Site icon Vistara News

Pandit Laxmikant Mathuranath Dixit: ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದ ಅರ್ಚಕ ವಿಧಿವಶ

Pandit Laxmikant Mathuranath Dixit

ಉತ್ತಪ್ರದೇಶ: ಅಯೋಧ್ಯೆಯ ಶ್ರೀರಾಮ ಮಂದಿರ(Ram temple)ದಲ್ಲಿ ರಾಮಲಲ್ಲಾ(Ram Lalla)ನ ಪ್ರಾಣ ಪ್ರತಿಷ್ಠಾಪಣೆ ವಿಧಿವಿಧಾನ ನೆರವೇರಿಸಿದ್ದ ವಾರಣಾಸಿಯ ಅರ್ಚಕ ಪಂಡಿತ್‌ ಲಕ್ಷ್ಮೀಕಾಂತ್‌ ಮಧುರಾನಾಥ್‌ ದೀಕ್ಷಿತ್‌(Pandit Laxmikant Mathuranath Dixit) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿದ್ದು, ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ.

ದೀಕ್ಷಿತ್ ಅವರು ವೈದಿಕ ಪರಂಪರೆಯ ವಿಧಿಬದ್ಧ ಆಚರಣೆಗೆ ಹೆಸರುವಾಸಿಯಾದವರು. ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾದ 121 ವಿದ್ವಾಂಸರ ತಂಡವನ್ನು ಇವರು ಮುನ್ನಡೆಸಿದವರು. ಇನ್ನು ದೀಕ್ಷಿತ್‌ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ದೇಶದ ಖ್ಯಾತ ವಿದ್ವಾಂಸ ಮತ್ತು ಸಾಂಗ್ವೇದ ವಿದ್ಯಾಲಯದ ಯಜುರ್ವೇದ ಶಿಕ್ಷಕ ಲಕ್ಷ್ಮೀಕಾಂತ್ ದೀಕ್ಷಿತ್ ಜಿ ಅವರ ನಿಧನದ ದುಃಖದ ಸುದ್ದಿ ತಿಳಿದು ಅತೀವ ದುಃಖ ಆಗಿದೆ. ದೀಕ್ಷಿತ್ ಜಿ ಕಾಶಿಯ ವಿದ್ವತ್ ಪರಂಪರೆಯ ಹೆಸರಾಂತ ವ್ಯಕ್ತಿ. ಕಾಶಿ ವಿಶ್ವನಾಥ ಧಾಮ ಮತ್ತು ರಾಮಮಂದಿರದ ಉದ್ಘಾಟನಾ ದಿನದಂದು ನನಗೆ ಅವರ ಜೊತೆ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮತ್ತೊಂದೆಡೆ ಯೋಗಿ ಆದಿತ್ಯಾನಾಥ್‌ ಕೂಡ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ದೀಕ್ಷಿತ್‌ ಅವರ ನಿಧನಕ್ಕೆ ಸಂತಾ ಸೂಚಿಸಿದ್ದಾರೆ.

ಪಂಡಿತ್ ಲಕ್ಷ್ಮೀಕಾಂತ್ ಮಥುರಾನಾಥ್ ದೀಕ್ಷಿತ್ ಹಿನ್ನೆಲೆ ಏನು?

ಪಂಡಿತ್ ಲಕ್ಷ್ಮೀಕಾಂತ್ ಮಥುರಾನಾಥ್ ದೀಕ್ಷಿತ್ ಅವರಿಗೆ 86 ವರ್ಷ ವಯಸ್ಸು. ವೈದಿಕ ಪಂಡಿತರಾದ ದೀಕ್ಷಿತ್ ಅವರು ಮೂಲತಃ ಉತ್ತರ ಪ್ರದೇಶದ ವಾರಣಾಸಿಯವರು. ಇವರ ವಂಶಸ್ಥರ ಇತಿಹಾಸ 17ನೇ ಶತಮಾನಕ್ಕಿಂತಲೂ ಹಳೆಯದು. ಕಾಶಿಯ ಮಹಾ ಪಂಡಿತರಾಗಿದ್ದ ಗಂಗಾ ಭಟ್ ಅವರು ದೀಕ್ಷಿತರ ಪೂರ್ವಜರು. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನೆರವೇರಿಸಿದ್ದ ಹಿರಿಮೆ ಕೂಡಾ ದೀಕ್ಷಿತರ ವಂಶಸ್ಥರಿಗೆ ಇದೆ.

ಇದನ್ನೂ ಓದಿ: Atal Setu: “ಅಟಲ್‌ ಸೇತು ಸುಭದ್ರವಾಗಿದೆ..ಯಾವುದೇ ಬಿರುಕಿಲ್ಲ”- ಕಾಂಗ್ರೆಸ್‌ ಆರೋಪಕ್ಕೆ MMRDA ಸ್ಪಷ್ಟನೆ

Exit mobile version