Site icon Vistara News

PFI Links | ‌ನಿಷೇಧಿತ ಪಿಎಫ್‌ಐ ಮುಖಂಡರಿಗೆ ಅಲ್‌ ಖೈದಾ, ಐಸಿಸ್‌ ಜತೆ ಲಿಂಕ್: ವಿಶೇಷ ಕೋರ್ಟ್‌ಗೆ ಎನ್‌ಐಎ ವರದಿ

pfi ban

ಕೊಚ್ಚಿ : ನಿಷೇಧಿತ ಸಂಘಟನೆ ಪಿಎಫ್‌ಐಗೆ ಅಲ್‌ ಖೈದಾ ಮತ್ತು ಐಸಿಸ್ ಜತೆಗೆ ಸಂಪರ್ಕ ಇತ್ತು ಎಂಬ ಕಳವಳಕಾರಿ ಸಂಗತಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಕೊಚ್ಚಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ (PFI Links ) ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.‌

ಪಿಎಫ್‌ಐನ ಕೇರಳ ವಲಯದ ನಾಯಕರು ಐಸಿಸ್‌ ಜತೆ ಹೊಂದಿರುವ ಸಂಪರ್ಕದ ಬಗ್ಗೆ ಮಹತ್ವದ ದಾಖಲೆಗಳನ್ನು ಕಲೆ ಹಾಕಲಾಗಿದೆ. ಬ್ಯಾನ್‌ ಆದ ಬಳಿಕವೂ ಅದರ ಸ್ಲೀಪರ್‌ ಸೆಲ್‌ಗಳು ಸಕ್ರಿಯವಾಗಿದೆ. ಪಿಎಫ್‌ಐಗೆ ಅಕ್ರಮವಾಗಿ ಹಣ ಸಂದಾಯವೂ ಆಗಿದೆ ಎಂದು ವರದಿ ಎಚ್ಚರಿಸಿದೆ.

ಸರ್ಕಾರದ ನೀತಿಗಳ ವಿರುದ್ಧ ಅಪಪ್ರಚಾರವನ್ನು ಮಾಡುವ ಮೂಲಕ ದೇಶ ವಿರೋಧಿ ಭಾವನೆಗಳನ್ನು, ದ್ವೇಷವನ್ನು ಪಿಎಫ್‌ಐ ಹರಡುತ್ತಿದೆ. ಐಸಿಸ್‌ ಮತ್ತು ಆಲ್‌ ಖೈದಾಗೆ ಭಾರತದಲ್ಲಿ ನೇರವಾಗಿ ಭಯೋತ್ಪಾದನೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇಶ ವಿರೋಧಿ ಸಂಘಟನೆಗಳ ಮೂಲಕ ಚಟುವಟಿಕೆಯನ್ನು ನಡೆಸಲು ಯತ್ನಿಸುತ್ತಿದೆ. ಈ ಬಗ್ಗೆ ಸರ್ಕಾರ ಗಮನ ನೀಡಬೇಕಾಗಿದೆ ಎಂದು ಎನ್‌ಐಎ ತಿಳಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಬಂಧನಕ್ಕೀಡಾಗಿರುವ ಪಿಎಫ್‌ಐನ 14 ನಾಯಕರ ನ್ಯಾಯಾಂಗ ಬಂಧನವನ್ನು ಮುಂದುವರಿಸಬೇಕು ಎಂದು ಎನ್‌ಐಎ ತಿಳಿಸಿದೆ.

Exit mobile version