ನವದೆಹಲಿ: ಪಿಂಚಣಿದಾರರು ಸರ್ಕಾರದಿಂದ ಪಿಂಚಣಿ ಪಡೆಯಲು ಪ್ರತಿ ವರ್ಷ ಲೈಫ್ ಸರ್ಟಿಫಿಕೇಟ್ (Jeevan Pramaan) ಸಲ್ಲಿಸಬೇಕು. ಬ್ಯಾಂಕ್, ಅಂಚೆ ಕಚೇರಿಗಳಿಗೆ ತೆರಳಿ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ, ನಿವೃತ್ತ ನೌಕರರು ಪಿಂಚಣಿ ಪಡೆಯಲು ಇಷ್ಟೆಲ್ಲ ಪ್ರಕ್ರಿಯೆ ಪಾಲಿಸಬೇಕಾಗಿದ್ದು, ಇದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈಗ ಪಿಂಚಣಿದಾರರು ಆ್ಯಪ್‌ಗಳ ಮೂಲಕವೇ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದಾಗಿದೆ.
ಹೌದು, ಜೀವನ್ ಪ್ರಮಾಣ್ (Jeevan Pramaan) ಹಾಗೂ ಟಿ-ಫೋಲಿಯೋ (T-Folio) ಆ್ಯಪ್‌ಗಳ ಮೂಲಕ ಪಿಂಚಣಿದಾರರು ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದಾಗಿದೆ. ಇದರಿಂದ ಹಿರಿಯ ನಾಗರಿಕರು ಸರ್ಕಾರದ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ಸಮಯದ ಉಳಿತಾಯವೂ ಆಗುತ್ತದೆ.
ಆ್ಯಪ್ ಮೂಲಕ ಸಲ್ಲಿಕೆ ಹೇಗೆ?
ಜೀವನ್ ಪ್ರಮಾಣ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ, ಅದರಲ್ಲಿ ಜೀವನ್ ಪ್ರಮಾಣ್ ಸೆಂಟರ್ ಮೇಲೆ ಕ್ಲಿಕ್ ಮಾಡಬೇಕು. ನೋಂದಣಿ ಮಾಡಿಕೊಂಡು, ಬಯೋಮೆಟ್ರಿಕ್ ನೀಡಿ, ಆಧಾರ್ ಸೇರಿ ಹಲವು ಮಾಹಿತಿ ನೀಡಿದರೆ, ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕ್ರಿಯೇಟ್ ಆಗುತ್ತದೆ. ಹಾಗೆಯೇ, ಟಿ ಫೋಲಿಯೋ ಆ್ಯಪ್‌ನಲ್ಲಿ ಲೈವ್ ಫೋಟೊ ತೆಗೆದುಕೊಳ್ಳುವುದು ಸೇರಿ ವಿವಿಧ ರೀತಿಯ ಮಾಹಿತಿ ನೀಡಿದರೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕ್ರಿಯೇಟ್ ಆಗುತ್ತದೆ.
ಇದನ್ನೂ ಓದಿ | Digital life certificates | ಪಿಂಚಣಿದಾರರ ಜೀವನ್ ಪ್ರಮಾಣ ಪತ್ರ ಡಿಜಿಟಲೀಕರಣಕ್ಕೆ ಕೇಂದ್ರ ಅಭಿಯಾನ