ನವದೆಹಲಿ: ಎರಡು ದಿನಗಳ ಹಿಂದಷ್ಟೇ ವಾಟ್ಸ್‌ಆ್ಯಪ್ ಸರ್ವರ್ ಡೌನ್ ಆಗಿ ಕೋಟ್ಯಂತರ ಜನ ಸಂದೇಶ ರವಾನಿಸಲು, ಫೋಟೊ, ವಿಡಿಯೊ ಕಳುಹಿಸಲು ತೊಂದರೆ ಅನುಭವಿಸಿದ್ದರು. ಈಗ ಫೋಟೊ ಹಾಗೂ ವಿಡಿಯೊ ಶೇರಿಂಗ್ ಜಾಲತಾಣ ‘ಇನ್‌ಸ್ಟಾಗ್ರಾಂ’ ಸಹ ಡೌನ್ (Instagram Down) ಆಗಿದ್ದು, ಫೋಟೊ, ಪೋಸ್ಟ್, ರೀಲ್ಸ್‌ಗಳಿಲ್ಲದೆ ಜನ ಪೇಚಾಟಕ್ಕೆ ಸಿಲುಕಿದ್ದಾರೆ.
ಜಗತ್ತಿನಾದ್ಯಂತ ಇನ್‌ಸ್ಟಾಗ್ರಾಂ ಡೌನ್ ಆಗಿರುವ ಕುರಿತು ಮಾಹಿತಿ ಇಲ್ಲ. ಆದರೆ, ಭಾರತ, ಬ್ರಿಟನ್ ಸೇರಿ ಹಲವೆಡೆ ಇನ್‌ಸ್ಟಾಗ್ರಾಂ ಡೌನ್ ಆಗಿರುವ ಕುರಿತು ಜನ ಜಾಲತಾಣದಲ್ಲಿ ದೂರಿದ್ದಾರೆ. ಅದರಲ್ಲೂ, ಬ್ರಿಟನ್‌ನಲ್ಲಿ ಹೆಚ್ಚಿನ ಜನ ಈ ಸಮಸ್ಯೆ ಕುರಿತು ಟ್ವಿಟರ್‌ನಲ್ಲಿ ದೂರಿದ್ದಾರೆ. ಬ್ರಿಟನ್‌ನ 1,500 ಮಂದಿ ಇನ್‌ಸ್ಟಾಗ್ರಾಂ ಡೌನ್ ಕುರಿತು ಟ್ವೀಟ್ ಮಾಡಿದ್ದಾರೆ. ಸ್ಟೋರಿಗಳನ್ನು ನೋಡಲು ಆಗದ ಕುರಿತು ಹೆಚ್ಚಿನ ಜನ ದೂರಿದ್ದಾರೆ.
ಕಳೆದ ಮಂಗಳವಾರ ಎರಡು ಗಂಟೆ ವಾಟ್ಸ್‌ಆ್ಯಪ್ ಡೌನ್ ಆಗಿದ್ದು ಕೋಟ್ಯಂತರ ಜನರಿಗೆ ತೊಂದರೆಯಾಗಿತ್ತು. ಈ ಕುರಿತು ಇದುವರೆಗೆ ಇನ್‌ಸ್ಟಾಗ್ರಾಂನಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂಗೆ ಮೆಟಾ ಮಾತೃಸಂಸ್ಥೆಯಾಗಿದೆ.
ಇದನ್ನೂ ಓದಿ | WhatsApp Down | ವಾಟ್ಸ್ಆ್ಯಪ್‌ಗೆ ‘ಗ್ರಹಣ’! ಪರದಾಡುತ್ತಿರುವ ಬಳಕೆದಾರರು