Site icon Vistara News

MP Exit Poll: ‘ಕೈ’ನತ್ತ ವಾಲುತ್ತಿದ್ದ ಮತದಾರರನ್ನು ಸೆಳೆದ ಬಿಜೆಪಿ! ಎಕ್ಸಿಟ್ ಪೋಲ್ ಹೇಳೋದೇನು?

Photo finish result in Madhya Pradesh election, Exit Polls Predicts

ಬೆಂಗಳೂರು: 230 ಕ್ಷೇತ್ರಗಳನ್ನು ಹೊಂದಿರುವ ಮಧ್ಯ ಪ್ರದೇಶದಲ್ಲಿ (Madhya Pradesh Election) ಅಧಿಕಾರಕ್ಕೇರಲು 116 ಸ್ಥಾನ ಗೆಲ್ಲಬೇಕು. ಆದರೆ, ಈಗ ಪ್ರಕಟವಾಗಿರುವ ಮತಗಟ್ಟೆ ಸಮೀಕ್ಷೆಗಳ ಪ್ರಕಾರ(Exit Polls Result 2023) ಫೋಟೋ ಫಿನಿಷ್ (Photo Finish) ಆಗುವ ಸಾಧ್ಯತೆಗಳಿವೆ. ಚುನಾವಣೆ ಘೋಷಣೆ ಮುನ್ನ ಕಾಂಗ್ರೆಸ್ (Congress Party) ಎಲ್ಲ ರೀತಿಯಿಂದಲೂ ಮುಂದಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಭಾರತೀ ಜನತಾ ಪಾರ್ಟಿ (BJP Party) ಪ್ರಕಟಿಸಿದ ಕೆಲವು ಯೋಜನೆಗಳು ಆಚೆ ಹೋಗುತ್ತಿದ್ದ ಮತದಾರರನ್ನು ಸೆಳೆಯಲು ಯಶಸ್ವಿಯಾಗಿದೆ ಎಂಬುದು ವೇದ್ಯವಾಗುತ್ತಿದೆ(MP Exit Poll).

ದೈನಿಕ್ ಭಾಸ್ಕರ್ ಎಕ್ಸಿಕ್ಟ ಪೋಲ್ ಪ್ರಕಾರ, ಬಿಜೆಪಿ 95ರಿಂದ 115 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ಗೆ 105ರಿಂದ 120 ದೊರೆಯಲಿವೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 102ರಿಂದ 125 ಮತ್ತು ಬಿಜೆಪಿ100ರಿಂದ 123 ಹಾಗೂ ರಿಪಬ್ಲಿಕ್ ಟಿವಿಯ ಪ್ರಕಾರ, ಕಾಂಗ್ರೆಸ್ 97ರಿಂದ 107 ಮತ್ತು ಬಿಜೆಪಿ 118ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ. ಟಿವಿ9 ಭರತವರ್ಷದ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 106ರಿಂದ 116 ಮತ್ತು ಕಾಂಗ್ರೆಸ್ 111ರಿಂದ 117ಕ್ಷೇತ್ರಗಳನ್ನು ಗೆಲ್ಲಲಿದೆ.

ಈವರೆಗೆ ಪ್ರಕಟವಾಗಿರುವ ಎಕ್ಸಿಟ್‌ ಪೋಲ್ಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸಿವೆ. 15 ವರ್ಷಕ್ಕೂ ಹೆಚ್ಚು ಅವಧಿಗೆ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ತಟ್ಟಿರುವ ಸಂಗತಿ ವ್ಯಕ್ತವಾಗಿದೆ. ಹಾಗಂತ, ಬಿಜೆಪಿಯ ವಿರುದ್ಧ ಮತದಾರರು ಸಂಪೂರ್ಣ ತಿರಾಸ್ಕಾರವನ್ನು ತೋರಿಲ್ಲ ಎಂಬುದು ಗೊತ್ತಾಗುತ್ತದೆ. ಮತದಾರರು ಗೊಂದಲದಲ್ಲಿರುವುದು ಪಕ್ಕಾ ಆಗಿದೆ. ಹಾಗಾಗಿ, ಭಾನುವಾರ ಫಲಿತಾಂಶದ ದಿನ ಒಂಚೂರು ಅಚ್ಚರಿಯನ್ನು ನಿರೀಕ್ಷಿಸಬಹುದಾಗಿದೆ.

ಮಧ್ಯ ಪ್ರದೇಶದಲ್ಲಿ ದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಈ ಬಾರಿ ತುಸು ಹಿನ್ನಡೆಗೆ ಸರಿಸಿದ್ದು, ಕೂಡ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಚುನಾವಣೆ ನಡೆಯುವ ಆರು ತಿಂಗಳ ಮುಂಚೆ ಮತದಾರರು ಸಂಪೂರ್ಣ ಒಲವು ಕಾಂಗ್ರೆಸ್ ಪರವಾಗಿತ್ತು ಎನ್ನಲಾಗಿದೆ. ಕೊನೆ ಗಳಿಗೆಯಲ್ಲಿ ಎಂಪಿ ಸಿಎಂ ಪ್ರಕಟಿಸಿದ ಉಚಿತ ಕೊಡುಗೆಗಳು ಮತದಾರರನ್ನು ಬಿಜೆಪಿಯತ್ತ ಎಳೆದು ತಂದಿರುವ ಸಾಧ್ಯತೆ ಇದೆ. ಅದರಲ್ಲೂ ಮಹಿಳಾ ಮತದಾರರನ್ನು ಸೆಳೆಯಲು ಕಾರಣವಾಗಿದ್ದೇ, ಫೋಟೋ ಫಿನಿಶ್ ಫಲಿತಾಂಶಕ್ಕೆ ಕಾರಣವಾಗಬಹುದು.

Exit mobile version