Site icon Vistara News

Pathaan Movie: 1000 ಕೋಟಿ ರೂ. ಗಳಿಸಿದ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ!

Pathaan Movie box office collection reached RS 1000 crore

ಮುಂಬೈ, ಮಹಾರಾಷ್ಟ್ರ: ಬಾಲಿವುಡ್ ಬಾದಶಾ ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ನಟನೆಯ ಪಠಾಣ್ (Pathaan Movie) 1000 ಕೋಟಿ ರೂ. ಗಳಿಕೆಯ ಸಿನಿಮಾಗಳ ಕ್ಲಬ್ ಸೇರಿದೆ. ಚಿತ್ರ ಬಿಡುಗಡೆಯಾಗಿ 27ನೇ ದಿನಕ್ಕೆ ಪಠಾಣ್ ಸಿನಿಮಾ ಈ ಸಾಧನೆ ಮಾಡಿದೆ. ಜಗತ್ತಿನಾದ್ಯಂತ ಸಿನಿಮಾದ ಒಟ್ಟು ಗಳಿಕೆ ಸಾವಿರ ಕೋಟಿ ರೂಪಾಯಿ ಮೀರಿದೆ. ಹಾಗೆಯೇ, ಹಿಂದಿ ಸಿನಿಮಾಗಳಲ್ಲಿ ಅತಿ ಹೆಚ್ಚು ಗಳಿಕೆಯ ಸಿನಿಮಾಗುವತ್ತಲೂ ಸಾಗಿದೆ.

ಬಾಕ್ಸ್ ಆಫೀಸ್ ವರ್ಲ್ಡ್‌ವೈಡ್ ರಿಪೋರ್ಟ್ ಹೀಗಿದೆ…

ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ದೇಶಿ ಮಾರುಕಟ್ಟೆಯಲ್ಲಿ 500 ಕೋಟಿ ರೂ. ಗಡಿ ದಾಟುತ್ತಿರುವ ಪಠಾಣ್ ಮೊದಲ ಸಿನಿಮಾವಾಗಿದೆ. ಹಾಗೆಯೇ, ಅತಿ ವೇಗವಾಗಿ 500 ಕೋಟಿ ರೂ. ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಯೂ ಪಠಾಣದ್ದಾಗಿದೆ. ಹಾಗೆಯೇ ಎಲ್ಲ ಭಾಷೆಗಳ ಆವೃತ್ತಿ ಸೇರಿ ಪಠಾಣ್ ಈಘ 616 ಕೋಟಿ ರೂ. ಗಳಿಸಿದಂತಾಗಿದೆ ಎಂದು ಹೇಳಿದ್ದಾರೆ. ಇದು ದೇಶಿ ಮಾರುಕಟ್ಟೆಯ ಗಳಿಕೆ ಲೆಕ್ಕಾಚಾರ ಮಾತ್ರವೇ ಆಗಿದೆ.

ಇದನ್ನೂ ಓದಿ: Pathaan Movie : ಪಠಾಣ್ ಸಿನಿಮಾಕ್ಕಾಗಿ 1700 ಪುಟಗಳ ಪುಸ್ತಕ ರಚಿಸಿದ ಶಾರುಖ್ ಖಾನ್!

ಬಾಕ್ಸ್ ಆಫೀಸ್ ವರ್ಲ್ಡ್ ವೈಡ್ ಕೂಡ ಟ್ವೀಟ್ ಮಾಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ 519 ಕೋಟಿ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಈಗ ಪಠಾಣ್ ಸಾವಿರ ಕೋಟಿ ರೂ. ಗಳಿಸಿದೆ. ಆ ಮೂಲಕ ಭಾರತದ ಸಾವಿರ ಕೋಟಿ ರೂ. ಗಳಿಕೆಯ ಸಿನಿಮಾಗಳ ಕ್ಲಬ್ ಸಾಲಿಗೆ ಸೇರಿದೆ. ಸೋಮವಾರ ಟ್ವೀಟ್ ಮಾಡಿದ್ದ ಯಶ್ ರಾಜ್ ಫಿಲ್ಮ್ಸ್, 996 ಕೋಟಿ ರೂ. ಗಳಿಸಿ ಪಠಾಣ್ ಸಿನಿಮಾ ಮುನ್ನುಗುತ್ತಿದೆ ಎಂದು ಹೇಳಿತ್ತು. ಈಗ ಮಂಗಳವಾರ ಪಠಾಣ್, ಗಳಿಕೆಯಲ್ಲಿ ಸಾವಿರ ಕೋಟಿ ರೂ. ತಲುಪಿದೆ ಎಂದು ಹೇಳಲಾಗುತ್ತಿದೆ.

ತರಣ್ ಆದರ್ಶ್ ಟ್ವೀಟ್ ಇಲ್ಲಿದೆ…

Exit mobile version