Site icon Vistara News

Girl Jumps: ಪಿಯುಸಿಯಲ್ಲಿ ಅಂಕ ಕಡಿಮೆ ಬಂತು ಎಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ; ಭೀಕರ ವಿಡಿಯೊ ವೈರಲ್

patna new

patna new

ಪಟನಾ: ಬಿಹಾರದ ಪಟನಾದಲ್ಲಿ ಶನಿವಾರ (ಸೆಪ್ಟೆಂಬರ್‌ 30) ಹುಡುಗಿಯೊಬ್ಬಳು ಅಪಾರ್ಟ್‌ಮೆಂಟ್‌ ಮೇಲಿನಿಂದ ಜಿಗಿದು (Girl Jumps) ಆತ್ಮಹತ್ಯೆಗೆ ಯತ್ನಿಸಿದ್ದು, ಅಲ್ಲೇ ಇದ್ದ ಯುವಕನೊಬ್ಬ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಸದ್ಯ ಆಕೆ ಕಟ್ಟಡದಿಂದ ಜಿಗಿಯುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ (social media)ವೈರಲ್‌ ಆಗಿದೆ.

12ನೇ ತರಗತಿಯಲ್ಲಿ ಓಡುತ್ತಿರುವ ಆಕೆ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ಫೇಲ್‌ ಆಗಿದ್ದ ಆಕೆ ಖಿನ್ನತೆಗೆ ಜಾರಿದ್ದಳು. ಅವಳು ಅಪಾರ್ಟ್‌ಮೆಂಟ್‌ನ ತುದಿಯಲ್ಲಿ ಕುಳಿತುಕೊಳ್ಳುವುದು ಮತ್ತು ಅಲ್ಲಿಂದ ಜಿಗಿಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಕೆಯನ್ನು ಕೂಡಲೇ ಯುವಕನೊಬ್ಬ ರಕ್ಷಿಸಲು ಮುಂದಾಗಿದ್ದು, ಈ ದೃಶ್ಯ ವಿಡಿಯೊದಲ್ಲಿ ಕಂಡುಬಂದಿಲ್ಲ. ಆಸ್ಪತ್ರೆಗೆ ದಾಖಲಾದ ಅಪ್ರಾಪ್ತೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ.

ನಾಗೇಶ್ವರ್‌ ಕಾಲೋನಿಯ ಜೈ ಭಾರತ್‌ ರೆಸಿಡೆನ್ಸಿಯಲ್ಲಿ ಬಾಲಕಿ ತನ್ನ ಪಾಲಕರೊಂದಿಗೆ ವಾಸವಾಗಿದ್ದಳು. ಆಕೆ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಜೈ ಭಾರತ್‌ ರೆಸಿಡೆನ್ಸಿಯ ಎರಡನೇ ಫ್ಲೋರ್‌ನ ಬಾಡಿಗೆ ಮನೆಯಲ್ಲಿ ಬಾಲಕಿಯ ಕುಟುಂಬ ವಾಸವಾಗಿದೆ.

ತಡೆಯಲು ಯತ್ನಿಸಿದ ಯುವಕ

ಬಾಲಕಿಯನ್ನು ರಕ್ಷಿಸಲು ಯತ್ನಿಸಿದ ಯುವಕ ಆಕೆ ಕಟ್ಟಡದ ಮೇಲೇರುವುದನ್ನು ಗಮನಿಸಿ ಜಿಗಿಯದಂತೆ ಮನವಿ ಮಾಡಿದ್ದ. ಆದರೆ ಆತನ ಮಾತನ್ನು ಕೇಳದೆ ಬಾಲಕಿ ಜಿಗಿದಿದ್ದಳು. ನೆಲಕ್ಕೆ ಅಪ್ಪಳಿಸಿದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಆತ ನೆರವಾಗಿದ್ದ. ಆದರೆ ಆಕೆ ಜಿಗದ ರಭಸಕ್ಕೆ ತಲೆ ಒಡೆದಿತ್ತು ಮತ್ತು ಧಾರಾಳವಾಗಿ ರಕ್ತ ಸೋರಿಕೆಯಾಗಿತ್ತು. ಘಟನೆಯಲ್ಲಿ ಆತನಿಗೂ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಪ್ರಾಪ್ತೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಆಕೆ 12ನೇ ತರಗತಿ ಪರೀಕ್ಷೆಯಲ್ಲಿ ಫೇಲಾಗಿದ್ದೇ ಈ ಕೃತ್ಯ ಎಸಗಲು ಕಾರಣ. ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ: Afghan Embassy: ದೆಹಲಿ ರಾಯಭಾರ ಕಚೇರಿ ಮುಚ್ಚಿದ ಆಫ್ಘನ್;‌ ದುಡ್ಡಿಲ್ಲದಿದ್ದರೂ ಭಾರತದ ಮೇಲೆ ಆರೋಪ

ಚರ್ಚೆ ಹುಟ್ಟುಹಾಕಿದ ಘಟನೆಗಳು

ಸದ್ಯ ಈ ಘಟನೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳ ಪ್ರವೃತ್ತಿಗಳ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ನಗರದಲ್ಲಿ ವರದಿಯಾಗುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳನ್ನು ಪರಿಶೀಲಿಸುವ ಉದ್ದೇಶದಿಂದ ರಾಜಸ್ಥಾನ ಸರ್ಕಾರ ಶನಿವಾರ ಕೋಚಿಂಗ್ ಕೇಂದ್ರಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಶ್ರೇಯಾಂಕ ನೀಡುವ ಬದಲು ವರ್ಣಮಾಲೆಯನ್ನು ಅಳವಡಿಸುವಂತೆ ಸೂಚಿಸಿದೆ. ವಾಡಿಕೆಯ ಪರೀಕ್ಷೆಗಳ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸದಿರುವಂತೆಯೂ ತಿಳಿಸಿದೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಆಕಾಂಕ್ಷಿಯೊಬ್ಬರು ಬುಧವಾರ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವರ್ಷ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 27ಕ್ಕೆ ಏರಿದೆ. ಅಲ್ಲದೆ ಈ ತಿಂಗಳ ಆರಂಭದಲ್ಲಿ ಪಾಟ್ನಾ ಏಮ್ಸ್‌(AIIMS Patna)ನ 24 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಗುರುಗ್ರಾಮ ನಿವಾಸಿ ನಿಲೇಶ್ ಕುಮಾರ್ ಪಾಟ್ನಾದ ಏಮ್ಸ್ ಅರಿವಳಿಕೆ ವಿಭಾಗದಲ್ಲಿ ಮೊದಲ ವರ್ಷದ ಎಂಡಿ ವಿದ್ಯಾರ್ಥಿಯಾಗಿದ್ದರು.

Exit mobile version