Site icon Vistara News

Parliament Session 2024: ನಾಳೆಯಿಂದ ಮೊದಲ ಸಂಸತ್‌ ಅಧಿವೇಶನ; ಯಾರಾಗ್ತಾರೆ ಸ್ಪೀಕರ್?

Parliament Session 2024

18th Lok Sabha Session Begins From July 24 Taking Oath By New Mps Including Modi

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದಿದ್ದು, ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ನೂತನ ಸರ್ಕಾರ ರಚನೆಯಾದ ಬಳಿಕ, 18ನೇ ಲೋಕಸಭೆಯ ಮೊದಲ ಸಂಸತ್‌ ವಿಶೇಷ ಅಧಿವೇಶನವು (Parliament Session 2024) ಸೋಮವಾರದಿಂದ (ಜೂನ್‌ 24) ಆರಂಭವಾಗಲಿದೆ. ನರೇಂದ್ರ ಮೋದಿ ಅವರು ಸೇರಿ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲರೂ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ನರೇಂದ್ರ ಮೋದಿ ಅವರು ಸೇರಿ ಎಲ್ಲರೂ ನೂತನ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗೆಯೇ, ನೂತನ ಸ್ಪೀಕರ್‌ ಆಯ್ಕೆಯ ಪ್ರಕ್ರಿಯೆಯೂ ನಡೆಯಲಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ನರೇಂದ್ರ ಮೋದಿ ಹಾಗೂ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಂತರ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಂಸದರು ಅಲ್ಫಾಬೆಟಿಕಲ್‌ (ABCD ಆಧಾರದಂತೆ) ಆರ್ಡರ್‌ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉದಾಹರಣೆಗೆ, ಅಸ್ಸಾಂ ಸದಸ್ಯರು ಮೊದಲಿಗೆ, ಪಶ್ಚಿಮ ಬಂಗಾಳ ಸದಸ್ಯರು ಕೊನೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಸತ್‌ ವಿಶೇಷ ಅಧಿವೇಶನದ ಮೊದಲ ದಿನ ಅಂದರೆ, ಜೂನ್‌ 24ರಂದು ಮೋದಿ, ಸಚಿವರು ಸೇರಿ ಒಟ್ಟು 280 ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಂಗಳವಾರ ಅಂದರೆ ಜೂನ್‌ 25ರಂದು 264 ಸದಸ್ಯರು ಪದಗ್ರಹಣ ಮಾಡಲಿದ್ದಾರೆ. ಜೂನ್‌ 24ರಿಂದ ಜುಲೈ 3ರವರೆಗೆ ಸಂಸತ್‌ ವಿಶೇಷ ಅಧಿವೇಶನ ನಡೆಯಲಿದೆ. ಯಾವುದೇ ವಿಧೇಯಕಗಳ ಮಂಡನೆ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಯಾರಾಗ್ತಾರೆ ಸ್ಪೀಕರ್?‌

ಲೋಕಸಭೆಯ ಸ್ಪೀಕರ್‌ ಆಗಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಹಂಗಾಮಿ ಸ್ಪೀಕರ್‌ ಆಗಿ ಭಾರ್ತೃಹರಿ ಮಹತಾಬ್‌ ಅವರು ನೇಮಕಗೊಂಡಿದ್ದಾರೆ. ಜೂನ್‌ 26ರಂದು ಸ್ಪೀಕರ್‌ ಆಯ್ಕೆ ನಡೆಯುವ ಸಾಧ್ಯತೆ ಇದೆ. ಸ್ಪೀಕರ್‌ ಹುದ್ದೆಯ ಮೇಲೆ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಜೆಡಿಯು ಹಾಗೂ ಟಿಡಿಪಿ ಕಣ್ಣಿಟ್ಟಿವೆ. ಬಿಜೆಪಿ ಅಭ್ಯರ್ಥಿಯನ್ನೇ ಸ್ಪೀಕರ್‌ ಸ್ಥಾನಕ್ಕೆ ಕೂರಿಸುವುದು ಆ ಪಕ್ಷದ ಉದ್ದೇಶವಾಗಿದೆ. ಸ್ಪೀಕರ್‌ ಸ್ಥಾನಕ್ಕೆ ಬಿಜೆಪಿಯ ಕಿರಣ್‌ ರಿಜಿಜು ಅವರ ಹೆಸರುಗಳು ಕೂಡ ಕೇಳಿಬರುತ್ತಿವೆ. ಹಾಗಾಗಿ, ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: Pro Tem Speaker: ಲೋಕಸಭೆ ಹಂಗಾಮಿ ಸ್ಪೀಕರ್‌ ಆಗಿ ಬಿಜೆಪಿಯ ಭಾರ್ತೃಹರಿ ಮಹತಾಬ್ ನೇಮಕ

Exit mobile version