Site icon Vistara News

United Nations : ಡ್ರೋನ್​ ಮೂಲಕ ಭಾರತಕ್ಕೆ ಮಾರಕಾಸ್ತ್ರ ರವಾನಿಸುತ್ತಿದೆ ಪಾಕಿಸ್ತಾನ; ವಿಶ್ವ ಸಂಸ್ಥೆಯಲ್ಲಿ ಭಾರತದ ಆರೋಪ

pakistan-is-sending-arms-to-india-through-drone-india-accused-in-world-organization

#image_title

ನವ ದೆಹಲಿ: ಜಮ್ಮು ಕಾಶ್ಮೀರದ ಗಡಿ ಪ್ರದೇಶದಲ್ಲಿ ಡ್ರೊನ್​ಗಳ ನೆರವಿನಿಂದ ಪಾಕಿಸ್ತಾನ ಮಾರಕಾಸ್ತ್ರಗಳನ್ನು ಭಾರತಕ್ಕೆ ರವಾನಿಸುತ್ತಿದೆ ಎಂದು ವಿಶ್ವ ಸಂಸ್ಥೆಯ ಸಭೆಯಲ್ಲಿ ಭಾರತ ಆರೋಪಿಸಿದೆ. ಸೇನೆ ಅಥವಾ ಯಾವುದೇ ಸಂಸ್ಥೆಗಳ ನೆರವು ಇಲ್ಲದೆ ಇದು ಸಾಧ್ಯವಿಲ್ಲ. ಇವೆಲ್ಲವೂ ಯೋಜಿತ ಕೃತ್ಯಗಳಾಗಿದ್ದು, ಅಂತಾರಾಷ್ಟ್ರೀಯ ಸಮುದಾಯವು ಇದಕ್ಕೆ ಖಂಡನೆ ವ್ಯಕ್ತಪಡಿಸುವ ಅಗತ್ಯವಿದೆ ಎಂಬುದಾಗಿಯೂ ಭಾರತ ಅಭಿಪ್ರಾಯಪಟ್ಟಿದೆ. ಅಂತಾರಾಷ್ಟ್ರೀಯ ಶಾಂತಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯೊಂದರಲ್ಲಿ ಪಾಕಿಸ್ತಾನದ ಕುಕೃತ್ಯವನ್ನು ಭಾರತ ಬಯಲು ಮಾಡಿದೆ.

ವಿಶ್ವ ಸಂಸ್ಥೆಯಲ್ಲಿ ಭಾರತದ ಕಾಯಂ ಸದಸ್ಯರಾಗಿರುವ ರುಚಿರಾ ಕಾಂಬೋಜ್ ಅವರು, ಚರ್ಚೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಡಿಯಲ್ಲಿ ನಡೆಯುತ್ತಿರುವ ಅಕ್ರಮಗಳು ನಮ್ಮ ಕಣ್ಣೆದರೇ ನಡೆಯುತ್ತಿವೆ. ಅವುಗಳನ್ನು ನಮ್ಮ ದೇಶದ ಗಡಿ ಭದ್ರತಾ ಪಡೆಗಳು ಹಿಮ್ಮೆಟ್ಟಿಸಿವೆ ಎಂದು ಅವರು ತುಂಬಿದ ಸಭೆಯಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ಗಡಿಯಲ್ಲಿ ನಾವು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಡ್ರೊನ್​ ಮೂಲಕ ಮಾರಕಾಸ್ತ್ರಗಳನ್ನು ರವಾನೆ ಮಾಡುವ ಹಲವು ಪ್ರಯತ್ನಗಳು ನಡೆದಿವೆ. ಸರಕಾರದ ಬೆಂಬಲವಿಲ್ಲೇ ಇದು ಸಾಧ್ಯವಿಲ್ಲ ಹಾಗೂ ಗಡಿಯಾಚೆಗಿನ ಭದ್ರತಾ ಪಡೆಗಳ ನೆರವು ಕೂಡ ಇದೆ ಎಂದು ಅವರು ಮುಕ್ತ ಸಭೆಯಲ್ಲಿ ಆರೋಪಿಸಿದ್ದಾರೆ.

ಅಂತಾರಾಷ್ಟ್ರಿಯ ಮಟ್ಟದಲ್ಲಿ ಇಂಥ ಕುಕೃತ್ಯಗಳಿಗೆ ನೆರವು ನೀಡುತ್ತಿರುವ ದೇಶವನ್ನು ಎಲ್ಲರೂ ಖಂಡಿಸಬೇಕಿದೆ ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಗಡಿಯ ಮೂಲಕ ಮಾರಕಾಸ್ತ್ರಗಳನ್ನು ರವಾನೆ ಮಾಡುವ ಹಲವಾರು ಯತ್ನಗಳು ನಡೆಯುತ್ತಿವೆ. ಭದ್ರತಾ ಪಡೆಯು ಹಲವಾರು ಡ್ರೋನ್​ಗಳನ್ನು ಉರುಳಿಸಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ 50ವರ್ಷಗಳಲ್ಲಿ ಮೊದಲ ಬಾರಿಗೆ ಗಗನಕ್ಕೇರಿದ ಹಣದುಬ್ಬರ; ಪಾತಾಳಕ್ಕಿಳಿದ ಆರ್ಥಿಕ ಸ್ಥಿತಿ

ಅಧಿಕಾರಿಗಳು ಹೇಳುವ ಪ್ರಕಾರ ಅಮೃತ್​ಸರ, ಕತುವಾ, ಸಾಂಬಾ, ಡೋಡಾ ಜಿಲ್ಲೆಯ ಗಡಿ ಪ್ರದೇಶದ ಮೂಲಕ ಮಾರಕಾಸ್ತ್ರಗಳ ಸಾಗಾಟ ಯತ್ನ ನಡೆಯುತ್ತಿದೆ. ಕಳೆದ ವರ್ಷ ಡಿಸೆಂಬರ್​ 21ರಂದು ಬಿಎಸ್​ಎಫ್​ ಸಿಬ್ಬಂದಿ ಇಂಡಿಯನ್​ ಏರ್​ಸ್ಪೇಸ್​ ಮೂಲಕ ಹಾರುತ್ತಿದ್ದ ಡ್ರೊನ್ ಒಡೆದು ಉರುಳಿಸಿದ್ದರು. ಈ ಹಿನ್ನೆಲೆಯಲ್ಲಿ ರುಚಿರಾ ಅವರ ಹೇಳಿಕೆ ಮಹತ್ವ ಪಡೆದಿದೆ.

ವಿಶ್ವ ಸಂಸ್ಥೆಯ ಸದಸ್ಯರು ಅಂತಾರಾಷ್ಟ್ರೀಯ ಗಡಿಗಳಲ್ಲಿ ಮಾರಕಾಸ್ತ್ರಗಳನ್ನು ಸಾಗಾಟ ಮಾಡುವವರ ವಿರುದ್ಧ ಒಕ್ಕೊರಲಿನ ಖಂಡನೆ ವ್ಯಕ್ತಪಡಿಸಬೇಕಾಗಿದೆ. ಉಗ್ರಗಾಮಿ ಸಂಘಟನೆಗಳ ಮೂಲಕ ಮಾರಕಾಸ್ತ್ರಗಳನ್ನು ಸಾಗಾಟ ಮಾಡಲು ಬಯಸುತ್ತಿರುವ ವಿರುದ್ಧದ ನೀತಿಗೆ ವಿರೋಧ ವ್ಯಕ್ತಪಡಿಸಬೇಕಾಗಿದೆ ಎಂದು ರುಚಿಕಾ ಅವರು 15 ಸದಸ್ಯರ ಸಭೆಯಲ್ಲಿ ಒತ್ತಾಯಿಸಿದರು.

Exit mobile version