Site icon Vistara News

Pakistani Boat Seized | ಕರಾವಳಿ ರಕ್ಷಣಾ ಪಡೆ ಭರ್ಜರಿ ಬೇಟೆ, 300 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಇದ್ದ ಪಾಕ್‌ ಹಡಗು ಜಪ್ತಿ, 10 ಜನರ ಸೆರೆ

Pakistani Boat Seized

ಗಾಂಧಿನಗರ: ಭಾರತದ ಕರಾವಳಿ ರಕ್ಷಣಾ ಪಡೆ (ICG)ಯ ಅಧಿಕಾರಿಗಳು ಭಾರತದ ಕರಾವಳಿ ಪ್ರದೇಶದಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಸುಮಾರು 300 ಕೋಟಿ ರೂ. ಮೌಲ್ಯದ 40 ಕೆ.ಜಿ ಡ್ರಗ್ಸ್‌ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಇರುವ ಹಡಗನ್ನು ಐಸಿಜಿ ಅಧಿಕಾರಿಗಳು ಜಪ್ತಿ (Pakistani Boat Seized) ಮಾಡಿದ್ದು, ಹಡಗಿನಲ್ಲಿದ್ದ 10 ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಗುಜರಾತ್‌ನ ಭಯೋತ್ಪಾದನೆ ನಿಗ್ರಹ ದಳದ (ATS) ಮಾಹಿತಿ ಮೇರೆಗೆ ಡಿಸೆಂಬರ್‌ 25 ಹಾಗೂ 26ರ ರಾತ್ರಿ ಕರಾವಳಿ ರಕ್ಷಣಾ ಪಡೆಯು ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ ಭಾರತದ ಸಾಗರ ಪ್ರದೇಶದಲ್ಲಿ ಪಾಕಿಸ್ತಾನದ ಹಡಗು ಪತ್ತೆಯಾಗಿದೆ. ಎಐ ಸೊಹೇಲಿ (Al Soheli) ಎಂಬ ಹಡಗನ್ನು ಜಪ್ತಿ ಮಾಡಿ, ಸಿಬ್ಬಂದಿಯನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಓಖಾಗೆ ಕರೆತರಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

ಅಂತಾರಾಷ್ಟ್ರೀಯ ಸಾಗರ ಗಡಿ ರೇಖೆ (IMBL) ಬಳಿ ಗಸ್ತು ತಿರುವಾಗ ಭಾರತದ ಸಾಗರ ಪ್ರದೇಶದಲ್ಲಿ ಪಾಕಿಸ್ತಾನದ ಹಡಗು ಇರುವುದು ಗೊತ್ತಾಗಿದೆ. ಆಗ, ಕರಾವಳಿ ರಕ್ಷಣಾ ಪಡೆಯು ಎಚ್ಚರಿಕೆ ನೀಡಿದೆ. ಹೀಗಿದ್ದರೂ ಹಡಗು ಸಂಚರಿಸುತ್ತಿದ್ದ ಕಾರಣ ಅದನ್ನು ಜಪ್ತಿ ಮಾಡಲಾಯಿತು. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದೆ.

ಇದನ್ನೂ ಓದಿ | SIA Raids In Kashmir | ಉಗ್ರ ಸಂಘಟನೆಯ ಆಸ್ತಿ ಮೇಲೂ ಕಾರ್ಯಾಚರಣೆ, 4 ಜಿಲ್ಲೆಯಲ್ಲಿ ಜಮಾತ್‌ ಎ ಇಸ್ಲಾಮಿ ಆಸ್ತಿ ಜಪ್ತಿ

Exit mobile version