Site icon Vistara News

PFI Protest | ಕಣ್ಣೂರಿನ ಆರ್​ಎಸ್​ಎಸ್​ ಕಚೇರಿ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ; ಕಿಟಕಿ ಗಾಜು ಪುಡಿ

Petrol bomb hurled at RSS office In Kerala

ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಕಚೇರಿ ಮೇಲೆ ಪೆಟ್ರೋಲ್​ ಬಾಂಬ್​ ದಾಳಿಯಾಗಿದೆ. ಬೈಕ್​​ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪೆಟ್ರೋಲ್​ ಬಾಂಬ್​ ಎಸೆದು ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಆರ್​ಎಸ್​ಎಸ್​ ಕಚೇರಿಯ ಕಿಟಕಿ ಮುರಿದಿದ್ದು ಬಿಟ್ಟರೆ ಇನ್ಯಾವುದೇ ರೀತಿಯ ಹಾನಿಯೂ ಆಗಲಿಲ್ಲ. ಯಾರೂ ಗಾಯಗೊಂಡಿಲ್ಲ. ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ಪ್ರಾರಂಭ ಮಾಡಿದ್ದಾರೆ ಎಂದು ವರದಿಯಾಗಿದೆ.

ಇಂದು ಕೇರಳಾದಾದ್ಯಂತ ಪಿಎಫ್ಐ ಪ್ರತಿಭಟನೆ ನಡೆಯುತ್ತಿದೆ. ಸೆ.22ರಂದು ದೇಶಾದ್ಯಂತ ಪಿಎಫ್​ಐ ಮುಖಂಡರಿಗೆ ಸೇರಿದ ಸ್ಥಳಗಳ ಮೇಲೆ ಎನ್​ಐಎ ದಾಳಿ ಮಾಡಿತ್ತು. ಅದನ್ನು ವಿರೋಧಿಸಿ ಇಂದು ಪಿಎಫ್​ಐ ಕೇರಳ ಬಂದ್​ ಆಚರಿಸುತ್ತಿದೆ. ಬಂದ್ ನೆಪದಲ್ಲಿ ಹಿಂಸಾಚಾರ ನಡೆಸುತ್ತಿದೆ. ಮೂರ್ನಾಲ್ಕು ಬಸ್​​ಗಳು, ಕಾರು, ಆಟೋಗಳಿಗೆ ಪಿಎಫ್​ಐ ಕಾರ್ಯಕರ್ತರು ಕಲ್ಲು ಎಸೆದಿದ್ದಾರೆ. ಬೆಳಗ್ಗೆ ಇದೇ ಕಣ್ಣೂರಿನಲ್ಲಿ ಸುದ್ದಿಪತ್ರಿಕೆಗಳನ್ನು ಒಯ್ಯುತ್ತಿದ್ದ ವಾಹನವೊಂದರ ಮೇಲೆ ಕೂಡ ಪೆಟ್ರೋಲ್​ ಬಾಂಬ್​ ದಾಳಿಯಾಗಿತ್ತು.

ಇಂದು ಬೆಳಗ್ಗೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪಿಎಫ್​ಐ ಪ್ರತಿಭಟನಾಕಾರರು ಪೆಟ್ರೋಲ್ ಬಾಂಬ್​ ಎಸೆದಿದ್ದರು. ಅದರ ಬೆನ್ನಲ್ಲೇ ಈಗ ಕೇರಳದಲ್ಲಿ ಆರ್​ಎಸ್​ಎಸ್​ ಕಚೇರಿ ಮೇಲೆಯೂ ದಾಳಿಯಾಗಿದೆ. ಆದರೆ ಇದನ್ನೂ ಮಾಡಿದ್ದು ಪಿಎಫ್​ಐನವರೇನಾ? ಎಂಬುದು ಸ್ಪಷ್ಟವಾಗಿಲ್ಲ.
ಆರ್​ಎಸ್​ಎಸ್​ ಕಚೇರಿ ಮೇಲೆ ಇದೇ ವರ್ಷ ಜುಲೈ ತಿಂಗಳಲ್ಲಿ ಕೂಡ ದಾಳಿಯಾಗಿತ್ತು. ಅಂದು ದಾಳಿ ನಡೆಸಿದ್ದು ಸಿಪಿಐ (ಎಂ) ಕಾರ್ಯಕರ್ತರು ಎಂದು ಆರ್​ಎಸ್​ಎಸ್​ ನಾಯಕರು ಆರೋಪಿಸಿದ್ದರು.

ಇದನ್ನೂ ಓದಿ: PFI Protest | ಕೇರಳದಲ್ಲಿ ಬಂದ್​ ನೆಪದಲ್ಲಿ ಪಿಎಫ್​ಐ ಹಿಂಸಾಚಾರ; ಕಠಿಣ ಕ್ರಮಕ್ಕೆ ಹೈಕೋರ್ಟ್​ ಆದೇಶ

Exit mobile version