Site icon Vistara News

Pathaan Movie, ಯಾರು ಶಾರುಖ್ ಎಂದು ಕೇಳಿದ ಅಸ್ಸಾಮ್ ಸಿಎಂಗೆ ಖಾನ್ ಫೋನ್ ಕಾಲ್!

Himanta Biswa Sarma is Mr Dependable leader of BJP of North East States

ಗುವಾಹಟಿ: ಬಾಲಿವುಡ್ ಸಿನಿಮಾಗಳ ಬಗ್ಗೆ ಅನಗತ್ಯ ಟೀಕೆ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದರು. ಅವರು ಸಲಹೆ ನೀಡಿದ ಎರಡ್ಮೂರು ದಿನದಲ್ಲಿ ಶಾರುಖ್ ಅಭಿನಯದ ಪಠಾಣ್ (Pathaan Movie) ಚಿತ್ರಕ್ಕೆ ಅಸ್ಸಾಮ್‌ನಲ್ಲಿ ತೊಂದರೆಯಾಗಿದೆ. ಈ ಬಗ್ಗೆ ನಟ ಶಾರುಖ್ ಖಾನ್ (Shah Rukh Khan) ಅವರು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ (Himanta Biswa Sarma) ಅವರಿಗೆ ಫೋನ್ ಮಾಡಿ, ಮಾತನಾಡಿದ್ದಾರೆ. ಈ ವಿಷಯವನ್ನು ಸ್ವತಃ ಅಸ್ಸಾಮ್ ಮುಖ್ಯಮಂತ್ರಿ ಟ್ವಿಟರ್ ಮೂಲಕ ಖಚಿತ ಪಡಿಸಿದ್ದಾರೆ. ಇದಕ್ಕೂ ಮೊದಲು ಅವರು, ಶಾರುಖ್ ಖಾನ್ ಅವರು ಯಾರು ಎಂದು ಕೇಳಿದ್ದರು. ಇದಾದ ಬಳಿಕ ಗುವಾಹಟಿಯಲ್ಲಿ ಹಿಂದೂ ಪರ ಸಂಘಟನೆಗಳು ಕಾರ್ಯಕರ್ತರು ಪಠಾಣ್ ಚಿತ್ರದ ಸಿನಿಮಾ ಪೋಸ್ಟರ್‌ಗಳನ್ನು ಹರಿದು ಹಾಕಿದ್ದರು.

2 ಗಂಟೆಗೇ ಕಾಲ್
ಬಾಲಿವುಡ್ ನಟ ಶಾರುಖ್ ಖಾನ್ ಅವರು ಮಾರ್ನಿಂಗ್ 2 ಗಂಟೆಗೆ ಕಾಲ್ ಮಾಡಿದ್ದರು. ಪಠಾಣ್ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಗುವಾಹಟಿಯಲ್ಲಿ ನಡೆದ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಹೊಣೆಯಾಗಿದೆ. ಇಂಥ ಅಹಿತಕರ ಘಟನೆಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸ್ವತಃ ಅಸ್ಸಾಮ್ ಮುಖ್ಯಮಂತ್ರಿಯೇ ಈ ಕುರಿತು ಟ್ವೀಟ್ ಮಾಡಿ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಯಾರು ಶಾರುಖ್ ಖಾನ್?
ವಿಶೇಷ ಎಂದರೆ, ಶಾರುಖ್ ಖಾನ್ ಫೋನ್ ಮಾಡುವುದಕ್ಕಿಂತ ಒಂದು ಮೊದಲು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು, ಯಾರು ಶಾರುಖ್ ಖಾನ್ ಎಂದು ಪ್ರಶ್ನಿಸಿದ್ದರು. ಪಠಾಣ್ ಸಿನಿಮಾದ ವಿರುದ್ಧ ಹಿಂದೂ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ, ಯಾರು ಶಾರುಖ್ ಖಾನ್? ಆತನ ಬಗ್ಗೆಯಾಗಲೀ ಅಥವಾ ಆತನ ಸಿನಿಮಾ ಬಗ್ಗೆಯಾಗಲೀ ನನಗೇನೂ ಗೊತ್ತಿಲ್ಲ ಎಂದು ಉತ್ತರಿಸಿದ್ದರು.

ಇದನ್ನೂ ಓದಿ Pathaan Movie: ರಾಮ್ ಚರಣ್ ಕರೆದುಕೊಂಡು ಹೋದರೆ `ಪಠಾಣ್‌’ ವೀಕ್ಷಿಸಲು ಬರುತ್ತೇನೆ ಎಂದ ಶಾರುಖ್‌!

ಶಾರುಖ್ ಖಾನ್ ಅವರು ಬಾಲಿವುಡ್‌ನ ಸೂಪರ್ ಸ್ಟಾರ್ ಎಂದು ಹೇಳಿದಾಗ, ರಾಜ್ಯದ ಜನರು ಅಸ್ಸಾಮಿ ಚಿತ್ರಗಳ ಬಗ್ಗೆ ಗಮನ ಹರಿಸಬೇಕು. ಬಾಲಿವುಡ್ ಚಿತ್ರಗಳ ಬಗ್ಗೆ ಅಲ್ಲ ಎಂದು ಸಿಎಂ ಹೇಳಿದ್ದರು. ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರವು ಜನವರಿ 25ರಂದು ದೇಶಾದ್ಯಂತ ರಿಲೀಸ್ ಆಗುತ್ತಿದೆ. ಆದರೆ, ಹಿಂದೂ ಸಂಘಟನೆಗಳು ಪಠಾಣ್ ವಿರುದ್ಧ ಪ್ರತಿಭಟನೆಯನ್ನು ಕೈಗೊಂಡಿವೆ.

Exit mobile version