೌನ್ ವೇಳೆ ಆನ್ ಲೈನ್ ಗೇಮ್ ಪಬ್‌ಜಿ ಮೂಲಕ ಪರಿಚಿತರಾಗಿದ್ದರು. ಜುಲೈ 4 ರಂದು ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಹೈದರ್ ಅವರನ್ನು ಬಂಧಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Seema Haider: ಸೀಮಾ ಹೈದರ್ ಪಾಕ್‌ಗೆ ಹಿಂತಿರುಗದಿದ್ದರೆ ಮುಂಬೈ ಮಾದರಿ ದಾಳಿ; ಪೊಲೀಸರಿಗೇ ಬೆದರಿಕೆ

ಏತನ್ಮಧ್ಯೆ, ಹೈದರ್ ಅವರ ನೆರೆಹೊರೆಯವರು ಮತ್ತು ಸಂಬಂಧಿಕರು ಭಾನುವಾರ ಆಕೆ ಮತ್ತೆ ಪಾಕಿಸ್ತಾನಕ್ಕೆ ಮರಳುವುದನ್ನು ವಿರೋಧಿಸಿದ್ದಾರೆ. ಆಕೆ ಮಕ್ಕಳನ್ನು ಮಾತ್ರ ಪಾಕಿಸ್ತಾನಕ್ಕೆ ಕಳುಹಿಸಲಿ. ಈಗ ಅವಳು ಮುಸ್ಲಿಮ್ ಕೂಡ ಅಲ್ಲ ಎಂದು ಸೀಮಾ ಹೈದರ್ ವಾಸಿಸುತ್ತಿದ್ದ ಬಾಡಿಗೆ ಮನೆಯ ಮಾಲೀಕ 16 ವರ್ಷದ ಹುಡುಗ ಹೇಳಿದ್ದಾರೆ. ಹೈದರ್ ಅವರ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿ ಸುಬೇದಾರ್ ಆಗಿದ್ದಾರೆ. ಅಲ್ಲದೇ ಆಕೆಯ ಸಹೋದರ ಕೂಡ ಪಾಕಿಸ್ತಾನಿ ಸೈನಿಕರಾಗಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version