Site icon Vistara News

Patanjali Case: ಪತಂಜಲಿಗೆ ಮತ್ತೆ ಸಂಕಷ್ಟ; ಬ್ಯಾನ್‌ ಆಗುತ್ತಾ ಈ ಉತ್ಪನ್ನಗಳು?

Patanjali case

ಉತ್ತರಾಖಂಡ: ಯೋಗಗುರು ಬಾಬಾ ರಾಮದೇವ್‌(Baba Ramdev) ಒಡೆತನದ ಪತಂಜಲಿ ಉತ್ಪನ್ನ(Patanjali Case)ಗಳಿಗೆ ಉತ್ತರಾಖಂಡದಲ್ಲಿ ಭಾರೀ ಸಂಕಷ್ಟ ಎದುರಾಗಿದ್ದು, ಬರೋಬ್ಬರಿ 14 ಉತ್ಪನ್ನಗಳ ಪರವಾನಗಿ ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಈ ಬಗ್ಗೆ ಸುಪ್ರೀಂಕೋರ್ಟ್‌(Supreme Court)ನಲ್ಲಿ ಅಫಿಡವಿಟ್‌ ಸಲ್ಲಿಕೆಯಾಗಿದ್ದು, ಜಾಹೀರಾತು ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ (Misleading Advertisement) ಮಾಡುತ್ತಿದೆ. ಹೀಗಾಗಿ ಪತಂಜಲಿಯ ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದುಗೊಳಿಸಲಾಗಿದೆ. ಆ ಮೂಲಕ ಆ 14 ಉತ್ಪನ್ನಗಳ ಮಾರಾಟ ಬ್ಯಾನ್‌ ಮಾಡಲಾಗಿದೆ ಎಂದು ತಿಳಿಸಿದೆ.

ಯಾವೆಲ್ಲಾ ಉತ್ಪನ್ನಗಳು ಬ್ಯಾನ್‌?

ದಿವ್ಯ ಫಾರ್ಮಸಿಯ ದೃಷ್ಟಿ ಐ ಡ್ರಾಪ್‌, ಸ್ವಾಸರಿ ಗೋಲ್ಡ್‌, ಸ್ವಾಸರಿ ವಟಿ, ಬ್ರೋಂಛಮ್‌, ಸ್ವಾಸರಿ ಪ್ರವಹಿ, ಸ್ವಾಸರಿ ಆವಲೇಹ್‌, ಮುಕ್ತ್‌ವಟಿ ಎಕ್ಸ್‌ಟ್ರಾ ಪವರ್‌, ಲಿಪಿದಂ, ಬಿಪಿ ಗ್ರಿತ್, ಮಧು ಗ್ರಿತ್‌, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್‌, ಲಿವಮೃತ ಅಡ್ವಾನ್ಸ್‌, ಲಿವೋಗೃತ್‌, ಐಗೃತ್‌ ಗೋಲ್ಡ್‌‌ ಸೇರಿದಂತೆ ಒಟ್ಟು 14 ಉತ್ಪನ್ನಗಳ ಮಾರಾಟವನ್ನು ಬ್ಯಾನ್‌ ಮಾಡಲಾಗಿದೆ. ಇನ್ನು ಈ ಬಗ್ಗೆ ಯೋಗಗುರು ಬಾಬಾ ರಾಮದೇವ್‌ ಮತ್ತು ಅವರ ಸಹಚರ ಆಚಾರ್ಯ ಬಾಲಕೃಷ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ. ಅವರು ಮಂಗಳವಾರ ಕೋರ್ಟ್‌ ವಿಚಾರಣೆಗೆ ಹಾಜರಾಗಲಿದ್ದಾರೆ.

ಕೋರ್ಟ್‌ ಏನು ಹೇಳಿತ್ತು?

ಈಗಾಗಲೇ ಈ ಬಗ್ಗೆ ಕ್ಷಮಾಪಣೆ ಪತ್ರವನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಸುಪ್ರೀಂಕೋರ್ಟ್‌ ಬಾಬಾ ರಾಮ್‌ದೇವ್‌ ಅವರಿಗೆ ಸೂಚನೆ ನೀಡಿತ್ತು. ಕ್ಷಮಾಪಣೆ ಪತ್ರವನ್ನು ಸರಿಯಾದ ರೀತಿಯಲ್ಲಿ ಪ್ರಕಟಿಸಿಲ್ಲ ಎಂದು ಏ.23ರಂದು ತರಾಟೆಗೆ ತೆಗೆದುಕೊಂಡಿತ್ತು. ಪತ್ರಿಕೆಗಳಲ್ಲಿ ಫುಲ್‌ ಪೇಜ್‌ ಜಾಹೀರಾತಿನ ಅಳತೆಯಲ್ಲೇ ಕ್ಷಮಾಪಣೆ ಪತ್ರ ಪ್ರಕಟಿಸುವಂತೆ ಆದೇಶಿಸಿತ್ತು. ಇದನ್ನು ಉಲ್ಲಂಘಿಸಿದ ಕಾರಣದಿಂದ ಸುಪ್ರೀಂಕೋರ್ಟ್‌ ಪತಂಜಲಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಅದಕ್ಕೆ ಪತಂಜಲಿ ಸಂಸ್ಥೆ ಕೋರ್ಟ್‌ನ ಕ್ಷಮೆಯನ್ನೂ ಕೂಡ ಕೇಳಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್‌ ಮತ್ತೆ ದೊಡ್ಡ ಸೈಜ್‌ನಲ್ಲಿ ಕ್ಷಮಾಪಣಾ ಪತ್ರ ಪ್ರಕಟಿಸುವಂತೆ ಆದೇಶಿಸಿತ್ತು.

ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮೆಡೀಸ್‌ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ:Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?

ನಂತರ ತೀಕ್ಷ್ಣವಾದ ಪದಗಳೊಂದಿಗೆ ನ್ಯಾಯಪೀಠವು ದೇಶದ ಪ್ರಮುಖ ವೈದ್ಯರ ಸಂಘದತ್ತ ಚಾಟಿ ಬೀಸಿತು. “ಪತಂಜಲಿಯನ್ನು ಒಂದು ಬೆಟ್ಟು ಮಾಡಿ ತೋರುವಾಗ ನಾಲ್ಕು ಬೆರಳುಗಳು ಅವರತ್ತಲೂ ತೋರಿಸುತ್ತಿವೆ. ನಿಮ್ಮ (ಐಎಂಎ) ವೈದ್ಯರು ಕೂಡ ಅಲೋಪತಿ ಕ್ಷೇತ್ರದಲ್ಲಿ ದುಬಾರಿ ಮತ್ತು ಅನಗತ್ಯ ಔಷಧಿಗಳನ್ನು ಅನುಮೋದಿಸುತ್ತಿದ್ದಾರೆ. ನಾವು ನಿಮ್ಮ (ಐಎಂಎ) ಕಡೆ ಏಕೆ ಪ್ರಕರಣವನ್ನು ತಿರುಗಿಸಬಾರದು?” ಎಂದು ಸುಪ್ರೀಂ ಕೋರ್ಟ್ ಐಎಂಎಗೆ ಪ್ರಶ್ನಿಸಿದೆ.

Exit mobile version