ಮುಂಬೈ: ಸಲ್ಮಾನ್ ಖಾನ್(Salman Khan) ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮೇಕ್ ಅಪ್ ಆರ್ಟಿಸ್ಟ್ (Makeup Artist) ಪಾಳೇಶ್ವರ್ ಚವಾಣ್ (Paleshwar Chavan) ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ(Physical Assault). ಮೇಕ್ ಅಪ್ ಆರ್ಟಿಸ್ಟ್ ಆಗಿರುವ ಪಾಳೇಶ್ವರ್ ಚವಾಣ್ ಅವರು ಸಲ್ಮಾನ್ ಖಾನ್‌ಗೆ ತೀರಾ ಹತ್ತಿರದ ವ್ಯಕ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಅವರು ನಿರ್ಮಾಣ ಸಂಸ್ಥೆಯು ಮೂವರು ಅಪರಿಚಿತರದ ವಿರುದ್ಧ ದೂರು ದಾಖಲಿಸಿದೆ. ಬಾರ್ ಮ್ಯಾನೇಜರ್‌ರೊಬ್ಬರಿಗೆ ಪಾಳೇಶ್ವರ್ ಸಾಲ ನೀಡಿದ್ದರು. ಈ ಹಣ ವಾಪಸ್ ನೀಡುವಂತೆ ಕೇಳು ಹೋದಾಗ ಈ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
32 ವರ್ಷದ ಚವಾಣ್ ಸಾಂತಾಕ್ರೂಜ್ (ಪೂರ್ವ)ದಲ್ಲಿ ಮೇಕಪ್ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಡಿ.12ರಂದು ರಾತ್ರಿ 10.30ಕ್ಕೆ ಸಾಂತಾಕ್ರೂಜ್ ಪೂರ್ವದಲ್ಲಿರುವ ಪುಷ್ಪಕ್ ಬಾರ್‌ಗೆ ಹೋಗಿ ಬಾರ್ ಮ್ಯಾನೇಜರ್ ಸತೀಶ್ ಶೆಟ್ಟಿ ಬಳಿ ಸಾಲ ಪಡೆದ ಹಣವನ್ನು ಯಾವಾಗ ಹಿಂದಿರುಗಿಸುತ್ತೀರಿ ಎಂದು ಕೇಳಿದ್ದಾರೆ. ಮ್ಯಾನೇಜರ್, ಸ್ವಲ್ಪ ಸಮಯ ಕಾಯಲು ಪಾಳೇಶ್ವರ್‌ಗೆ ಹೇಳಿದ್ದಾನೆ. ಆದರೆ, ಮಧ್ಯ ರಾತ್ರಿ ಒಂದು ಗಂಟೆಯಾದರೂ ಹಣವನ್ನು ನೀಡಿಲ್ಲ. ಅಲ್ಲದೇ, ಒಂದು ಗಂಟೆಯಾಗಿದೆ, ಬಾರ್ ಮುಚ್ಚಬೇಕು ಎಂದು ಚವಾಣ್‌ಗೆ ಮ್ಯಾನೇಜರ್ ತಿಳಿಸಿದ್ದಾನೆ. ಆಗ ಇಬ್ಬರು ಹೊರಗೆ ಬಂದಿದ್ದಾರೆ ಮತ್ತು ಇಬ್ಬರ ಮಧ್ಯೆ ಜಗಳ ನಡೆದಿದೆ. ಮ್ಯಾನೇಜರ್ ತನ್ನ ಸ್ನೇಹಿತ, ಬಾರ್‌ನ ವೇಟರ್ (30) ಮತ್ತು ವಾಚ್‌ಮನ್ (35) ಅವರನ್ನು ಕರೆದು ಚವಾಣ್ ಮೇಲೆ ಕಬ್ಬಿಣದ ರಾಡ್ ಮತ್ತು ಇಟ್ಟಿಗೆಯಿಂದ ಹಲ್ಲೆ ಮಾಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದೈಹಿಕ ಹಲ್ಲೆ ಸಂದರ್ಭದಲ್ಲಿ ಚವಾಣ್ ಅವರು ಚಿನ್ನದ ಸರ, ಎರಡು ಲಾಕೆಟ್‌ಗಳು ಮತ್ತು ರುದ್ರಾಕ್ಷ ಮಾಲೆ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಚಿಕಿತ್ಸೆಗಾಗಿ ವಿ.ಎನ್.ದೇಸಾಯಿ ಆಸ್ಪತ್ರೆಗೆ ಅವರನ್ನು ಸಾಗಿಸಿದ್ದಾರೆ. ತರುವಾಯ, ಚವಾಣ್ ಅವರು ಡಿಸೆಂಬರ್ 11 ರಂದು ವಕೋಲಾ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324 ಮತ್ತು 34 ಅಡಿಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ಬಾರ್ ಮ್ಯಾನೇಜರ್ ಸತೀಶ್ ಶೆಟ್ಟಿ ನನ್ನ ಸ್ನೇಹಿತ. ಈ ಹಿಂದೆ ನಾನು ಆತನಿಗೆ ಸಾಲ ನೀಡಿದ್ದೆ ಮತ್ತು ವಾಪಸ್ ನೀಡಿದ್ದ. ಅದೇ ನಂಬಿಕೆಯಿಂದ ನಾನು ಮತ್ತೆ ಆತನಿಗೆ ಮೂರು ಲಕ್ಷ ರೂ. ಸಾಲ ನೀಡಿದೆ. ಆದರೆ, ಆ ಸಾಲವನ್ನು ಹಿಂದಿರುಗಿಸಲಿಲ್ಲ. ಸಾಲ ಕೇಳಿದ್ದಕ್ಕೆ ಐದಾರು ಜನರು ಹೊಡೆದರು. ಪರಿಣಾಮ 8 ಹೊಲಿಗೆ ಹಾಕಲಾಗಿದೆ ಎಂದು ಪಾಳೇಶ್ವರ್ ಚವಾಣ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Tiger 3 box office collection: ಸಲ್ಮಾನ್ ಖಾನ್ -ಕತ್ರಿನಾ ಚಿತ್ರ ಟೈಗರ್ 3 ಮೊದಲ ದಿನದ ಕಲೆಕ್ಷನ್ ಎಷ್ಟು?