ನವ ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದು ಬೆಳಗ್ಗೆ 11ಗಂಟೆಯಿಂದ ಪ್ರಾರಂಭವಾಗಿತ್ತು. ಆದರೆ ರಾಷ್ಟ್ರಪತಿ ಚುನಾವಣೆಗೆ ಸಂಸದರು ಮತದಾನ ಮಾಡಬೇಕಾಗಿರುವ ಕಾರಣ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿದೆ. ಇಂದು ಬೆಳಗ್ಗೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರು, ಇತ್ತೀಚೆಗೆ ಮೃತಪಟ್ಟ ಜಪಾನ್‌ನ ಮೃತ ಪ್ರಧಾನಮಂತ್ರಿ ಶಿಂಜೋ ಅಬೆ, ಯುನೈಟೆಡ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಕೀನ್ಯಾ ಮಾಜಿ ಅಧ್ಯಕ್ಷ ಮ್ವೈ ಕಿಬಾಕಿ ಮತ್ತಿತರರಿಗೆ ಗೌರವ ಸಮರ್ಪಿಸಿದರು. ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಇನ್ನು ಅಧಿವೇಶನ ಪ್ರಾರಂಭಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸತ್ತಿನ ಆವರಣದಲ್ಲಿ ಕೇಂದ್ರ ಸಚಿವರೊಂದಿಗೆ ಚಿಕ್ಕದಾದ ಸಭೆಯನ್ನೂ ಕೂಡ ನಡೆಸಿದ್ದಾರೆ.
ಇಂದು ಲೋಕಸಭೆ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆ, ರಾಜ್ಯಸಭೆ ಮತ್ತು ಲೋಕಸಭೆಗೆ ಹೊಸದಾಗಿ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಉತ್ತರ ಪ್ರದೇಶದ ಅಜಂಗಢ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿಯ ದಿನೇಶ್ ಲಾಲ್ ನಿರಾಹುವಾ ಯಾದವ್, ರಾಂಪುರ ಕ್ಷೇತ್ರದಲ್ಲಿ ಗೆದ್ದು ಸಂಸದರಾದ ಘನಶ್ಯಾಮ ಸಿಂಗ್, ಪಶ್ಚಿಮ ಬಂಗಾಳ ಅಸಾನ್ಸೋಲ್‌ನ ನೂತನ ಸಂಸದ ಶತ್ರುಘ್ನ ಸಿನ್ಹಾ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಹಾಗೇ, ರಾಜ್ಯಸಭೆಗೆ ಈ ಸಲ ಹೊಸದಾಗಿ ಆಯ್ಕೆಯಾದವರೂ ಪ್ರಮಾಣವಚನ ಸ್ವೀಕಾರ ಮಾಡಿದರು.
ಪ್ರತಿಪಕ್ಷಗಳ ವಾಗ್ದಾಳಿ
ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ ಸೇರಿ ಹಲವು ಪ್ರತಿಪಕ್ಷಗಳು ಫುಲ್ ಅಲರ್ಟ್ ಆಗಿವೆ. ಜಿಎಸ್‌ಟಿ ಏರಿಕೆ, ಅಸಂಸದೀಯ ಪದ ಪ್ರಯೋಗ, ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ, ಧರಣಿ ನಿಷೇಧ ಎಂಬಿತ್ಯಾದಿ ವಿಷಯಗಳೊಂದಿಗೆ ಕೇಂದ್ರ ಸರ್ಕಾರದ ಮೇಲೆ ಮುಗಿಬೀಳಲು ಸಜ್ಜಾಗಿವೆ. ಇಂದು ಬೆಳಗ್ಗೆ 10.30ರ ಹೊತ್ತಿಗೆ ಟ್ವೀಟ್ ಮಾಡಿ, “ಹೆಚ್ಚಿನ ತೆರಿಗೆ, ಉದ್ಯೋಗಾವಕಾಶ ಶೂನ್ಯ
ಒಂದು ಕಾಲದಲ್ಲಿ, ಭಾರತದಲ್ಲಿ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿತ್ತು. ಅದನ್ನು ನಾಶಪಡಿಸುವುದು ಹೇಗೆ ಎಂಬುದನ್ನು ಈಗ ಬಿಜೆಪಿ ತೋರಿಸುತ್ತಿದೆ” ಎಂದೂ ಹೇಳಿ, ಜಿಎಸ್‌ಟಿ ಏರಿಕೆಯಾದ ವಸ್ತುಗಳ ಪಟ್ಟಿಯನ್ನು ಹಾಕಿದ್ದಾರೆ. ಇಲ್ಲಿ ಮತ್ತೊಮ್ಮೆ ಗಬ್ಬರ್ ಸಿಂಗ್ ಎಂಬ ಪದಪ್ರಯೋಗ ಮಾಡಿದ್ದಾರೆ. ಅಖಿಲೇಶ್ ಯಾದವ್ ಕೂಡ ಜಿಎಸ್‌ಟಿ ಏರಿಕೆ ಬಗ್ಗೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: Parliament Session| ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭ, 32 ವಿಧೇಯಕ ಮಂಡನೆ ನಿರೀಕ್ಷೆ