Site icon Vistara News

ಬರ್ತ್ ಡೇಟ್ ತಪ್ಪಾಗಿದ್ದಕ್ಕೆ 5 ಕೋಟಿ ರೂ. ವಿಮೆ ಪಾವತಿಗೆ ನಿರಾಕರಣೆ! 4 ಕೋಟಿ ಬಡ್ಡಿ ಸೇರಿಸಿ 9 ಕೋಟಿ ರೂ. ನೀಡಲು ಆಯೋಗ ಆದೇಶ!

Pay rs 9 crore including rs 4 crore to applicant Says Consumer Court

ನವದೆಹಲಿ: ಅರ್ಜಿದಾರರಿಗೆ 5 ಕೋಟಿ ರೂ. ಜೀವ ವಿಮೆ (Life Insurance) ಪಾವತಿಸಲು ನಿರಾಕರಿಸಿದ ಕಂಪನಿಗೆ 4 ಕೋಟಿ ಬಡ್ಡಿಯೊಂದಿಗೆ 9 ಕೋಟಿ ರೂ. ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಆಯೋಗವು (national consumer disputes redressal commission) ಆದೇಶಿಸಿದೆ. ಜೀವ ವಿಮೆ ಮಾಡಿದ ಮೃತ ವ್ಯಕ್ತಿಯ ಜನ್ಮ ದಿನಾಂಕ ತಪ್ಪಾಗಿದೆ (Wrong Birth Date) ಎಂದು ಆರೋಪಿಸಿ, ವಿಮೆ ಕಂಪನಿಯು ಮೃತ ವ್ಯಕ್ತಿಯ ಹೆಂಡತಿಗೆ ವಿಮೆ ಮೊತ್ತ ಪಾವತಿಸಲು ನಿರಾಕರಿಸಿತ್ತು. ವಿಮೆಯ ಹಣದ ಜತೆಗೆ ಬಡ್ಡಿಯಾಗಿ 4 ಕೋಟಿ ರೂ. ಪಾವತಿಸುವಂತೆ ಆಯೋಗವು ಈಗ ತೀರ್ಪು ನೀಡಿದೆ(Consumer Court).

ಯೋಗೇಶ್ ಪಾರೇಖ್ ಎಂಬುವರು ಎದೆನೋವಿನಿಂದಾಗಿ 2014ರಲ್ಲಿ ಮೃತಪಟ್ಟಿದ್ದರು. ಆಗ ಅವರ ಪತ್ನಿ ದೀಪ್ತಿ ಪಾರೇಖ್ ಅವರು ವಿಮೆ ಕ್ಲೇಮ್ ಮಾಡಲು ಮುಂದಾದರು. ಆದರೆ, ವಿಮಾ ಕಂಪನಿಯು, ತಪ್ಪು ಜನ್ಮ ದಿನಾಂಕ ನೋಂದಣಿ, ವೈದ್ಯಕೀಯ ಚಿಕಿತ್ಸೆ ಇತಿಹಾಸ ಮಾಹಿತಿ ಕೊರತೆ ಮತ್ತು ಈ ಹಿಂದಿನ ಕ್ಲೇಮುಗಳ ತಿರಸ್ಕಾರದ ಹಿನ್ನೆಲೆಯಲ್ಲಿ 5 ಕೋಟಿ ರೂ. ವಿಮೆ ಪಾವತಿಸಲು ನಿರಾಕರಿಸಿತ್ತು.

ವಿಮೆ ನೀಡಲು ನಿರಾಕರಿಸಿದ ಕಂಪನಿಯ ಈ ನೀತಿಯ ವಿರುದ್ಧ ದೀಪ್ತಿ ಪಾರೇಖ್ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಅಂತಿಮವಾಗಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು, ವಿಮೆ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಬಡ್ಡಿಯಾಗಿ ಹೆಚ್ಚುವರಿ 4 ಕೋಟಿ ರೂಪಾಯಿಯನ್ನು ಪಾವತಿಸುವಂತೆ ಸೂಚಿಸಿದೆ. ಅಂದರೆ ವಿಮೆ ಮೊತ್ತ 5 ಕೋಟಿ ರೂ. ವಿಮೆ ಮೊತ್ತ ಜತೆಗೆ ಈಗ ಹೆಚ್ಚುವರಿಯಾಗಿ 4 ಕೋಟಿ ರೂಪಾಯಿಯನ್ನು ಪಾವತಿಸಬೇಕಾಗಿದೆ.

ಈ ಸುದ್ದಿಯನ್ನೂ ಓದಿ: ಹೆಂಡತಿಗೆ ಚಳ್ಳೆಹಣ್ಣು ತಿನ್ನಿಸಿ ಹಣ ಲಪಟಾಯಿಸಿದ ಗಂಡ! ಇದು ಗ್ರಾಹಕ ವ್ಯಾಜ್ಯ ಅಲ್ಲ ಎಂದ ಆಯೋಗ

ಡಿಕೆ ಬ್ರದರ್ಸ್‌ಗೆ ಗ್ರಾಹಕ ಕೋರ್ಟ್‌ ಶಾಕ್; ಬಡ್ಡಿ ಸಹಿತ 17 ಲಕ್ಷ ರೂ. ವಾಪಸ್‌ಗೆ ಆರ್ಡರ್

ಎರಡು ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಮತ್ತು ಅವರ ಸೋದರ ಡಿ.ಕೆ. ಸುರೇಶ್‌ ಅವರಿಗೆ ಗ್ರಾಹಕರ ನ್ಯಾಯಾಲಯ (Consumer court) ಬಿಗ್‌ ಶಾಕ್‌ ನೀಡಿದೆ. ಗ್ರಾಹಕರೊಬ್ಬರು ₹30 ಲಕ್ಷ ಮುಂಗಡ ಹಣ ಪಾವತಿಸಿ ಕಾಯ್ದಿರಿಸಿದ್ದ ಫ್ಲ್ಯಾಟ್‌ ಅನ್ನು ನಿಗದಿತ ಸಮಯದಲ್ಲಿ ಪೂರ್ಣ ಹಣ ಪಾವತಿ ಮಾಡದೆ ವಿಳಂಬ ಮಾಡಿದ್ದಾರೆ ಎನ್ನುವ ಕಾರಣ ನೀಡಿ 17 ಲಕ್ಷ ರೂ. ಕಡಿತ ಮಾಡಿ ಬಾಕಿ ಹಣ ಪಾವತಿಸಿದ್ದ ಪ್ರಕರಣದಲ್ಲಿ ಡಿ.ಕೆ ಬ್ರದರ್ಸ್‌ಗೆ (DK Brothers) ಹಿನ್ನಡೆಯಾಗಿದೆ. ಕಡಿತ ಮಾಡಿರುವ ಹಣವನ್ನು ವಾರ್ಷಿಕ ಶೇ. 10ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.

ಬೆಂಗಳೂರಿನ ಎನ್‌ಟಿವೈ ಬಡಾವಣೆಯ ನಿವಾಸಿ ಜೆ ರಾಘವೇಂದ್ರ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಎಂ ಶೋಭಾ, ಸದಸ್ಯರಾದ ಸುಮಾ ಮತ್ತು ಅನಿಲ್ ಕುಮಾರ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version