Site icon Vistara News

PAN Aadhaar Linking | ಆಧಾರ್‌ ಲಿಂಕ್‌ ಮಾಡದಿದ್ದರೆ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯ, ಈ ದಿನದೊಳಗೆ ಲಿಂಕ್‌ ಮಾಡಿ

PAN Aadhaar Linking

ನವದೆಹಲಿ: ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ (PAN Aadhaar Linking) ಮಾಡುವ ಕುರಿತು ಈಗಾಗಲೇ ಹಲವು ಬಾರಿ ದಿನಾಂಕ ನಿಗದಿಗೊಳಿಸಿ, ಬಳಿಕ ಗಡುವು ವಿಸ್ತರಣೆ ಮಾಡಲಾಗಿದೆ. ಆದರೆ, ಈ ಬಾರಿ ಆದಾಯ ತೆರಿಗೆ ಇಲಾಖೆಯು ಗಡುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಸೂಚನೆ ನೀಡಿದೆ. ಹಾಗೆಯೇ, ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡದವರ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತದೆ ಎಂದು ಎಚ್ಚರಿಸಿದೆ.

ಆಧಾರ್‌ ಲಿಂಕ್‌ ಮಾಡಲು ೨೦೨೩ರ ಮಾರ್ಚ್‌ ೩೧ ಅಂತಿಮ ಗಡುವಾಗಿದೆ. ಈಗಾಗಲೇ ಮೊದಲು ನೀಡಿದ ಗಡುವು ಮೀರಿದ ಕಾರಣ ಒಂದು ಸಾವಿರ ರೂ. ದಂಡ ಪಾವತಿಸಿ ಲಿಂಕ್‌ ಮಾಡಬಹುದು. ಹಾಗೊಂದು ವೇಳೆ ಮಾರ್ಚ್‌ ೩೧ರೊಳಗೆ ಲಿಂಕ್‌ ಮಾಡದಿದ್ದರೆ ಪ್ಯಾನ್‌ ಕಾರ್ಡ್‌ ಏಪ್ರಿಲ್‌ ೧ರಂದು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯು ನೂತನ ಅಧಿಸೂಚನೆ ಹೊರಡಿಸಿದೆ.

ನಕಲಿ ಪ್ಯಾನ್‌ ಕಾರ್ಡ್‌ಗಳನ್ನು ತಡೆಗಟ್ಟಲು, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಜಾರಿಗೆ ತರುವಗೊಳಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯ ಆಧಾರ್‌ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇನ್ನೂ ಲಿಂಕ್‌ ಮಾಡದವರು ಆದಾಯ ತೆರಿಗೆ ಇಲಾಖೆಯ www.incometax.gov.in ಗೆ ಭೇಟಿ ನೀಡಿ, ಲಿಂಕ್‌ ಮಾಡಬಹುದಾಗಿದೆ.

ಇದನ್ನೂ ಓದಿ | PAN compulsory: ವರ್ಷಕ್ಕೆ 20 ಲಕ್ಷ ರೂ.ಗಿಂತ ಹೆಚ್ಚಿನ ನಗದು ಡಿಪಾಸಿಟ್‌, ವಿತ್‌ ಡ್ರಾವಲ್ಸ್‌ಗೆ ಪ್ಯಾನ್‌ ಕಡ್ಡಾಯ

Exit mobile version