ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ (Jammu and Kashmir) ವಾರದ ಹಿಂದೆಯಷ್ಟೇ ಕದನ ವಿರಾಮ ಉಲ್ಲಂಘಿಸಿ (ceasefire violation) ಗುಂಡು ಹಾರಿಸಿದ್ದ ಪಾಕಿಸ್ತಾನ ಸೇನೆ (Pakistan Rangers) ಈಗ ಮತ್ತೆ ಅಂಥದ್ದೇ ಕೃತ್ಯ ಎಸಗಿದೆ. ಅರ್ನಿಯಾ ಸೆಕ್ಟರ್‌ನ( Arnia Sector) ಸೇನಾ ಪೋಸ್ಟ್‌ನತ್ತ ಪಾಕಿಸ್ತಾನವು ಯಾವುದೇ ಪ್ರಚೋದನೆ ಇಲ್ಲದೇ ಗುರುವಾರ ರಾತ್ರಿ ಗುಂಡು ಹಾರಿಸಿದೆ ಎಂದು ಗಡಿ ಭದ್ರತಾ ಪಡೆ(BSF) ತಿಳಿಸಿದೆ. ರಾತ್ರಿ 8 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಗುಂಡು ಹಾರಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಬಿಎಸ್‌ಎಫ್ ಕೂಡ ಪಾಕಿಸ್ತಾನದ ಪೋಸ್ಟ್‌ಗಳತ್ತ ಗುಂಡು ಹಾರಿಸಿದೆ ಎಂದು ಬಿಎಸ್‌ಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅರ್ನಿಯಾ ಸೆಕ್ಟರ್‌ನಲ್ಲಿ ಉಭಯ ಸೇನೆಗಳ ನಡುವೆ ಗಂಡಿನ ವಿನಿಮಯ ಜಾರಿಯಲ್ಲಿದೆ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಅರ್ನಿಯಾ ಪ್ರದೇಶದಲ್ಲಿನ ಬಿಎಸ್‌ಎಫ್ ಪೋಸ್ಟ್‌ಗಳ ಮೇಲೆ ಪಾಕ್ ರೇಂಜರ್‌ಗಳು ಅಪ್ರಚೋದಿತ ಗುಂಡಿನ ದಾಳಿಯನ್ನು ಪ್ರಾರಂಭಿಸಿದರು, ಇದಕ್ಕೆ ಬಿಎಸ್‌ಎಫ್ ಪಡೆಗಳು ಸೂಕ್ತವಾಗಿ ಪ್ರತೀಕಾರ ತೀರಿಸಿಕೊಂಡಿವೆ. ಇನ್ನೂ ಗುಂಡಿನ ದಾಳಿ ಮುಂದುವರಿದಿದೆ ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ಸೆಕ್ಟೆರ್‌ನಲ್ಲಿ ಅಕ್ಟೋಬರ್ 17ರಂದು ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಗಾಯಗೊಂಡಿದ್ದರು. ಬಳಿಕ ಬಿಎಸ್ಎಫ್ ಕೂಡ ತಿರುಗೇಟು ನೀಡಿತ್ತು. ಈಗ ಮತ್ತೆ ಅದೇ ಸೆಕ್ಟರ್‌ನಲ್ಲಿ ಪಾಕಿಸ್ತಾನ ಸೇನೆ, ಭಾರತೀಯ ಪೋಸ್ಟ್‌ಗಳತ್ತ ಗುಂಡ ಹಾರಿಸಲಾರಂಭಿಸಿದೆ.
ಈ ಸುದ್ದಿಯನ್ನೂ ಓದಿ: ಚಾಳಿ ಬಿಡದ ಪಾಕಿಸ್ತಾನ; ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆ
ಇದೇ ಸೆಕ್ಟರ್‌ನಲ್ಲಿ ಪಾಕಿಸ್ತಾನ ಇತ್ತೀಚೆಗೆ ಕದನ ವಿರಾಮ ಉಲ್ಲಂಘಿಸಿ ಇಬ್ಬರು ಬಿಎಸ್‌ಎಫ್ ಸಿಬ್ಬಂದಿ ಗಾಯಗೊಂಡಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಅಕ್ಟೋಬರ್ 17 ರಂದು ಅರ್ನಿಯಾ ಸೆಕ್ಟರ್‌ನ ವಿಕ್ರಮ್ ಬಿಒಪಿಯಲ್ಲಿ ಐಬಿ ಉದ್ದಕ್ಕೂ ಗಡಿ ಕಾವಲುಗಾರರ ಮೇಲೆ ಪಾಕಿಸ್ತಾನದ ರೇಂಜರ್‌ಗಳು “ಅಪ್ರಚೋದಿತ ಗುಂಡಿನ ದಾಳಿಯನ್ನು ಆಶ್ರಯಿಸಿದ” ನಂತರ ಬಿಎಸ್‌ಎಫ್ ಸಿಬ್ಬಂದಿಗೆ ಬುಲೆಟ್ ಗಾಯಗಳಾಗಿವೆ.
ಭಾರತ ಮತ್ತು ಪಾಕಿಸ್ತಾನ ಸೇನೆಗಳು 2021 ಫೆಬ್ರವರಿ 25ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ಕಡೆಯಿಂದ ಹಲವಾರು ಕದನ ವಿರಾಮ ಉಲ್ಲಂಘನೆಗಳ ನಂತರ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಎರಡೂ ರಾಷ್ಟ್ರಗಳು ಕದನ ವಿರಾಮವನ್ನು ಜಾರಿಗೊಳಿಸುವುದಾಗಿ ಘೋಷಿಸಿದವು. ಕದನ ವಿರಾಮವು ಎಲ್‌ಒಸಿ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಭಾರೀ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ, ಈಗ ಮತ್ತೆ ಪಾಕಿಸ್ತಾನ ತನ್ನ ಹಳೇ ಚಾಳಿಗೆ ಮರಳಿದೆ.