Site icon Vistara News

Rahul Gandhi: ವಾರಾಣಸಿಯಲ್ಲಿ ರಾಹುಲ್ ವಿಮಾನ ಇಳಿಸಲು ಅವಕಾಶ ನಿರಾಕರಣೆ, ಕಾಂಗ್ರೆಸ್ ಟೀಕೆ

permission Denied to land Rahul's plane at Varanasi, Congress criticizes

ನವದೆಹಲಿ: ರಾಹುಲ್ ಗಾಂಧಿ (Rahul Gandhi) ಪ್ರಯಾಣಿಸುತ್ತಿದ್ದ ಚಾರ್ಟೆಡ್ ವಿಮಾನವನ್ನು ಉತ್ತರ ಪ್ರದೇಶದ ವಾರಾಣಸಿಯಲ್ಲಿ (Varanasi) ಲ್ಯಾಂಡಿಂಗ್ ಮಾಡಲು ಉತ್ತರ ಪ್ರದೇಶ ಸರ್ಕಾರವು (Uttar Pradesh) ನಿರಾಕರಿಸಿದ ಘಟನೆ ಕಳೆದ ರಾತ್ರಿ ನಡೆದಿದೆ. ಉತ್ತರ ಪ್ರದೇಶದ ಈ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ತೀವ್ರ ಟೀಕಿಸಿದೆ.

ಪೂರ್ವ ನಿಗದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಅವರು ಚಾರ್ಟೆಡ್ ವಿಮಾನದಲ್ಲಿ ಉತ್ತರ ಪ್ರದೇಶಕ್ಕೆ ಹೊರಟಿದ್ದರು. ಅವರು ತಮ್ಮ ವಯನಾಡಿನಿಂದ ನೇರವಾಗಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಆದರೆ, ವಾರಾಣಾಸಿಯಲ್ಲಿ ಲ್ಯಾಂಡಿಂಗ್ ಮಾಡಲು ಅವಕಾಶ ದೊರೆಯಲಿಲ್ಲ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿದೆ. ಆದರೆ, ಈ ಆರೋಪವನ್ನು ನಾಗರಿಕ ವಿಮಾನಯಾನ ಸಿಬ್ಬಂದಿ ಅಲ್ಲಗಳೆದಿದೆ. ವಿಮಾನ ಲ್ಯಾಂಡಿಂಗ್‌ಗೆ ಅವಕಾಶ ನೀಡಿದ್ದರಿಂದ ಅವರು ರಾಹುಲ್ ಗಾಂಧಿ ಮರಳಿ ದೆಹಲಿಗೆ ತೆರಳಬೇಕಾಯಿತು.

ರಾಹುಲ್ ಗಾಂಧಿ ಅವರ ವಿಮಾನ ಬರುವ ಬಗ್ಗೆ ಯಾವುದೇ ಮಾಹಿತಿಯನ್ನು ಮೊದಲೇ ನೀಡಿರಲಿಲ್ಲ. ಆದರೆ, ಲ್ಯಾಂಡಿಂಗ್‌ಗೆ ಅವಕಾಶ ನೀಡಿಲ್ಲ ಎಂಬುದು ಸರಿಯಲ್ಲ ಎಂದು ವಾರಾಣಸಿ ಏರ್ಪೋರ್ಟ್ ಡೈರೆಕ್ಟರ್ ಅರ್ಮಯ್ ಸಾನ್ಯಾಲ್ ಅವರು ತಿಳಿಸಿದ್ದಾರೆ.

ಮತ್ತೊಂದು ಮೂಲಗಳ ಪ್ರಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಾರಾಣಸಿ ಭೇಟಿಯ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ವಿಮಾನಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ ಎನ್ನಲಾಗಿದೆ. ಭದ್ರತಾ ದೃಷ್ಟಿಯಿಂದ ಯಾವುದೇ ಖಾಸಗಿ ವಿಮಾನಗಳಿಗೆ ಅನುಮತಿ ಇರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸಿಕ್ಕಾಪಟೆ ಶಾಕ್​ ಆಗಿದ್ದಾರೆ, ಸಂಸತ್ತಿನಲ್ಲಿ ನನ್ನ ಯಾವ ಪ್ರಶ್ನೆಗೂ ಉತ್ತರಿಸಿಲ್ಲ ಎಂದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಮಲಾ ನೆಹರು ಟ್ರಸ್ಟ್ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಚಾರ್ಟೆಡ್ ವಿಮಾನ ಮೂಲಕ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಭಾರತ್ ಜೋಡೋ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಅವರ ವರ್ಚಸ್ಸು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ರೀತಿಯ ಆಟಗಳನ್ನು ಆಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

Exit mobile version