Site icon Vistara News

Parliament Winter Session | 6 ದಿನ ಮೊದಲೇ ಸಂಸತ್‌ ಅಧಿವೇಶನ ಅಂತ್ಯ, ಪಾಸಾಗಲಿಲ್ಲ 16 ವಿಧೇಯಕ

Parliament Winter session ends

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದಿರುವ ಕುರಿತು ಸಂಸತ್ತಿನಲ್ಲಿ ಗಲಾಟೆ ಮುಂದುವರಿದ ಬೆನ್ನಲ್ಲೇ ಶುಕ್ರವಾರ ಸಂಸತ್‌ ಚಳಿಗಾಲದ ಅಧಿವೇಶನವನ್ನು (Parliament Winter Session) ನಿಗದಿತ ದಿನಾಂಕಕ್ಕಿಂತ ಆರು ದಿನ ಮೊದಲೇ ಅಂತ್ಯಗೊಳಿಸಲಾಗಿದೆ.

ಡಿಸೆಂಬರ್‌ 7ರಂದು ಆರಂಭವಾದ ಸಂಸತ್‌ ಅಧಿವೇಶನವು ಡಿಸೆಂಬರ್‌ 29ರಂದು ಮುಗಿಯಬೇಕಿತ್ತು. ಆದರೆ, ಆರು ದಿನಗಳ ಮೊದಲೇ ಅಂತ್ಯಗೊಳಿಸಲಾಗಿದೆ. 2020ರ ಬಜೆಟ್‌ ಅಧಿವೇಶನದಿಂದ ಹಿಡಿದು ಇದುವರೆಗೆ ಸಂಸತ್ತಿನ ಆರು ಅಧಿವೇಶನಗಳನ್ನು ಅವಧಿಗೂ ಮುನ್ನವೇ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಲೋಕಸಭೆಯಲ್ಲಿ ನಡೆದ ಕಲಾಪಗಳು ಶೇ.97ರಷ್ಟು ಫಲಪ್ರದ ಎಂದು ಸ್ಪೀಕರ್‌ ಓಂ ಬಿರ್ಲಾ ಮಾಹಿತಿ ನೀಡಿದರು. ಹಾಗೆಯೇ, ರಾಜ್ಯಸಭೆಯ ಕಲಾಪಗಳು ಶೇ.102ರಷ್ಟು ಫಲಪ್ರದ ಎಂದು ಸಭಾಪತಿ ಜಗದೀಪ್‌ ಧನಕರ್‌ ತಿಳಿಸಿದರು. ಭಾರತ-ಚೀನಾ ಸೈನಿಕರ ಸಂಘರ್ಷದ ಬಳಿಕ ಕಲಾಪಗಳು ಸುಗಮವಾಗಿ ನಡೆದಿರಲಿಲ್ಲ.

16 ವಿಧೇಯಕ ಬಾಕಿ, 9 ಪಾಸ್‌
ಕೇಂದ್ರ ಸರ್ಕಾರವು ಸಂಸತ್‌ ಅಧಿವೇಶನದಲ್ಲಿ ಸುಮಾರು 25 ವಿಧೇಯಕಗಳನ್ನು ಮಂಡಿಸುವ ಯೋಜನೆ ರೂಪಿಸಿತ್ತು. ಆದರೆ, ಗದ್ದಲ, ಗಲಾಟೆಯಿಂದಾಗಿ ಅಧಿವೇಶನದಲ್ಲಿ ಕೇವಲ 9 ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ. ಹಾಗಾಗಿ, 16 ವಿಧೇಯಕಗಳು ಬಾಕಿ ಉಳಿಯುವಂತಾಗಿದೆ. “ಸಂಸತ್ತಿನ ಉಭಯ ಸದನಗಳಲ್ಲಿ ಒಂಬತ್ತು ವಿಧೇಯಕಗಳು ಪಾಸಾಗಿವೆ” ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದರು.

ಇದನ್ನೂ ಓದಿ | ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಉಭಯ ಸದನಗಳ ಕಲಾಪ ಮುಂದೂಡಿಕೆ

Exit mobile version