Site icon Vistara News

Parliament Monsoon Session: ಗದ್ದಲ ಎಬ್ಬಿಸಿದ ಟಿಎಂಸಿ ಸಂಸದ ಡೆರೆಕ್‌ ಓಬ್ರಿಯನ್‌ ರಾಜ್ಯಸಭೆಯಿಂದ ಅಮಾನತು

Derek O'Brien

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದ ಡೆರೆಕ್‌ ಓಬ್ರಿಯನ್‌ (derek o’brien) ಅವರನ್ನು ಮುಂಗಾರು ಅಧಿವೇಶನನದ (Parliament Monsoon Session) ಉಳಿದ ಅವಧಿಗೆ ರಾಜ್ಯಸಭೆಯಿಂದ (rajya sabha) ಅಮಾನತು ಮಾಡಲಾಗಿದೆ.

ಅಸಾಂಸದಿಕ ನಡವಳಿಕೆ ತೋರಿದ್ದಕ್ಕಾಗಿ, ಸದನದ ಕಲಾಪಗಳಿಗೆ ನಿರಂತರವಾಗಿ ತೊಂದರೆ ನೀಡಿದ್ದಕ್ಕಾಗಿ, ಸಭಾಪತಿಗೆ ಅವಿಧೇಯತೆ ತೋರಿದ್ದು ಮತ್ತು ಸದನದಲ್ಲಿ ನಿರಂತರವಾಗಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸುವಂತೆ ಸಭಾನಾಯಕ ಪಿಯೂಷ್ ಗೋಯಲ್ ಅವರು ಅಧ್ಯಕ್ಷರಿಗೆ ಮನವಿ ಮಾಡಿದರು. ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್‌ ಧನಕರ್‌ (jagdeep dhankhar) ಅವರು ಡೆರೆಕ್‌ ಅವರನ್ನು ಅಮಾನತು ಮಾಡಿದರು. ಅಮಾನತು ಆದೇಶದ ನಂತರ ವಿಪಕ್ಷಗಳು ಭಾರೀ ಗದ್ದಲ ಎಬ್ಬಿಸಿದ್ದು, ಆ ಬಳಿಕ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಟಿಎಂಸಿ ನಾಯಕ ಡೆರೆಕ್‌ ಓಬ್ರಿಯನ್‌ ಅವರು ನಿಯಮ 267ರ ಅಡಿಯಲ್ಲಿ ಮಣಿಪುರ ಗಲಭೆಯ ವಿಷಯದ ಬಗ್ಗೆ ಚರ್ಚೆ ಮಾಡಲು ಅವಕಾಶ ಕೇಳಿ ಸತತವಾಗಿ ಒತ್ತಾಯಿಸುತ್ತಿದ್ದರು. ನಿನ್ನೆ ಓಬ್ರಿಯನ್‌ ಅವರ ನಡವಳಿಕೆಯ ಬಗ್ಗೆ ಅಧ್ಯಕ್ಷ ಜಗದೀಪ್‌ ಎಚ್ಚರಿಕೆ ನೀಡಿದ್ದರು. ದಿಲ್ಲಿ ಸೇವಾ ವಿಧೇಯಕದ ಬಗ್ಗೆ ಚರ್ಚೆಯನ್ನು ಸೀಮಿತಗೊಳಿಸಲು ಒತ್ತಾಯಿಸುತ್ತಿದ್ದರೂ ಡೆರೆಕ್‌ ಅವರು ಸರ್ಕಾರದ ಮೇಲೆ ಟೀಕೆಯೆ ಸುರಿಮಳೆಗೆ ಈ ಅವಕಾಶವನ್ನು ಉಪಯೋಗಿಸಿಕೊಂಡಿದ್ದರು. ʼಪ್ರಚಾರವನ್ನು ಪಡೆಯಲು ಸದನದಲ್ಲಿ ನಟನೆ ಮಾಡುತ್ತಿದ್ದೀರಿʼ ಎಂದು ಅಧ್ಯಕ್ಷರು ಓಬ್ರಿಯನ್‌ ಅವರನ್ನು ಆಕ್ಷೇಪಿಸಿದ್ದರು.

“ಇದು ನಿಮ್ಮ ಅಭ್ಯಾಸವಾಗಿದೆ. ನೀವು ಇದನ್ನು ತಂತ್ರದ ಭಾಗವಾಗಿ ಮಾಡುತ್ತಿದ್ದೀರಿ. ಈ ಪ್ರಚಾರವನ್ನು ನೀವು ಆನಂದಿಸುತ್ತಿದ್ದೀರಿ. ನೀವು ಈ ಸದನ ಕಲಾಪವನ್ನು ಧ್ವಂಸಗೊಳಿಸಿದ್ದೀರಿ. ಕುಳಿತುಕೊಳ್ಳಿ. ನಿಮ್ಮ ವರ್ತನೆ ಅಪ್ರಬುದ್ಧವಾಗಿದೆ. ನಿಮ್ಮ ಸ್ಥಾನಕ್ಕೆ ಅದು ಉಚಿತವಾಗಿಲ್ಲʼʼ ಎಂದು ಸಭಾಪತಿ ಕಟುವಾಗಿ ಹೇಳಿದ್ದರು.

ಇದನ್ನೂ ಓದಿ: Parliament Monsoon Session: ಸಂಸತ್ ಕಲಾಪದ ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ. ವೆಚ್ಚ!

Exit mobile version