Site icon Vistara News

Parliament Session: ಪತಿ ಅಮಿತಾಬ್‌ ಹೆಸರು ಜಯಾ ಬಚ್ಚನ್‌ಗೆ ಅಲರ್ಜಿ! ಸಂಸತ್‌ನಲ್ಲಿ ಆ ಹೆಸರು ಹೇಳಬೇಡಿ ಎಂದ ನಟಿ!

Jaya Bachchan

ಪತಿಯ ಹೆಸರು ಹೇಳಿ ತಮ್ಮನ್ನು ಕರೆದುದಕ್ಕೆ ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ  (Parliament Session) ಹಿರಿಯ ನಟಿ, ರಾಜಕಾರಣಿ (Veteran actor and politician) ಜಯಾ ಬಚ್ಚನ್ (Jaya Bachchan) ಕೋಪಗೊಂಡ ಘಟನೆ ರಾಜ್ಯಸಭೆಯಲ್ಲಿ ನಡೆದಿದೆ. ರಾಜ್ಯಸಭಾ ಉಪಾಧ್ಯಕ್ಷ (Rajya Sabha Deputy Chairman) ಹರಿವಂಶ್ ನಾರಾಯಣ್ ಸಿಂಗ್ (Harivansh Narayan Singh) ಅವರು ಸೋಮವಾರ ಜಯಾ ಬಚ್ಚನ್ ಅವರನ್ನು ಜಯಾ ಅಮಿತಾಬ್ ಬಚ್ಚನ್ ಎಂದು ಕರೆದಿದ್ದರು. ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು “ಶ್ರೀಮತಿ ಜಯಾ ಅಮಿತಾಭ್ ಬಚ್ಚನ್ ಜೀ, ದಯವಿಟ್ಟು ಮಾತನಾಡಿʼ ಎಂದು ಸದನದಲ್ಲಿ ಮಾತನಾಡಲು ಜಯಾ ಬಚ್ಚನ್ ಅವರನ್ನು ಕರೆದರು.

ಸರ್, ಸಿರ್ಫ್ ಜಯಾ ಬಚ್ಚನ್ ಬೋಲ್ತೆ ತು ಕಾಫಿ ಹೋ ಜಾತಾ (ನನ್ನನ್ನು ಕೇವಲ ಜಯಾ ಬಚ್ಚನ್ ಎಂದು ಕರೆದರೆ ಸಾಕಿತ್ತು) ಎಂದು ಜಯಾ ಬಚ್ಚನ್ ಗರಂ ಆಗಿ ಪ್ರತಿಕ್ರಿಯಿಸಿದರು! ಆಗ ಹರಿವಂಶ್ ನಾರಾಯಣ್ ಸಿಂಗ್ ಅವರು ಸಂಸತ್ತಿನ ದಾಖಲೆಗಳಲ್ಲಿ ಅಧಿಕೃತವಾಗಿ ಜಯಾ ಅಮಿತಾಬ್ ಬಚ್ಚನ್ ಎಂದು ನಿಮ್ಮ ಹೆಸರನ್ನು ನೋಂದಾಯಿಸಲಾಗಿದೆ ಎಂದು ತಿಳಿಸಿದರು.

ನಿಮ್ಮ ಪೂರ್ಣ ಹೆಸರನ್ನು ಇಲ್ಲಿ ಬರೆಯಲಾಗಿದೆ. ನಾನು ಅದನ್ನೇ ಪುನರಾವರ್ತಿಸಿದೆ ಎಂದು ಸಿಂಗ್ ಹೇಳಿದರು.
ಇದು ಹೊಸ ಸಂಗತಿಯಾಗಿದೆ. ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಮಹಿಳೆಯರು ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳನ್ನು ಹೊಂದಿಲ್ಲ ಏಕೆ ಎಂದು ಬಚ್ಚನ್ ತೀಕ್ಷ್ಣವಾಗಿ ಪ್ರಶ್ನಿಸಿದರು.


ಬಳಿಕ ಜಯಾ ಬಚ್ಚನ್ ಅವರು ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಮೂವರು ಯುಪಿಎಸ್ ಸಿ ಆಕಾಂಕ್ಷಿಗಳ ಮರಣವನ್ನು ಉದ್ದೇಶಿಸಿ ಮಾತನಾಡಿ, ಇದು ಅತ್ಯಂತ ನೋವಿನ ಘಟನೆಯಾಗಿದ್ದು, ನಾವು ಈ ವಿಷಯದಲ್ಲಿ ರಾಜಕೀಯವನ್ನು ತರಬಾರದು ಎಂದು ಅವರು ಹೇಳಿದರು.

ಇದನ್ನೂ ಓದಿ: Whatsapp Shutdown: ಭಾರತದಲ್ಲಿ ಇನ್ಮುಂದೆ ಬಂದ್‌ ಆಗುತ್ತಾ ವಾಟ್ಸ್‌ಆಪ್‌? ಕೇಂದ್ರ ಸರ್ಕಾರ ಹೇಳೋದೇನು?

ಕಳೆದ ವಾರ ಪೂರ್ವ ದೆಹಲಿಯ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಘಟನೆಗೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಮತ್ತು ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಈ ವಿಚಾರದಲ್ಲಿ ವಾಕ್‌ ಪ್ರಹಾರ ನಡೆಸುತ್ತಿದೆ.

Exit mobile version