ನವದೆಹಲಿ: ಓದು, ಅಧ್ಯಯನ, ಸಂಶೋಧನೆಗಳಿಗಿಂತ ಗದ್ದಲ, ಗಲಾಟೆ, ಸಂಘರ್ಷದಿಂದಲೇ ದೇಶಾದ್ಯಂತ ಸುದ್ದಿಯಲ್ಲಿರುವ ದೆಹಲಿಯ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಮತ್ತೆ ಗಲಾಟೆ (JNU Clash) ನಡೆದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ವಿವಿ ಕ್ಯಾಂಪಸ್‌ನಲ್ಲಿ ಅಳವಡಿಸಿದ ಛತ್ರಪತಿ ಶಿವಾಜಿ ಅವರ ಭಾವಚಿತ್ರಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಇದು ಎಬಿವಿಪಿ ಹಾಗೂ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆಯಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಬಾಂಬೆ ಐಐಟಿಯಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ರ‍್ಯಾಲಿ ನಡೆಸುವಾಗ ಎಬಿವಿಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಜೆಎನ್‌ಯುಎಸ್‌ಯು ಮುಖಂಡರು ಆರೋಪಿಸಿದ್ದಾರೆ.
ಗಲಾಟೆಯ ಚಿತ್ರಣ
ಇದಕ್ಕೆ ಎಬಿವಿಪಿ ತಿರುಗೇಟು ನೀಡಿದ್ದು, ಶಿವಾಜಿ ಮಹಾರಾಜರ ಫೋಟೊಗಳನ್ನು ಧ್ವಂಸಗೊಳಿಸುವ ಮೂಲಕ ವಿದ್ಯಾರ್ಥಿ ಒಕ್ಕೂಟವು ಶಿವಾಜಿ ಅವರಿಗೆ ಅವಮಾನ ಮಾಡಿದೆ ಎಂದು ದೂರಿದೆ. ಇದರಿಂದಾಗಿ, ಎರಡೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ, ಜೆಎನ್‌ಯುನಲ್ಲಿ ಬಿಬಿಸಿ ಡಾಕ್ಯುಮೆಂಟರಿ ವೀಕ್ಷಣೆ ವಿಚಾರಕ್ಕೆ ಕಲ್ಲುತೂರಾಟ ನಡೆದಿತ್ತು.
ಇದನ್ನೂ ಓದಿ: BBC Documentary On Modi: ಜೆಎನ್‌ಯುನಲ್ಲಿ ಬಿಬಿಸಿ ಡಾಕ್ಯುಮೆಂಟರಿ ವೀಕ್ಷಣೆ ವೇಳೆ ಪವರ್ ಕಟ್, ಕಲ್ಲು ತೂರಿ ಗಲಾಟೆ