ನವದೆಹಲಿ: ಸಾಮಾಜಿಕ ಜಾಲತಾಣಗಳ ಯುಗದಲ್ಲಿ ನಕಲಿ ಸುದ್ದಿಗಳನ್ನು ಬಿತ್ತರಿಸುವ ಜಾಲತಾಣಗಳು, ಯುಟ್ಯೂಬ್ ಚಾನೆಲ್‌ಗಳು ಹೆಚ್ಚಿವೆ. ಹಾಗಾಗಿ, ನಕಲಿ ಸುದ್ದಿಗಳ ಪ್ರಸಾರದ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದ್ದು, ಇದಕ್ಕಾಗಿ ಪಿಐಬಿ ಫ್ಯಾಕ್ಟ್ ಚೆಕ್ (Fact Check) ಘಟಕವು ನಿರಂತರವಾಗಿ ಕೆಲಸ ಮಾಡುತ್ತಿದೆ. ಪಿಐಪಿ ಫ್ಯಾಕ್ಟ್ ಚೆಕ್ ಈಗ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ಆರು ಯುಟ್ಯೂಬ್ ಚಾನೆಲ್‌ಗಳನ್ನು ಗುರುತಿಸಿದೆ.
ದೇಶದಲ್ಲಿ ನಡೆಯುವ ಚುನಾವಣೆಗಳು, ಭಾರತದ ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿನಲ್ಲಿನ ಪ್ರಕ್ರಿಯೆಗಳು, ಕೇಂದ್ರ ಸರ್ಕಾರದ ಕಾರ್ಯಚಟುವಟಿಕೆಗಳು ಸೇರಿ ಹಲವು ವಿಷಯಗಳ ಕುರಿತು ಆರೂ ಚಾನೆಲ್‌ಗಳು ನಕಲಿ ಮಾಹಿತಿ ನೀಡಿವೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಿಳಿಸಿದೆ.
ಆರೂ ಚಾನೆಲ್‌ಗಳು ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳನ್ನು ಹಾಗೂ ವಿಡಿಯೊಗಳು ಕೋಟ್ಯಂತರ ವೀಕ್ಷಣೆಗಳನ್ನು ಕಂಡಿರುವ ಕಾರಣ ಹೆಚ್ಚಿನ ಜನರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಹಾಗಾಗಿ, ಪಿಐಬಿ ಫ್ಯಾಕ್ಟ್ ಈ ಚಾನೆಲ್‌ಗಳ ಕುತಂತ್ರವನ್ನು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದೆ.
ಇದನ್ನೂ ಓದಿ | Fact Check | ಹೊಸ ನೋಟುಗಳ ಮೇಲೆ ಬರೆದರೆ, ಗೀಚಿದರೆ ಅವು ಅಮಾನ್ಯವೇ? ಇಲ್ಲಿದೆ ನಿಜಾಂಶ