Site icon Vistara News

Parliament Budget session: ರಾಹುಲ್, ಅದಾನಿ ಗಲಾಟೆ, ಸಂಸತ್ ಕಲಾಪ ಮತ್ತೆ ಮುಂದೂಡಿಕೆ

Indian Parliament

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕ್ಷಮೆಗೆ ಆಡಳಿತ ಪಕ್ಷ ಬಿಜೆಪಿ ಪಟ್ಟು ಹಿಡಿದರೆ, ಅದಾನಿ(Adani Row) ಗ್ರೂಪ್ ಷೇರ್ ವ್ಯವಹಾರ ತನಿಖೆಗೆ ಜೆಪಿಸಿಗೆ ಒತ್ತಾಯಿಸಿ ಪ್ರತಿಪಕ್ಷಗಳು ಬಿಗಿಪಟ್ಟು ಹಾಕಿವೆ. ಪರಿಣಾಮ ಗುರುವಾರವೂ ಸಂಸತ್ತಿನ ಎರಡೂ ಸದನಗಳಲ್ಲಿ ಮಧ್ಯಾಹ್ನದವರೆಗೂ ಕಲಾಪ ನಡೆದಿಲ್ಲ. ಬಹುಶಃ ನಾಲ್ಕನೇ ದಿನವೂ ಕಲಾಪ ಸಂಪೂರ್ಣವಾಗಿ ವ್ಯರ್ಥವಾಗುವ ಸಾಧ್ಯತೆಗಳಿವೆ. ಗುರುವಾರ ಬೆಳಗ್ಗೆ ಕಲಾಪ ಶುರುವಾಗುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳು ಗಲಾಟೆ ಶುರು ಮಾಡುತ್ತಿದ್ದಂತೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು(Parliament Budget session).

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾ ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಲಂಡನ್‌ನಲ್ಲಿ ಅವರು ಮಾತನಾಡಿದ ಹೇಳಿಕೆಗಳ ಕುರಿತು ಸ್ಪಷ್ಟಿಕರಣ ನೀಡುವ ಸಾಧ್ಯತೆ ಇದೆ. ಆದರೆ, ಕ್ಷಮೆಯಾಚಿಸಬೇಕೆಂಬ ಬಿಜೆಪಿ ಬೇಡಿಕೆಯನ್ನು ಕಾಂಗ್ರೆಸ್ ಸಂಪೂರ್ಣವಾಗಿ ತಳ್ಳಿಹಾಕಿದೆ.

ಭಾರತವನ್ನು ಅವಮಾನಿಸಿದ ರಾಹಲ್ ಗಾಂಧಿ: ಕಿರೆನ್ ರಿಜಿಜು

ಈ ವೇಳೆ ಮಾತನಾಡಿದ ಬಿಜೆಪಿಯ ನಾಯಕ ಹಾಗೂ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಸುಳ್ಳುಗಳನ್ನು ಮಾತನಾಡುತ್ತಿದ್ದಾರೆ. ರಾಷ್ಟ್ರವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Budget Session: ರಾಹುಲ್​ ಗಾಂಧಿ ಲಂಡನ್​ ಹೇಳಿಕೆ ಗಲಾಟೆ; ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ

ಈ ದೇಶದಲ್ಲಿ ಹೆಚ್ಚು ಮಾತನಾಡುವ ಮತ್ತು ಹಗಲು ರಾತ್ರಿ ಸರ್ಕಾರವನ್ನು ಗುರಿಯಾಗಿಸುವ ವ್ಯಕ್ತಿ, ಭಾರತದಲ್ಲಿ ಮಾತನಾಡಲು ಸ್ವಾತಂತ್ರ್ಯವಿಲ್ಲ ಎಂದು ವಿದೇಶದಲ್ಲಿ ಹೇಳುತ್ತಾರೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಮುಳುಗಿಸುತ್ತಾರೆ. ನಮಗೇನೂ ಅದರ ಬಗ್ಗೆ ಆತಂಕವಿಲ್ಲ. ಒಂದು ವೇಳೆ ಅವರು ರಾಷ್ಟ್ರಕ್ಕೆ ಅಪಾಯ ಮಾಡಿದರೆ, ಅವಮಾನ ಮಾಡಿರೆ, ನಾವು ನಾಗರಿಕರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಈ ದೇಶವು ಕಾಂಗ್ರೆಸ್ ನಾಯಕತ್ವವನ್ನು ತಿರಸ್ಕರಿಸಿದೆ ಎಂಬ ಮಾತ್ರಕ್ಕೆ ವಿದೇಶದಲ್ಲಿ ಅವರು ದೇಶವನ್ನು ಅವಮಾನ ಮಾಡುವುದಲ್ಲ ಎಂದು ರಿಜಿಜು ಹೇಳಿದ್ದಾರೆ.

Exit mobile version